ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

248 ನಾಮಪತ್ರಗಳು ಕ್ರಮಬದ್ಧ

Last Updated 19 ಏಪ್ರಿಲ್ 2013, 9:14 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯ 18 ವಿಧಾನಸಭೆ ಕ್ಷೇತ್ರಗಳಲ್ಲಿ ಗುರುವಾರ ನಾಮಪತ್ರ ಪರಿಶೀಲನೆ ನಡೆಸಿದ ನಂತರ 248 ಅಭ್ಯರ್ಥಿಗಳ ಉಮೇದುವಾರಿಕೆ ಕ್ರಮಬದ್ಧವಾಗಿವೆ. ಒಟ್ಟು 49 ನಾಮಪತ್ರಗಳು ತಿರಸ್ಕೃತಗೊಂಡಿವೆ.

ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಹಾಗೂ ಕೆ.ಜೆ.ಪಿ. ಅಭ್ಯರ್ಥಿಗಳ ನಾಮಪತ್ರಗಳು ಹದಿನೆಂಟೂ ಕ್ಷೇತ್ರಗಳಲ್ಲಿ ಕ್ರಮಬದ್ಧವಾಗಿವೆ.
ಬಿ.ಎಸ್.ಪಿಯ 15, ಎನ್‌ಸಿಪಿಯ 5, ಜೆಡಿಯು ಪಕ್ಷದ-11, ಬಿ.ಎಸ್.ಆರ್.ಕಾಂಗ್ರೆಸ್ ಪಕ್ಷದ-17 ಹಾಗೂ ಲೋಕಜನಶಕ್ತಿ ಪಕ್ಷ, ಲೋಕಸತ್ತಾ ಪಕ್ಷ, ಸರ್ವ ಜನತಾ ಪಕ್ಷ, ಸರ್ವೋದಯ ಕರ್ನಾಟಕ ಪಕ್ಷಗಳಿಂದ ತಲಾ ಎರಡು ನಾಮಪತ್ರಗಳು ಕ್ರಮಬದ್ಧವಾಗಿವೆ.

ಕರ್ನಾಟಕ ಸ್ವರಾಜ್ ಪಕ್ಷ, ಆರ್.ಎಸ್.ಪಿ, ಭಾರತೀಯ ರಿಪಬ್ಲಿಕನ್ ಪಕ್ಷ, ನ್ಯಾಶನಲ್ ಪೀಪಲ್ಸ್ ಪಾರ್ಟಿ, ಇಂಡಿಯನ್ ಯುನಿಯನ್ ಮುಸ್ಲಿಂ ಲೀಗ್, ಶಿವಸೇನಾ, ಕರುನಾಡು ಪಕ್ಷ, ಸಮಾಜವಾದಿ ಪಕ್ಷಗಳಿಂದ ತಲಾ ಒಂದರಂತೆ ಹಾಗೂ ಪಕ್ಷೇತರ 112 ನಾಮಪತ್ರಗಳು ಸೇರಿದಂತೆ ಒಟ್ಟು 248 ನಾಮಪತ್ರಗಳು ಜಿಲ್ಲೆಯಲ್ಲಿ ಕ್ರಮಬದ್ಧವಾಗಿವೆ.

ನಿಪ್ಪಾಣಿ ಕ್ಷೇತ್ರದಲ್ಲಿ 16, ಚಿಕ್ಕೋಡಿ- ಸದಲಗಾ ಕ್ಷೇತ್ರದಲ್ಲಿ 14, ಅಥಣಿ ಕ್ಷೇತ್ರದಲ್ಲಿ 14, ಕಾಗವಾಡ 16, ಕುಡಚಿ (ಎಸ್‌ಸಿ) 11, ರಾಯಬಾಗ (ಎಸ್‌ಸಿ) 27, ಹುಕ್ಕೇರಿ 9, ಅರಭಾವಿ 11, ಗೋಕಾಕ 12, ಯಮಕನಮರಡಿ (ಎಸ್‌ಟಿ) 6, ಬೆಳಗಾವಿ ಉತ್ತರ 19, ಬೆಳಗಾವಿ ದಕ್ಷಿಣ 12, ಬೆಳಗಾವಿ ಗ್ರಾಮೀಣ 15, ಖಾನಾಪುರ 17, ಕಿತ್ತೂರು 14, ಬೈಲಹೊಂಗಲ 11, ಸವದತ್ತಿ ಎಲ್ಲಮ್ಮ 11, ರಾಮದುರ್ಗ ಕ್ಷೇತ್ರದಲ್ಲಿ 13 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT