ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2006ರ ಕಾಯ್ದೆ ಏನು ಹೇಳುತ್ತದೆ?

Last Updated 17 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: ವೃತ್ತಿಪರ ಕೋರ್ಸ್‌ಗಳ ಪ್ರವೇಶ ಮತ್ತು ಶುಲ್ಕ ನಿಗದಿ ಸಂಬಂಧ 2006ರಲ್ಲಿ ರೂಪಿಸಿದ್ದ ಕರ್ನಾಟಕ ವೃತ್ತಿಶಿಕ್ಷಣ ಸಂಸ್ಥೆಗಳ (ಪ್ರವೇಶ ನಿಯಂತ್ರಣ ಮತ್ತು ಶುಲ್ಕ ನಿಗದಿ) ಕಾಯ್ದೆಗೆ ಈಗ ಜೀವ ನೀಡಲಾಗಿದೆ.

2006ರಲ್ಲಿ ಈ ಕಾಯ್ದೆಯನ್ನು ರೂಪಿಸಲಾಗಿದ್ದರೂ, ಇದನ್ನು ಅನುಷ್ಠಾನಗೊಳಿಸಿರಲಿಲ್ಲ. ಇದನ್ನು ತಡೆಹಿಡಿದು ಪರಸ್ಪರ ಮಾತುಕತೆ ಮೂಲಕವೇ ಸರ್ಕಾರ ಮತ್ತು ಖಾಸಗಿ ಕಾಲೇಜುಗಳು ಸೀಟು ಹಂಚಿಕೆ ಮತ್ತು ಶುಲ್ಕ ನಿಗದಿ ಸಂಬಂಧ ಒಪ್ಪಂದ ಮಾಡಿಕೊಳ್ಳುತ್ತಿದ್ದವು.

ಆದರೆ, 2014–15ನೇ ಸಾಲಿನಿಂದ ಕಾಯ್ದೆ ಜಾರಿಗೆ ಬರಲಿದ್ದು, ಆ ಪ್ರಕಾರ ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳು ಒಂದು ಸಿಇಟಿ, ಖಾಸಗಿ ಕಾಲೇಜುಗಳಿಗೆ ಮತ್ತೊಂದು ಸಿಇಟಿ ನಡೆಯಲಿದೆ. ಎರಡಕ್ಕಿಂತ ಹೆಚ್ಚು ಸಿಇಟಿ ನಡೆಸಲು ಅವಕಾಶ ಇಲ್ಲ.

ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳಲ್ಲಿನ ಸೀಟುಗಳ ಭರ್ತಿಗೆ ಸರ್ಕಾರ ಸಿಇಟಿ ನಡೆಸಲಿದೆ. ಖಾಸಗಿ ಕಾಲೇಜು­ಗಳಲ್ಲಿನ ಸೀಟುಗಳ ಭರ್ತಿಗೆ, ಖಾಸಗಿ ಕಾಲೇಜು­ಗಳೆಲ್ಲ ಸೇರಿ ಪ್ರತ್ಯೇಕ ಸಿಇಟಿ ನಡೆಸಬಹುದು ಅಥವಾ ಸರ್ಕಾರದ ಸಿಇಟಿಯನ್ನೇ ಒಪ್ಪಿ, ಒಂದೇ ಸಿಇಟಿ ನಡೆಸಲು ಸಹಕರಿಸಬಹುದು ಎಂದು ಕಾಯ್ದೆಯಲ್ಲಿ ತಿಳಿಸಲಾಗಿದೆ.

ಕಾಯ್ದೆ ಪ್ರಕಾರವೇ ಮುಂದಿನ ವರ್ಷದಿಂದ ವೃತ್ತಿಪರ ಕೋರ್ಸ್‌ಗಳ  ಪ್ರವೇಶ ನಡೆಯಲಿದೆ ಎಂದು ಸರ್ಕಾರ ಈಗಾ­ಗಲೇ ಹೇಳಿದೆ. ಆ ಪ್ರಕಾರ ಹೋದರೆ ಖಾಸಗಿ ಕಾಲೇಜುಗಳಲ್ಲಿ ಸರ್ಕಾರಿ ಕೋಟಾ ಇರುವುದಿಲ್ಲ. ಆ ಕಾಲೇಜುಗಳಲ್ಲಿನ ಎಲ್ಲ ಸೀಟುಗಳು ಕಾಮೆಡ್‌ –ಕೆ ಮೂಲಕವೇ ಭರ್ತಿಯಾಗಲಿವೆ.

ಕಾಯ್ದೆ ಪ್ರಕಾರ ಈಗಾಗಲೇ ಶುಲ್ಕ ನಿಗದಿಗೆ ಮತ್ತು ಪ್ರವೇಶ ಮೇಲ್ವಿಚಾರಣೆಗೆ ಎರಡು ಸಮಿತಿಗಳನ್ನು ರಚಿಸಲಾ­ಗಿದ್ದು, ಆ ಸಮಿತಿಗಳು ಕೆಲಸ ಆರಂಭಿಸಿವೆ. ಶುಲ್ಕ ನಿಗದಿ ಸಮಿತಿ ಪ್ರತಿಯೊಂದು ಕಾಲೇಜುಗಳಿಂದ ಸಮಗ್ರವಾದ ಮಾಹಿತಿ­ಯನ್ನು ತರಿಸಿಕೊಂಡು ಮೂಲಸೌಕರ್ಯಗಳ ಆಧಾರದ ಮೇಲೆ ಶುಲ್ಕವನ್ನು ನಿಗದಿ ಮಾಡಲಿದೆ. ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಏಕರೂಪದ ಶುಲ್ಕ ಇರುತ್ತದೆ.

ಶೇ 50ರಷ್ಟು ಮೀಸಲಾತಿ: ಸರ್ಕಾರದ ಮೀಸಲಾತಿ ನಿಯಮಗಳ ಪ್ರಕಾರ ಶೇ 50ರಷ್ಟು ಸೀಟುಗಳನ್ನು ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ವರ್ಗದವರಿಗೆ ಮೀಸಲಿಡಲಾಗುತ್ತದೆ. ಶೇ 15ರಷ್ಟು ಸೀಟುಗಳು ಅನಿವಾಸಿ ಭಾರತೀಯರಿಗೆ ಮತ್ತು ಇನ್ನುಳಿದ ಶೇ 35ರಷ್ಟು ಸೀಟುಗಳು ಸಾಮಾನ್ಯ ವರ್ಗವರಿಗೆ ಮೀಸಲಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT