ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಅಂಕಗಳಿಕೆಗೆ ಮಕ್ಕಳ ಮೇಲೆ ಒತ್ತಡ ಬೇಡ'

Last Updated 8 ಫೆಬ್ರುವರಿ 2013, 9:30 IST
ಅಕ್ಷರ ಗಾತ್ರ

ಶೃಂಗೇರಿ: ಕ್ರೀಡೆ ಜೀವನದ ಅವಿಭಾಜ್ಯ ಅಂಗವಾಗಿದ್ದು, ಇಂದಿನ ಯಾಂತ್ರಿಕ ಜೀವನದಿಂದ ಹೊರಬಂದು ಸಮಾಜ ದೊಂದಿಗೆ ಬೆರೆಯಲು ಕ್ರೀಡೆ ಅತ್ಯಂತ ಸಹಕಾರಿ ಎಂದು ಸಂಸದ ಜಯಪ್ರಕಾಶ್ ಹೆಗ್ಡೆ ಹೇಳಿದರು.

ಪಟ್ಟಣದ ಜ್ಞಾನಭಾರತಿ  ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಇತ್ತೀಚೆಗೆ ಫ್ರೆಂಡ್ಸ್ ಕ್ಲಬ್ ಆಯೋಜಿಸಿದ್ದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಣದಲ್ಲಿ ಅಂಕಗಳಿಕೆಗೆ ಮಾತ್ರ ಒತ್ತು ನೀಡುತ್ತಿರುವುದರಿಂದ ವಿದ್ಯಾರ್ಥಿಗಳಲ್ಲಿ ಶಾರೀರಿಕ ಮತ್ತು ಮಾನಸಿಕ ಬೆಳವಣಿಗೆಗೆ ಹಿನ್ನೆಡೆಯಾಗುತ್ತಿದೆ. ಆದುದರಿಂದ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮ ಮುಂತಾದ ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸಬೇಕು ಎಂದರು.

ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ದಿನೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಟಿ.ಡಿ. ರಾಜೇಗೌಡ, ರಾಜ್ಯ ಭೂಬ್ಯಾಂಕ್‌ನ ಮಾಜಿ ನಿರ್ದೇಶಕ ಬಾಳೆಮನೆ ನಟರಾಜ್, ಪಟ್ಟಣ ಪಂಚಾಯತಿ ಅಧ್ಯಕ್ಷ ಟಿ.ಕೆ. ಪರಾಶರ, ಎಚ್.ಜಿ. ವೆಂಕಟೇಶ್, ಎಂ.ಎನ್. ಲಕ್ಷ್ಮಿ ನಾರಾಯಣ ಭಟ್, ಸೌಭಾಗ್ಯ ಗೋಪಾಲನ್ ಮತ್ತಿತರರು ಇದ್ದರು.

ನಂತರ ನಡೆದ ಪಂದ್ಯಾ ವಳಿಯಲ್ಲಿ ಪ್ರಥಮ ಬಹುಮಾನವನ್ನು ಬಸವಾನಿಯ ನವೋದಯ ವಾಲಿಬಾಲ್ ತಂಡ, ದ್ವಿತೀಯ ಬಹುಮಾನವನ್ನು ಶಿವ ಮೊಗ್ಗದ ಯುನೈಟೆಡ್ ಸ್ಪೋರ್ಟ್ಸ ಕ್ಲಬ್ ಹಾಗೂ ತೃತೀಯ ಬಹು ಮಾನವನ್ನು ತೀರ್ಥಹಳ್ಳಿಯ ಮಿಶಾ ಸ್ಪೋರ್ಟ್ಸ್ ಕ್ಲಬ್ ಪಡೆದುಕೊಂಡವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT