ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

5 ವರ್ಷಗಳಲ್ಲಿ 500 ಸ್ಪರ್ಧಿಗಳು ಮದ್ದು ಸೇವನೆ

Last Updated 15 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಭಾರತದ ಒಟ್ಟು 500 ಕ್ರೀಡಾಪಟುಗಳು ಕಳೆದ ಐದು ವರ್ಷಗಳಲ್ಲಿ ನಿಷೇಧಿತ ಮದ್ದು ಸೇವಿಸಿ ಸಿಕ್ಕಿಬಿದ್ದಿರುವುದು ಬೆಳಕಿಗೆ ಬಂದಿದೆ. ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ (ನಾಡಾ) ನಡೆಸಿದ ಪರೀಕ್ಷೆಯಲ್ಲಿ ಸಿಕ್ಕಿಬಿದ್ದವರಲ್ಲಿ ವೇಟ್‌ಲಿಫ್ಟರ್‌ ಹಾಗೂ ಅಥ್ಲೀಟ್‌ಗಳೇ ಅಧಿಕ ಸಂಖ್ಯೆಯಲ್ಲಿದ್ದಾರೆ.

ಇವರಲ್ಲಿ 423 ಅಥ್ಲೀಟ್‌ಗಳ ಮೇಲೆ ಮದ್ದು ತಡೆ ಘಟಕವು ಕ್ರಮ ಕೈಗೊಂಡಿದೆ. ಆರ್‌ಟಿಐ ಮೂಲಕ ಈ ಮಾಹಿತಿ ಪಡೆಯಲಾಗಿದೆ.

‘ನಾಡಾ ಜಾರಿಗೆ ಬಂದಿದ್ದು 2009 ರ ಜನವರಿಯಲ್ಲಿ. ಆ ಬಳಿಕ 14,684 ಬಾರಿ ಉದೀಪನ ಮ್ದದು ಪರೀಕ್ಷೆ ನಡೆಸಲಾಗಿದೆ. ಕಳೆದ ಮೂರು ವರ್ಷಗಳಲ್ಲಿ ಸುಮಾರು 9898 ಅಥ್ಲೀಟ್‌ಗಳನ್ನು ಪರೀಕ್ಷೆಗೆ ಒಳಪಡಿಸ ಲಾಗಿದೆ. 113 ಅಥ್ಲೀಟ್‌ಗಳು ಮದ್ದು ಸೇವಿಸಿ ಸಿಕ್ಕಿಬಿದ್ದಿದ್ದಾರೆ. ಅಷ್ಟು ಮಾತ್ರ ವಲ್ಲದೇ, ಕಬಡ್ಡಿ (58), ದೇಹದಾರ್ಢ್ಯ (51), ಪವರ್‌ಲಿಫ್ಟಿಂಗ್ (42), ಕುಸ್ತಿ (41), ಬಾಕ್ಸಿಂಗ್‌ (36) ಹಾಗೂ ಜೂಡೊ (9) ಸ್ಪರ್ಧಿಗಳೂ ಇದ್ದಾರೆ’ ಎಂದು ನಾಡಾ ಅಧಿಕಾರಿಗಳು ತಿಳಿಸಿದ್ದಾರೆ.

ಆಗಸ್ಟ್‌ನಲ್ಲಿ ಉದ್ದೀಪನ ಮದ್ದು ಸೇವನೆ ಸಂಬಂಧ ಅಂತರರಾಷ್ಟ್ರೀಯ ಅಥ್ಲೆಟಿಕ್‌ ಫೆಡರೇಷನ್‌ ಬಿಡುಗಡೆ ಮಾಡಿದ್ದ ವರದಿಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ಒಟ್ಟು 43 ಮಂದಿ ಕ್ರೀಡಾಪಟುಗಳು  ಸಿಕ್ಕಿಬಿದ್ದಿ ದ್ದಾರೆ. ರಷ್ಯಾ (44) ಮೊದಲ ಸ್ಥಾನದಲ್ಲಿದೆ.

‘ಸ್ಪರ್ಧೆ ವೇಳೆ ಮದ್ದು ಪರೀಕ್ಷೆ ನಡೆಸುವ ಮೂಲಕ ಉದ್ದೀಪನ ಮದ್ದು ಸೇವನೆ ನಿರ್ಮೂಲನೆಗೊಳಿ ಸಲು ಕಠಿಣ ಕ್ರಮಗಳನ್ನು ತೆಗೆದು ಕೊಳ್ಳಲಾಗುತ್ತಿದೆ. ಮದ್ದು ಸೇವನೆ ಅಪಾಯದ ಬಗ್ಗೆ ಅರಿವು ಮೂಡಿಸಲು ಹಲವು ಬಾರಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಈ ಬಗ್ಗೆ ಕ್ರೀಡಾ ಪಟುಗಳಿಗೆ, ಕೋಚ್‌ಗಳಿಗೆ, ಸಹಾ ಯಕ ಸಿಬ್ಬಂದಿಗೆ ಮಾಹಿತಿ ನೀಡಿದ್ದೇವೆ' ಎಂದೂ ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT