ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗವಿಕಲರ ಗೋಷ್ಠಿ ನಡೆಸಲು ಆಗ್ರಹ

Last Updated 17 ಡಿಸೆಂಬರ್ 2012, 6:04 IST
ಅಕ್ಷರ ಗಾತ್ರ

ವಿಜಾಪುರ: ನಗರದಲ್ಲಿ ಫೆ. 8ರಿಂದ 10ರ ವರೆಗೆ ಜರುಗುವ 79ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಂಗವಿಕಲರ ಕುರಿತಾದ ಗೋಷ್ಠಿಯನ್ನು ಏರ್ಪಡಿಸಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ಅಂಗವಿಕಲ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಬೀರಪ್ಪ ಅಂಡಗಿ ಚಿಲವಾಡಗಿ ಹೇಳಿದರು.

ರಾಜ್ಯದಲ್ಲಿ ಇಲ್ಲಿಯವರೆಗೂ ಜರುಗಿದ 78 ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಅಂಗವಿಕಲರ ಕುರಿತು ಸಾಹಿತ್ಯ ಸಮ್ಮೇಳನಗಳು ನಡೆದ ಉದಾಹರಣೆಗಳಿಲ್ಲ. ಆದ್ದರಿಂದ ಈ ಬಾರಿ ನಡೆಯುವ ಸಮ್ಮೇಳನದಲ್ಲಿ ಈ ಅಂಗವಿಕಲರಿಗೆ ವಿಶೇಷ ಗೋಷ್ಠಿಯನ್ನು ಏರ್ಪಡಿಸಬೇಕು ಎಂದು ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಅಂಗವಿಕಲರ ಸಮಸ್ಯೆ, ಸಾಧನೆಯ ಬಗ್ಗೆ ಕುರಿತಾದ ಕೃತಿಗಳನ್ನು ರಚಿಸಲು ಹೆಚ್ಚು ಆಸಕ್ತಿ ಹೊಂದಬೇಕು. ಸರ್ಕಾರವು ಇಂತಹ ಕೃತಿಗಳಿಗೆ ಪ್ರೋತ್ಸಾಹ ನೀಡುತ್ತಾ, ಅಂಗವಿಕಲರ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಬೇಕು. ಅಂಗವಿಕಲರಿಗೆ ಅನುಕಂಪ ಬೇಡ, ಅವಕಾಶ ಬೇಕು. ನಗರದಿಂದ ಇಂಥಹ ಒಂದು ವಿಶಿಷ್ಟ ಸಂಪ್ರದಾಯಕ್ಕೆ ಎಂದು ಕಸಾಪ ರಾಜ್ಯ ಘಟಕದ ಅಧ್ಯಕ್ಷ ಪುಂಡಲೀಕ ಹಾಲಂಬಿ ಅವರು ನಾಂದಿ ಹಾಡಬೇಕು ಎಂದು ಒತ್ತಾಯಿಸಿದರು.

6ನೇ ವೇತನ ಆಯೋಗದ ಶಿಫಾರಸಿನಂತೆ ಸರ್ಕಾರಿ ಅಂಗವಿಕಲ ನೌಕರರಿಗೆ ನೀಡಬೇಕಾಗಿರುವ ಮೂಲ ವೇತನದ ಶೇ. 6 ರಷ್ಟು ಸಂಚಾರಿ ಭತ್ಯೆ ಆದೇಶವನ್ನು ರಾಜ್ಯ ಸರ್ಕಾರ ಶಿಘ್ರವಾಗಿ ಜಾರಿಗೊಳಿಸಬೇಕು.  ಈ ಕುರಿತು ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿರುವದು ಖಂಡನೀಯ ಎಂದರು.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಅಂದಪ್ಪ ಗೋಳರೆಡ್ಡಿ , ಚಂದ್ರು ಸಿದಗೊಂಡ, ಎಂ.ಎಸ್. ವಡ್ಡರ ಇನ್ನಿತರರು ಉಪಸ್ಥಿತರಿದ್ದರು.

ದತ್ತಿ ಉಪನ್ಯಾಸ
ವಿಜಾಪುರ:
ನಗರದ ಆದರ್ಶ ನಗರದ ಶ್ರೀಗಂಧ ಭವನದಲ್ಲಿ ಡಾ. ಎಂ.ಎನ್. ವಾಲಿ ಪ್ರತಿಷ್ಠಾನದ ಆಶ್ರಯದಲ್ಲಿ ಲಿಂ. ಆದಪ್ಪ ಮುದುಕಪ್ಪ ಕರಡಿ ಅವರ ಸ್ಮರಣೋತ್ಸವದ ನಿಮಿತ್ಯ ದತ್ತಿ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ದತ್ತಿ ದಾನಿಗಳಾಗಿ ಆದರ್ಶ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂಗಣ್ಣ ಕರಡಿ ಭಾಗವಹಿಸಿದ್ದರು. ನಿವೃತ್ತ ಪ್ರಾಚಾರ್ಯ ಡಾ. ಎಂ.ಎಸ್. ಕರಡಿ ಅಧ್ಯಕ್ಷತೆವಹಿಸಿದ್ದರು. ಇಂಡಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಕೆ.ಎಂ. ಇಂಡಿ ಉಪನ್ಯಾಸ ನೀಡಿದರು. ಹಿರಿಯ ಸಾಹಿತಿ ಎಂ.ಎನ್. ವಾಲಿ ಇನ್ನಿತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT