ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

13 ಜನರ ಕೊಂದು ಆತ್ಮಹತ್ಯೆ

Last Updated 9 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ವೆಲಿಕಾ ಇವಾನ್ಕಾ, ಸೈಬೀರಿಯಾ (ಎಪಿ): 60 ವರ್ಷದ ವ್ಯಕ್ತಿಯೊಬ್ಬ ತನ್ನ ತಾಯಿ, ಪತ್ನಿ, ಮಗ,  ಸಂಬಂಧಿಕರ ಎರಡೂವರೆ ವರ್ಷದ ಮಗು ಸೇರಿದಂತೆ 13 ಜನರನ್ನು ಗುಂಡಿಟ್ಟು ಹತ್ಯೆ ಮಾಡಿದ ನಂತರ ತಾನು ಸಹ ಗುಂಡು ಹೊಡೆದುಕೊಂಡು ಸತ್ತ ದಾರುಣ ಘಟನೆ ಇಲ್ಲಿ ನಡೆದಿದೆ.

ಜುಬಿಸಾ ಬೊಗ್ದಾನೊವಿಕ್ ಎಂಬ ವ್ಯಕ್ತಿ ಬಂದೂಕಿನಿಂದ ತನ್ನ ಕುಟುಂಬದ ಸದಸ್ಯರು ಮತ್ತು ಅಕ್ಕಪಕ್ಕದ ಐದು ಮನೆಗಳಲ್ಲಿ ಇದ್ದವರ ಮೇಲೆ ಮನಬಂದಂತೆ ಗುಂಡು ಹಾರಿಸಿ ಹತ್ಯೆ ಮಾಡಿದ ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಬೆಳಗಿನ ಜಾವ ಸುಮಾರು 5 ಗಂಟೆಗೆ ಈ ದುರ್ಘಟನೆ ನಡೆದಿದ್ದು, 12 ಜನರು ಸ್ಥಳದಲ್ಲೇ ಸತ್ತಿದ್ದಾರೆ ಮತ್ತು ಒಬ್ಬ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT