ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2 ಜಿ ತೀರ್ಪಿನದ್ದು ದೂರಗಾಮಿ ಪರಿಣಾಮ: ಸಿಬಲ್ ಕಳವಳ

Last Updated 20 ಫೆಬ್ರುವರಿ 2012, 9:50 IST
ಅಕ್ಷರ ಗಾತ್ರ

ನವದೆಹಲಿ, (ಪಿಟಿಐ): ~ಮೊದಲು ಬಂದವರಿಗೆ ಮೊದಲ ಆದ್ಯತೆ~ ನಿಯಮದ ಆಧಾರದ ಮೇಲೆ ನೀಡಿದ 2ಜಿ ತರಂಗಾಂತರ ಹಂಚಿಕೆಗಳನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದ ಕ್ರಮ, ಗಣಿಗಾರಿಕೆ ಸೇರಿದಂತೆ ಇತರೆ ಕ್ಷೇತ್ರಗಳ ಮೇಲೂ ಸಂಕೀರ್ಣವಾದ ಪರಿಣಾಮ ಬೀರಬಹುದು ಎಂದು ಟೆಲಿಕಾಂ ಸಚಿವ ಕಪಿಲ್ ಸಿಬಲ್ ಅವರು ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದಾರೆ.

ಸರ್ಕಾರ ನೀಡಿದ್ದ 2 ಜಿ~ ತರಂಗಾಂತರ ಹಂಚಿಕೆಯ ಹಗರಣದ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಇತ್ತೀಚೆಗೆ 122 ಪರವಾನಗಿಗಳನ್ನು ರದ್ದುಪಡಿಸಿ ತೀರ್ಪು ನೀಡಿತ್ತು. 

~ ಸುಪ್ರೀಂ ಕೋರ್ಟಿನ ತೀರ್ಪು ದೂರಗಾಮಿ ಪರಿಣಾಮ ಬೀರುತ್ತದೆ ಎಂದುನಾನು ಪುನಃ ಪುನಃ ಹೇಳುತ್ತಲೇ ಬಂದಿದ್ದೇನೆ. ಟೆಲಿಕಾಂ ಕ್ಷೇತ್ರ ಮಾತ್ರವಲ್ಲ, ಎಲ್ಲಾ ಕ್ಷೇತ್ರಗಳ ಮೇಲೂ ಅದು ದೂರಗಾಮಿ ಪರಿಣಾಮ ಬೀರುತ್ತದೆ~ ಎಂದು ಅವರು ಎಂದಿದ್ದಾರೆ.    

ಸೋಮವಾರ ಸುದ್ದಿ ಸಂಸ್ಥೆಯೊಂದರ ಪ್ರತಿನಿಧಿಯೊಂದಿಗೆ ಮಾತನಾಡುತ್ತಿದ್ದ ಅವರು, ಸರ್ಕಾರ ತೀರ್ಪಿನ ಅಧ್ಯಯನ ನಡೆಸುತ್ತಿದೆ ಜೊತೆಗೆ ಮುಂದೆ ಯಾವ ಬಗೆಯಲ್ಲಿ  ಹೆಜ್ಜೆಯಿಡಬೇಕೆಂದು ಚಿಂತನೆ ನಡೆಸುತ್ತಿದೆ ಎಂದೂ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT