ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

5 ನಾಮಪತ್ರ ತಿರಸ್ಕೃತ; 112 ಅಂಗೀಕಾರ

ಚಿತ್ರದುರ್ಗ ವಿಧಾನಸಭಾ ಚುನಾವಣಾ ಕಣ
Last Updated 19 ಏಪ್ರಿಲ್ 2013, 12:48 IST
ಅಕ್ಷರ ಗಾತ್ರ

ಚಿತ್ರದುರ್ಗ: ವಿಧಾನಸಭಾ ಚುನಾವಣೆಗೆ ಗುರುವಾರ ನಡೆದ ನಾಮಪತ್ರಗಳ ಪರಿಶೀಲನೆಯಲ್ಲಿ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ 112 ಅಭ್ಯರ್ಥಿಗಳ ನಾಮಪತ್ರಗಳು ಕ್ರಮ ಬದ್ಧವಾಗಿದ್ದು, 5 ನಾಮಪತ್ರಗಳು ತಿರಸ್ಕೃತವಾಗಿವೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಎಸ್. ಶಶಿಕಾಂತ್ ಸೆಂಥಿಲ್ ತಿಳಿಸಿದ್ದಾರೆ.

ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದಲ್ಲಿ 24 ನಾಮಪತ್ರಗಳು ಸಲ್ಲಿಕೆಯಾಗಿದ್ದು, 2 ತಿರಸ್ಕೃತವಾಗಿವೆ. ಚಳ್ಳಕೆರೆಯಲ್ಲಿ ಸಲ್ಲಿಕೆಯಾದ 19 ನಾಮಪತ್ರಗಳು ಕ್ರಮಬದ್ಧವಾಗಿವೆ. ಚಿತ್ರದುರ್ಗದಲ್ಲಿ 32 ನಾಮಪತ್ರಗಳಲ್ಲಿ 2 ತಿರಸ್ಕೃತ, ಹಿರಿಯೂರಿನಲ್ಲಿ 28 ನಾಮಪತ್ರಗಳಲ್ಲಿ 1 ತಿರಸ್ಕೃತ, ಹೊಸದುರ್ಗದಲ್ಲಿ ಸಲ್ಲಿಕೆಯಾದ 18 ನಾಮಪತ್ರಗಳು ಕ್ರಮಬದ್ಧವಾಗಿವೆ. ಹೊಳಲ್ಕೆರೆ ಕ್ಷೇತ್ರದಲ್ಲಿ ಸಲ್ಲಿಕೆಯಾದ 29 ನಾಮಪತ್ರಗಳು ಕ್ರಮಬದ್ಧವಾಗಿವೆ ಎಂದು ತಿಳಿಸಿದ್ದಾರೆ.

ನಾಮಪತ್ರ ತಿರಸ್ಕೃತ: ತಿರಸ್ಕೃತಗೊಂಡವರಲ್ಲಿ ಮೊಳಕಾಲ್ಮುರು ಕ್ಷೇತ್ರದ ಟಿ.ಡಿ. ದೊಡ್ಡಯ್ಯ ಅವರ ನಾಮಪತ್ರಕ್ಕೆ `ಬಿ' ಫಾರಂ ಮತ್ತು ಒಬ್ಬರೇ ಸೂಚಕರಿದ್ದರಿಂದ ಅವರ ಎರಡು ನಾಮಪತ್ರಗಳು ತಿರಸ್ಕೃತವಾಗಿವೆ. ಚಿತ್ರದುರ್ಗ ಕ್ಷೇತ್ರದಲ್ಲಿ ಸೌಭಾಗ್ಯ ಅವರು `ಬಿ' ಫಾರಂ ಮತ್ತು ನಮೂನೆ `ಎ' ಮತ್ತು `ಬಿ' ಸಲ್ಲಿಸಿರುವುದಿಲ್ಲ ಹಾಗೂ ಬಿ.ಟಿ. ನಾಗರಾಜ್ ಅವರು ಮತದಾರರಾಗಿರುವ ಬಗ್ಗೆ ಯಾವುದೇ ದಾಖಲೆ ಇಲ್ಲದಿರುವುದರಿಂದ ಇವರ ನಾಮಪತ್ರ ತಿರಸ್ಕರಿಸಲಾಗಿದೆ. ಹಿರಿಯೂರು ಕ್ಷೇತ್ರದಲ್ಲಿ ಎನ್.ಆರ್. ಲಕ್ಷ್ಮೀಕಾಂತ್ ಅವರ ಬಿ. ಫಾರಂ ಇಲ್ಲದಿರುವುದರಿಂದ ತಿರಸ್ಕರಿಸಲಾಗಿದೆ.

ಹಿರಿಯೂರು ಕ್ಷೇತ್ರದಲ್ಲಿ 25 ಅಭ್ಯರ್ಥಿಗಳು: ಎಸ್.ಎಚ್. ಕಾಂತರಾಜ್ ಹುಲಿ- ಬಹುಜನ ಸಮಾಜ ಪಕ್ಷ, ಎ. ಕೃಷ್ಣಪ್ಪ- ಜೆಡಿಎಸ್‌ನಿಂದ ಎಸ್. ಸಿದ್ದೇಶ್ ಯಾದವ್- ಭಾರತೀಯ ಜನತಾ ಪಕ್ಷ, ಡಿ. ಸುಧಾಕರ್- ಕಾಂಗ್ರೆಸ್, ಎಂ. ಜಯಣ್ಣ- ಬಿಎಸ್‌ಆರ್ ಕಾಂಗ್ರೆಸ್, ಎಂ. ತಿಪ್ಪೇಸ್ವಾಮಿ- ಕರ್ನಾಟಕ ಜನತಾಪಕ್ಷ, ಕೆ. ಪ್ರಕಾಶ್- ಕರ್ನಾಟಕ ಮಕ್ಕಳ ಪಕ್ಷ, ಆರ್. ಮೋಹನ ಕುಮಾರ್ ಯಾದವ್- ಸಮಾಜವಾದಿ ಪಕ್ಷ, ರಂಗಸ್ವಾಮಿ- ಜನತಾದಳ (ಸಂಯುಕ್ತ), ಕೆ. ಕೃಷ್ಣಮೂರ್ತಿ, ಜಗನ್ನಾಥ, ಎ. ಜಾಕೀರ್ ಹುಸೇನ್, ಎಚ್. ತಿಪ್ಪೇಸ್ವಾಮಿ, ಸಿ. ನಟರಾಜ, ಎಸ್. ಮಂಜುನಾಥ, ಎಂ.ವೈ.ಟಿ. ಮುನೀರ್, ಕೆ.ವಿ.ರಘು, ರಷೀದ್ ಉನ್ನೀಸಾ, ಎನ್.ಆರ್. ಲಕ್ಷ್ಮೀಕಾಂತ, ಸಿ.ಕೆ. ಲಕ್ಷ್ಮೀನರಸಿಂಹಸ್ವಾಮಿ, ಬಿ.ಟಿ. ಶಾಂತಣ್ಣ, ಬಿ.ಸುಧಾಕರ, ಎಚ್.ಪಿ. ಸುಧಾಕರರೆಡ್ಡಿ ಎ, ಸುಬಾನ್ ಖಾನ್, ಕೆ.ಸಿ. ಹೊರಕೇರಪ್ಪ ಅವರು ಪಕ್ಷೇತರ ಅಭ್ಯರ್ಥಿಗಳು.

ಚಿತ್ರದುರ್ಗದಲ್ಲಿ 24 ಅಭ್ಯರ್ಥಿಗಳು: ಜಿ.ಎಚ್. ತಿಪ್ಪಾರೆಡ್ಡಿ- ಬಿಜೆಪಿ, ಜಿ.ಆರ್. ಪಾಂಡುರಂಗ- ಬಹುಜನ ಸಮಾಜ ಪಕ್ಷ, ಎಸ್.ಕೆ. ಬಸವರಾಜನ್- ಜೆಡಿಎಸ್, ಜಿ.ಎಸ್. ಮಂಜುನಾಥ್- ಕಾಂಗ್ರೆಸ್, ಇಶ್ರತ್ ಜಹಾನ್- ರಾಣಿ ಚೆನ್ನಮ್ಮ ಪಾರ್ಟಿ, ಎ.ವಿ. ಉಮಾಪತಿ- ಕೆಜೆಪಿ, ಕೆ.ಎಸ್. ಫಯಾಜುದ್ದೀನ್- ಬಿಎಸ್‌ಆರ್ ಕಾಂಗ್ರೆಸ್, ಕೆ.ಎಸ್. ಬಸವರಾಜ್- ನ್ಯಾಷನಲ್ ಪೀಪಲ್ಸ್ ಪಾರ್ಟಿ, ಕೆ.ಬಿ. ಮಮತಾ- ಸಮಾಜವಾದಿ ಪಕ್ಷ, ಕೆ.ಎಸ್. ಮಲ್ಲಿಕಾರ್ಜುನ ಶೆಟ್ಟಿ- ಪಿರಾಮಿಡ್ ಪಾರ್ಟಿ ಆಫ್ ಇಂಡಿಯಾ, ಎಚ್.ಎಸ್. ಯಶೋಧಮ್ಮ ಜನತಾದಳ (ಸಂಯುಕ್ತ), ಅಬ್ಬಾಸ್ ಆಲಿ ಕೌಸರ್, ಅಬ್ದುಲ್ ಜಬ್ಬಾರ್, ಅಸ್ಲಂ ಬಾಷಾ, ಎಸ್. ಓಂಕಾರರೆಡ್ಡಿ, ಎ. ಕೇಶವಮೂರ್ತಿ, ಗಣೇಶ, ಎಸ್. ಮೃತ್ಯುಂಜಯಪ್ಪ, ಸಿ.ಕೆ. ರೆಹಮಾನ್, ಶಿವುಯಾದವ್, ಬಿ.ಎಸ್.ಸತೀಶ್, ಎನ್. ಸುರೇಶ್, ಸೌಭಾಗ್ಯ ಅವರು ಪಕ್ಷೇತರ ಅಭ್ಯರ್ಥಿಗಳು.

ಹೊಳಲ್ಕೆರೆಯಲ್ಲಿ 21 ಅಭ್ಯರ್ಥಿಗಳು: ಎಚ್. ಆಂಜನೇಯ- ಕಾಂಗ್ರೆಸ್, ಎಚ್.ಆರ್. ದೇವೇಂದ್ರನಾಯ್ಕ- ಬಿಜೆಪಿ, ಜಿ.ಎನ್. ಪರಮೇಶ್ ಬಹುಜನ ಸಮಾಜ ಪಕ್ಷ, ಎಂ. ಚಂದ್ರಪ್ಪ- ಕೆಜೆಪಿ, ಟಿ. ಬಸವರಾಜಪ್ಪ- ಅಂಬೇಡ್ಕರ್ ರಾಷ್ಟ್ರೀಯ ಕಾಂಗ್ರೆಸ್, ಆರ್. ಯೋಗಮೂರ್ತಿ ನಾಯ್ಕ- ಕರ್ನಾಟಕ ಮಕ್ಕಳ ಪಕ್ಷ, ಎಸ್. ರಾಘವೇಂದ್ರ ಮೂರ್ತಿ-ಭಾರತೀಯ ಪ್ರಜಾಪಕ್ಷ, ಗೂಳಿಹಟ್ಟಿ ಡಿ. ರುದ್ರೇಶ್- ನ್ಯಾಷನಲ್ ಪೀಪಲ್ಸ್ ಪಾರ್ಟಿ, ಎಂ.ಎಚ್. ಶಶಿಧರ -ಜನತಾದಳ (ಸಂಯುಕ್ತ), ಎಚ್. ಶ್ರೀನಿವಾಸ ಬಿಎಸ್‌ಆರ್ ಕಾಂಗ್ರೆಸ್, ಎಂ.ಜಿ. ಸತೀಶ- ಸಮಾಜವಾದಿ ಪಕ್ಷ, ಕೆ.ಜಿ. ಅನಂತಮೂರ್ತಿ ನಾಯ್ಕ, ಚಂದ್ರಪ್ಪ, ಬಿ.ಎಸ್. ಚಂದ್ರಪ್ಪ, ಎಚ್. ಚಂದ್ರಪ್ಪ, ಜಿ.ಆರ್. ಯಶವಂತಕುಮಾರ್, ವಿ. ರಮೇಶ್ ಹೊನ್ನಕಾಲುವೆ, ಎಸ್. ವಿಜಯ, ಎನ್. ವೆಂಕಟೇಶ್ ಮಾಳೇನಹಳ್ಳಿ, ಜಿ.ಶಾಂತಪ್ಪ ಇವರುಗಳು ಪಕ್ಷೇತರ ಅಭ್ಯರ್ಥಿಗಳು.

ಮೊಳಕಾಲ್ಮೂರು 16 ಅಭ್ಯರ್ಥಿಗಳು: ಡಾ.ಓಬಣ್ಣ ಕೆ. ಪೂಜಾರ್ -ಜೆಡಿಎಸ್, ಎನ್.ವೈ. ಗೋಪಾಲಕೃಷ್ಣ -ಕಾಂಗ್ರೆಸ್, ದಾಸರಿ ಕೀರ್ತಿಕುಮಾರ್ -ಬಿಜೆಪಿ, ಪಟೇಲ್ ಜಿ. ಪಾಪನಾಯಕ- ಭಾರತೀಯ ಕಮ್ಯುನಿಸ್ಟ್ ಪಕ್ಷ, ಎಚ್. ರಾಮಣ್ಣ- ಬಿಎಸ್‌ಪಿ, ಎಸ್. ತಿಪ್ಪೇಸ್ವಾಮಿ- ಬಿಎಸ್‌ಆರ್ ಕಾಂಗ್ರೆಸ್, ದಾಕ್ಷಾಯಣಮ್ಮ- ಕೆಜೆಪಿ, ಜಿ.ಎಸ್. ಬಸಣ್ಣ- ಜೆಡಿಯು, ಎಸ್. ಚಂದ್ರಣ್ಣ, ಎಚ್. ತಿಮ್ಮಯ್ಯ, ಡಿ. ದೊಡ್ಡ ಬೋರಯ್ಯ, ಡಿ. ಬೋರಯ್ಯ, ಎನ್.ಆರ್. ಮಲ್ಲಯ್ಯಸ್ವಾಮಿ, ಡಿ.ಟಿ. ಶ್ರೀನಿವಾಸನಾಯಕ, ಸಣ್ಣಮಾರಣ್ಣ ಅವರು ಪಕ್ಷೇತರ ಅಭ್ಯರ್ಥಿಗಳು.

ಚಳ್ಳಕೆರೆ 11 ಅಭ್ಯರ್ಥಿಗಳು: ಜಿ.ಪಿ. ಜಯಪಾಲಯ್ಯ -ಬಿಜೆಪಿ, ಪಿ. ತಿಪ್ಪೇಸ್ವಾಮಿ -ಜೆಡಿಎಸ್, ಸಿ. ದೀಪಾ- ಸಮಾಜವಾದಿ ಪಕ್ಷ, ಸಿ. ಪಾಲಯ್ಯ -ಬಿಎಸ್‌ಪಿ, ಟಿ. ರಘುಮೂರ್ತಿ -ಕಾಂಗ್ರೆಸ್, ಕೆ.ಟಿ.ಕುಮಾರಸ್ವಾಮಿ- ಕೆಜೆಪಿ, ಎಲ್. ನಾಗರಾಜು  ಬಿಎಸ್‌ಆರ್ ಕಾಂಗ್ರೆಸ್, ಎಂ. ಪಾಲಯ್ಯ, ಕೆ.ಪಿ. ಭೂತಯ್ಯ, ಲಕ್ಷ್ಮಿದೇವಿ, ಬಿ. ಹನುಮಂತರಾಯ ಇವರುಗಳು ಪಕ್ಷೇತರ ಅಭ್ಯರ್ಥಿಗಳು.
ಹೊಸದುರ್ಗ 15 ಅಭ್ಯರ್ಥಿಗಳು:

ಬಿ.ಜಿ. ಗೋವಿಂದಪ್ಪ-ಕಾಂಗ್ರೆಸ್, ಕೆ. ತಿಮ್ಮಪ್ಪ-ಬಹುಜನಸಮಾಜ ಪಕ್ಷ, ಎಂ.ಲಕ್ಷ್ಮಣ-ಬಿಜೆಪಿ, ಟಿ.ಎಲ್. ಸುಧಾಬಾಯಿ- ಜೆಡಿಎಸ್, ಜಿ. ಗೋವಿಂದರಾಜು- ಬಿಎಸ್‌ಆರ್ ಕಾಂಗ್ರೆಸ್, ಎ. ಚಿತ್ತಪ್ಪ-ಸಮಾಜವಾದಿ ಪಕ್ಷ, ಎಸ್.ಲಿಂಗಮೂರ್ತಿ- ಕೆ.ಜೆ.ಪಿ, ಸೈಯದ್ ಇಸ್ಮಾಯಿಲ್ ಜನತಾದಳ (ಸಂಯುಕ್ತ), ಕೆ. ಚಂದ್ರಪ್ಪ, ಎಂ.ಸಿ. ಧನಂಜಯ, ಎಚ್.ಸಿ. ಮಲ್ಲಿಕಾರ್ಜುನ, ಸಿ.ಆರ್. ಮಲ್ಲೇಶಪ್ಪ, ಆರ್. ರಘು, ಕೆ. ಶಿವಣ್ಣ, ಡಿ. ಶೇಖರಪ್ಪ ಅವರು ಪಕ್ಷೇತರ ಅಭ್ಯರ್ಥಿಗಳಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT