ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

127ಕ್ಕೂ ಹೆಚ್ಚು ನಾಮಪತ್ರ ಸಲ್ಲಿಕೆ

ಮಡಿಕೇರಿ ನಗರಸಭೆ 23 ವಾರ್ಡ್‌ಗಳಿಗೆ ಚುನಾವಣೆ
Last Updated 12 ಡಿಸೆಂಬರ್ 2013, 6:00 IST
ಅಕ್ಷರ ಗಾತ್ರ

ಮಡಿಕೇರಿ: ನಗರಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಬುಧವಾರ 23 ವಾರ್ಡ್‌ಗಳಿಗೆ 108 ನಾಮಪತ್ರಗಳು ಸಲ್ಲಿಕೆಯಾಗಿವೆ. ಕಾಂಗ್ರೆಸ್‌–17, ಬಿಜೆಪಿ–23, ಜೆಡಿಎಸ್‌– 20, ಸಮಾಜವಾದಿ ಪಕ್ಷ–19, ಎಸ್‌ಡಿಪಿಐ–13, ಸಿಪಿಎಂ–1 ಹಾಗೂ ಪಕ್ಷೇತರ–15 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು.

ಇದಕ್ಕೂ ಮುಂಚೆ ಸೋಮವಾರ 9, ಮಂಗಳವಾರ 10 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಒಟ್ಟು ನಗರಸಭೆಯ 23 ವಾರ್ಡ್‌ಗಳಿಗೆ 127ಕ್ಕೂ ಹೆಚ್ಚು               ನಾಮಪತ್ರಗಳು ಸಲ್ಲಿಕೆಯಾಗಿವೆ.

ನಾಮಪತ್ರ ಸಲ್ಲಿಸಲು ಎಂಟು ದಿನಗಳ ಸಮಯವನ್ನು (ಡಿ. 4ರಿಂದ ಡಿ. 11ವರೆಗೆ) ಚುನಾವಣಾ ಆಯೋಗ ನೀಡಿದ್ದರೂ ಉತ್ತಮ ದಿನ, ರಾಹುಕಾಲ ಎಂದೆಲ್ಲ ನೋಡಿಕೊಂಡ ಬಹುತೇಕ  ಅಭ್ಯರ್ಥಿಗಳು ಕೊನೆಯ ದಿನವೇ ನಾಮಪತ್ರ ಸಲ್ಲಿಸಲು ಬಂದಿದ್ದರಿಂದ ನೂಕುನೂಗ್ಗಲು, ಬಿಗುವಿನ ವಾತಾವರಣ ಉಂಟಾಗಿತ್ತು.

ತಮ್ಮ ಪಕ್ಷಗಳ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಪ್ರಮುಖ ಮುಖಂಡರು, ಹಾಜರಿದ್ದರು. ಬೆಳಿಗ್ಗೆ ಬಿಜೆಪಿ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಶಾಸಕ ಅಪ್ಪಚ್ಚು ರಂಜನ್‌, ಪಕ್ಷದ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಸುನೀಲ್‌ ಸುಬ್ರಮಣಿ ಹಾಗೂ ಜಿಲ್ಲಾ ಘಟಕದ ಅಧ್ಯಕ್ಷ ಸುಜಾ ಕುಶಾಲಪ್ಪ ಹಾಜರಿದ್ದರು.

ಕಾಂಗ್ರೆಸ್‌ ಪಕ್ಷದ ಮಡಿಕೇರಿ ಬ್ಲಾಕ್‌ ಅಧ್ಯಕ್ಷ ಕೆ.ಎಂ. ಗಣೇಶ್‌ ಅವರ ನೇತೃತ್ವದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು.

ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ವಿ.ಪಿ. ಶಶಿಧರ್‌ ಅವರ ನೇತೃತ್ವದಲ್ಲಿ ಅವರ ಪಕ್ಷದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ಸಮಾಜವಾದಿ ಪಕ್ಷದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಗೂಳಿಹಟ್ಟಿ ಶೇಖರ್‌ ಅವರ ನೇತೃತ್ವದಲ್ಲಿ ಪಕ್ಷದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಕೆ ವೇಳೆ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ತಡೆಯಲು ನಗರಸಭೆಯ ಸುತ್ತಮುತ್ತ ಬಿಗಿ ಪೊಲೀಸ್‌ ಬಂದೋಬಸ್ತ್‌ ಕಲ್ಪಿಸಲಾಗಿತ್ತು.

ವಿವಿಧ ಪಕ್ಷಗಳ ಅಭ್ಯರ್ಥಿಗಳು
ಕಾಂಗ್ರೆಸ್‌
1– ದಿವ್ಯಾ ನಂಜಪ್ಪ, 2– ಕನ್ನಂಡ ಕವಿತಾ, 3–ಕನ್ನಂಡ ಸುನೀತಾ ಸಂಪತ್‌, 4–ಸುರೈಯಾ, 5– ಕೆ.ಇ. ಮ್ಯಾಥ್ಯು, 6– ತಜಸೋಮ ಇಲಿಯಾಸ್‌, 7– ಶೇಷಮ್ಮ ಲೀಲಾ, 8–ಕೆ.ಎಂ. ಗಣೇಶ್‌, 9– ಸ್ವರ್ಣಲತಾ, 10– ಪ್ರಕಾಶ್‌ ಆಚಾರ್ಯ, 11– ಶ್ರೀಮತಿ ಬಂಗೇರಾ, 12– ಜುಲೇಕಾಬಿ, 13– ಸಿ.ಜಿ. ಚೆಂಗಪ್ಪ, 14– ಗೋಪಾಲಕೃಷ್ಣ, 15– ಎಚ್‌.ಎಂ. ನಂದಕುಮಾರ್‌, 16– ಕೆ.ಎಸ್‌. ಕಾವೇರಮ್ಮ, 17– ಕೆ.ವೀಣಾಕ್ಷಿ, 18– ಅಂಬೆಕಲ್‌ ನವೀನ್‌ ಕುಶಾಲಪ್ಪ, 19– ಎಂ.ವಿ. ಲೋಕೇಶ್‌, 20–ಅನಿತಾ, 21– ಎ.ಸಿ. ಚುಮ್ಮಿ ದೇವಯ್ಯ, 22– ಕೆ.ಯು. ಅಬ್ದುಲ್‌ ರಜಾಕ್‌, 23– ಟಿ.ಎಂ.ಅಯ್ಯಪ್ಪ

ಬಿಜೆಪಿ
1– ಐ.ಜಿ. ಶಿವಕುಮಾರಿ, 2– ಅನಿತಾ ಪೂವಯ್ಯ, 3– ಸವಿತಾ ರಾಕೇಶ್‌, 4– ಶುಭಾ ವಿಶ್ವನಾಥ್‌, 5– ಮಹೇಶ್‌ ಜೈನಿ, 6– ಕಲಾವತಿ, 7– ಶಾರದಾ ನಾಗರಾಜ್‌, 8– ಮೊಂತಿ ಗಣೇಶ್‌, 9– ಲಕ್ಷ್ಮೀ, 10– ಉಮೇಶ್ ಸುಬ್ರಮಣಿ, 11– ಪ್ರತಿಭಾ ಶೆಟ್ಟಿ, 12– ಎಂ.ಚಂದ್ರಾವತಿ, 13– ಪಿ.ಡಿ. ಪೊನ್ನಪ್ಪ, 14– ಟಿ.ಎಸ್‌. ಪ್ರಕಾಶ್‌, 15– ಎಚ್‌.ಬಿ. ವಿಜಯಕುಮಾರ್‌, 16– ಮಿನಾಜ್‌ ಫಾತಿಮಾ, 17– ಬಿ.ಡಿ. ಪುಷ್ಪವೇಣಿ, 18– ಪಿ.ಟಿ. ಉನ್ನಿಕೃಷ್ಣ, 19– ಕೆ.ಎಸ್‌. ರಮೇಶ್‌, 20– ಎನ್‌. ಕನ್ನಿಕೆ, 21– ಕೆ.ಆರ್‌. ಧರ್ಮಪಾಲ, 22– ಸಯ್ಯದ್‌ ಯೂಸೂಫ್‌, 23– ಬಿ.ಎಸ್‌. ಪ್ರಶಾಂತ್‌ಕುಮಾರ್‌

ಜೆಡಿಎಸ್‌
1– ಶೈಲಜಾ ಮೊಣ್ಣಪ್ಪ, 2– ಯೋಗೀತಾ ನಿರಂಜನ್‌, 3– ಗೀತಾಂಜಲಿ, 4–ಅಮೀನಾ, 5– ರಾಜೇಶ್‌ ಯಲ್ಲಪ್ಪ, 6– ಸಲ್ಮಾ, 7– ಪಾರ್ವತಿ, 8– ಮಂಜುನಾಥ್‌, 10–ಮುನೀರ್‌ ಅಹ್ಮದ್‌, 11– ಭವಾನಿ ಕೆಂಚಪ್ಪ, 12– ಬಿ.ಎಸ್‌. ಜಯಾ, 13– ಯಾಲದಾಳು ಯಾದವ್‌, 14– ಕೆ.ಕೆ. ಯಶವಂತ್‌, 15– ಎಚ್‌.ಆರ್‌. ರವಿ, 16– ಬಿ.ಆರ್‌. ಸರಿತಾ ವಿನೋದ್‌, 17– ಬಿ.ಆರ್‌. ರಾಧಿಕಾ, 18– ಎಚ್‌.ಎಸ್‌. ಉಮೇಶ್‌, 19– ಕೆ.ಯು. ಅಶ್ರಫ್‌, 20– ಸಂಗೀತಾ ಪ್ರಸನ್ನ, 21– ಎನ್‌.ಎಸ್‌. ದಿನೇಶ್‌ಕುಮಾರ್‌, 22– ಸುಲೈಮಾನ್‌, 23– ಬಶೀರ್‌ ಅಹಮ್ಮದ್‌.

ಸಮಾಜವಾದಿ ಪಕ್ಷ
12– ಕೆ.ಜಿ. ನಿರ್ಮಲಾ, 13– ಕೆ.ಎ. ಅಪ್ಪಯ್ಯ, 14– ಎಂ.ಎಂ. ಇಸ್ಮಾಯಿಲ್‌, 15– ಎಚ್‌.ಎನ್‌. ಯೋಗೇಶ್‌ಕುಮಾರ್‌, 17– ಜಿ.ಡಿ. ಗಂಗಮ್ಮ, 18– ಆರ್‌.ಸುರೇಶ್‌, 20– ವಿ.ಕೆ. ಸಾವಿತ್ರಿ, 21– ಐ.ಕೆ. ಗಂಗಾಧರ್‌, 22– ಮುನೀರ್‌, 23– ಕೆ.ಜಮೀರ್‌.

ಎಸ್‌ಡಿಪಿಐ
2– ಫ್ಲೋರಾ ಕ್ರಾಸ್ಟಾ, 3– ಹಸೀನಾ ಬಾನು, 4– ಲೀಮಾ, 5– ಪೀಟರ್‌ ಕೆ.ಜಿ, 6– ನಫೀಜಾ, 8– ಎಂ.ಎ.ಫಜಲುಲ್ಲಾ, 10– ಎನ್‌.ಎಫ್‌. ಬಷೀರ್‌ ಅಹಮದ್‌, 22– ಅಮೀನ್‌ ಮೊಹಿಸಿನ್‌/ ಫಜಲುಲ್ಲಾ, 23– ಮನ್ಸೂರ್‌/ ಖಲೀಲ್‌.

ಸಿಪಿಐ(ಎಂ)
15–ಎಸ್‌.ಆರ್. ಶಶಿಕಿರಣ್‌

ಪಕ್ಷೇತರ
3– ಶ್ರೀದೇವಿ, 8– ಕೆ.ಟಿ. ಬೇಬಿ ಮ್ಯಾಥ್ಯು, 13– ಜಿ.ಎಂ. ಸತೀಶ್‌ ಪೈ, 13– ಬಾಬು, 14– ಎ.ಆರ್‌. ಮಂಜುನಾಥ್‌, 14– ಕೆ.ಜಿ. ಹರೀಶ್‌, 15– ಎಚ್‌.ಸಿ. ಸತೀಶ್‌, 15– ಎಚ್‌.ಎ. ರವಿಕುಮಾರ್‌, 16–ಕೆ.ಡಿ. ವಿಮಲಾ, 18– ಆರ್‌. ರಾಮು, 18–ಸಾರ್ಜೆಂಟ್‌ ಇಮ್ಯಾನುವೆಲ್‌, 19– ಪಿ.ಜಿ. ಮಂಜುನಾಥ್‌, 22– ವಿ.ಪ್ರಕಾಶ್‌ ಪೈ, 22– ಕೆ.ಎಂ. ಚೇತನ್‌, 23– ಎಚ್‌.ಪಿ. ಹರೀಶ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT