ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗಳದೊಳಗೆ ನುಗ್ಗಿದ ಅಭಿಮಾನಿ

ಕುಣಿದಾಡಿದ ಕ್ರಿಕೆಟ್ ಪ್ರೇಮಿಗಳು
Last Updated 15 ಡಿಸೆಂಬರ್ 2012, 19:54 IST
ಅಕ್ಷರ ಗಾತ್ರ

ನಾಗಪುರ: ವಿರಾಟ್ ಕೊಹ್ಲಿ ಶತಕ ಗಳಿಸುತ್ತಿದ್ದಂತೆ ಗ್ಯಾಲರಿಯಿಂದ ಜಿಗಿದ ಅಭಿಮಾನಿಯೊಬ್ಬ ನೇರವಾಗಿ ಅಂಗಳದೊಳಗೆ ನುಗ್ಗಿಯೇ ಬಿಟ್ಟ. ಕ್ರೀಸ್‌ಗೆ ತೆರಳಿ ಕೊಹ್ಲಿಯನ್ನು ಆ      ಅಭಿಮಾನಿ ಅಭಿನಂದಿಸಿದ. ಕೊಹ್ಲಿ ಕೂಡ ಆ ಅಭಿಮಾನಿಗೆ ಹಸ್ತಲಾಘವ ನೀಡಿದರು.
ಭದ್ರತಾ ಸಿಬ್ಬಂದಿ ಆತನನ್ನು ಹಿಡಿಯಲು ಪ್ರಯತ್ನಿಸಿದರಾದರೂ ಸಾಧ್ಯವಾಗಲಿಲ್ಲ.

ಆದರೆ ಅ ಅಭಿಮಾನಿಗೆ ಮುಂದೆ ಕಾದಿದ್ದು ಪೊಲೀಸರ ಲಾಠಿ ಏಟು. ಬಳಿಕ ಆತನನ್ನು ಕ್ರೀಡಾಂಗಣದಿಂದ ಹೊರಹಾಕಿದರು. ಸತತ ಸೋಲುಗಳಿಂದಾಗಿ ಆಕ್ರೋಶಕ್ಕೆ ಒಳಗಾಗಿದ್ದ ಅಭಿಮಾನಿಗಳು ತಂಡ ಕೊಂಚ ಉತ್ತಮ ಪ್ರದರ್ಶನ ನೀಡಲು ಶುರು ಮಾಡಿದರೆ ಯಾವ ರೀತಿ ವರ್ತಿಸುತ್ತಾರೆ ಎಂಬುದಕ್ಕೆ ಈ ಘಟನೆಯೊಂದು ಸಾಕ್ಷಿ.

ದಿನದಾಟ ವೀಕ್ಷಿಸಲು 23 ಸಾವಿರಕ್ಕೂ ಅಧಿಕ ಮಂದಿ ಸೇರಿದ್ದರು. ಈ ಕ್ರೀಡಾಂಗಣ ನಗರದಿಂದ 18 ಕಿ.ಮೀ.ದೂರದಲ್ಲಿದೆ. ವಾಹನಗಳ ಓಡಾಟವೂ ಕಡಿಮೆ. ಆದರೂ ಇಷ್ಟು ಮಂದಿ ಆಗಮಿಸಿದ್ದು ವಿಶೇಷ. ಶತಕ ಗಳಿಸಿದ ಕೊಹ್ಲಿ ವಿಶೇಷ ಸಾಧನೆಯೊಂದಕ್ಕೆ ಪಾತ್ರರಾದರು. 2012ರಲ್ಲಿ ಎಲ್ಲಾ ಪ್ರಕಾರದ ಕ್ರಿಕೆಟ್ ಸೇರಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿದರು. ಕೊಹ್ಲಿ ಈ ವರ್ಷ ಟೆಸ್ಟ್, ಏಕದಿನ ಹಾಗೂ ಟ್ವೆಂಟಿ-20 ಕ್ರಿಕೆಟ್ ಸೇರಿ 2091 ರನ್ ಗಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT