ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

30ಕೋಟಿ ಪಂಗನಾಮ

Last Updated 7 ಫೆಬ್ರುವರಿ 2011, 6:35 IST
ಅಕ್ಷರ ಗಾತ್ರ

ಹಿರಿಯೂರು: ಚಳ್ಳಕೆರೆ, ಚಿತ್ರದುರ್ಗ, ಹಿರಿಯೂರು,  ದಾವಣಗೆರೆ, ಹುಬ್ಬಳ್ಳಿ, ಬೆಳಗಾವಿ ಮೊದಲಾದ ನಗರಗಳಲ್ಲಿ ಹಣ ದ್ವಿಗುಣಗೊಳಿಸುವ ಜಾಲದವರು ಹಣವಂತರನ್ನು ವಂಚಿಸಿರುವ ಸುಳಿವು ಪೊಲೀಸರಿಗೆ ಸಿಕ್ಕಿದ್ದು, ಒಟ್ಟಾರೆ ್ಙ 200-250 ಕೋಟಿ ವಹಿವಾಟು ನಡೆದಿದ್ದು, ಅದರಲ್ಲಿ ್ಙ 30 ಕೋಟಿಗೂ ಹೆಚ್ಚು ವಂಚನೆ ನಡೆದಿದೆ ಮೂಲಗಳಿಂದ ತಿಳಿದು ಬಂದಿದೆ.

ಚಿತ್ರದುರ್ಗ ನಗರಕ್ಕೆ ಹೊಂದಿಕೊಂಡಿರುವ ಮದಕರಿಪುರ ಗ್ರಾಮದ ಶ್ರೀನಾಥ್ ಎನ್ನುವವರು ಇತ್ತೀಚೆಗೆ ಡಾ.ತಿಮ್ಮಾರೆಡ್ಡಿ ಎಂಬ ವ್ಯಕ್ತಿಯ ಮೇಲೆ ದೂರು ನೀಡಿದ ನಂತರ, ತನಿಖೆ ಕೈಗೊಂಡ ಪೊಲೀಸರು, ಶನಿವಾರ ತಿಮ್ಮಾರೆಡ್ಡಿ, ಜಯರಾಂ, ಬಾಬುರೆಡ್ಡಿ, ದೋಣಪ್ಪರೆಡ್ಡಿ, ಮಹೇಶ್ ಭಂಗೀಗೌಡ, ವೀರಣ್ಣಮಾಶೆಟ್ಟಿ ಎಂಬ ಆರು ಜನರನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು.

‘ಆರ್ಯರೂಪ ಟೂರಿಸಂ ಅಂಡ್ ಕ್ಲಬ್ ರೆಸಾರ್ಟ್ ಕಂಪೆನಿಯ ಪ್ರತಿನಿಧಿ ಎಂದು ಹೇಳಿಕೊಂಡ ತಿಮ್ಮಾರೆಡ್ಡಿ ಮದಕರಿಪುರದ ಶ್ರೀನಾಥ್ ಅವರಿಗೆ ಒಟ್ಟು ್ಙ 13,04,500 ವಂಚನೆ ಮಾಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಲಾಗಿತ್ತು.

ಕೇವಲ 150 ದಿನಗಳಲ್ಲಿ ದ್ವಿಗುಣಗೊಳ್ಳುತ್ತದೆ. 150 ದಿನಗಳ ನಂತರ ಹೂಡಿಕೆದಾರರಿಗೆ, ನಂತರದ 150 ದಿನಗಳಲ್ಲಿ ಸಮಾನಕಂತುಗಳಲ್ಲಿ ಹಣ ಪಾವತಿಸಲಾಗುತ್ತದೆ ಎಂದು, ಕೆಲವು ನಕಲಿ ಹೆಸರು ಹಾಗೂ ನಕಲಿ ಬ್ಯಾಂಕ್ ಖಾತೆ ಸಂಖ್ಯೆಗಳನ್ನು ತೋರಿಸಿ, ನಂಬಿಕೆ ಬರುವಂತೆ ಮಾಡಿ ಹಣ ಹೂಡಿಸಿ ವಂಚಿಸಿದ್ದಾರೆ. ಮುಂಬೈನಲ್ಲಿ ಅಂತಹ ಹೆಸರಿನ ಕಂಪೆನಿಯಾಗಲೀ, ವ್ಯಕ್ತಿಯಾಗಲೀ ಯಾವುದೂ ಇಲ್ಲ ಎಂಬ ಮಾಹಿತಿ ಇರುವ ಬಗ್ಗೆ ಪೊಲೀಸ್ ಮೂಲಗಳು ದೃಢಪಡಿಸಿವೆ. ವಿನ್ನಿವಿಂಕ್ ನಂತರದ ದೊಡ್ಡ ಸಂಚಿನ ಜಾಲ ಇದಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT