ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

140 ಕೆ.ಜಿ ‘ಪೇಡಾ’ ತುಲಾಭಾರ ಸೇವೆ

Last Updated 16 ಸೆಪ್ಟೆಂಬರ್ 2013, 10:43 IST
ಅಕ್ಷರ ಗಾತ್ರ

ರಾಯಚೂರು: ಹುಬ್ಬಳ್ಳಿ ಭವಾನಿನಗರ­ದಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಶಾಖಾ ಮಠದ ಭಕ್ತಾದಿಗಳು ಶ್ರೀ ಕ್ಷೇತ್ರ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿ ಶ್ರೀ ಸುಯತೀಂದ್ರ ತೀರ್ಥ ಸ್ವಾಮೀಜಿ ಹಾಗೂ ಉತ್ತರಾಧಿಕಾರಿ ಸುಬು­ಧೇಂದ್ರತೀರ್ಥ ಸ್ವಾಮೀಜಿಗಳಿಗೆ ಧಾರವಾಡ ‘ಮಿಶ್ರಾ’ ಪೇಡಾದಿಂದ ತುಲಾಭಾರವನ್ನು ಶನಿವಾರ ನೆರವೇರಿಸಿದರು.

ಹುಬ್ಬಳ್ಳಿಯ ಶ್ರೀರಂಗ ಹನುಮ­ಸಾಗರ ಕುಟುಂಬ ವರ್ಗದವರು ಹಾಗೂ ಅರುಣ್‌ ಅಪರಂಜಿ ಕುಟುಂಬ­ದವರು ಮಂತ್ರಾಲಯ ಮಠದ ಪೀಠಾಧಿಪತಿ ಸುಯತೀಂದ್ರತೀರ್ಥರ ಹಾಗೂ ಉತ್ತರಾಧಿಕಾರಿ ಸುಬುಧೇಂದ್ರ ತೀರ್ಥರಿಗೆ 120ರಿಂದ 140 ಕೆ.ಜಿ ಭಾರದ ಧಾರವಾಡ ಮಿಶ್ರಾ ಪೇಡಾ, ಧಾನ್ಯ ಹಾಗೂ ಬೆಲ್ಲದಿಂದ ತುಲಾಭಾರ ಸೇವೆ ನೆರವೇರಿಸಿದರು.

ತುಲಾಭಾರ ಕಾರ್ಯಕ್ರಮದಲ್ಲಿ ಶ್ರೀಮಠದ ಹಿರಿಯ ವಿದ್ವಾಂಸರಾದ ರಾಜಾ ಗಿರಿಯಾಚಾರ್ಯ, ಗುರು­ಪೀಠದ ಅಧ್ಯಾಪಕರು ಹಾಗೂ ಶ್ರೀಮಠದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT