ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಡಮಾನ್‌ನಲ್ಲಿ ಪ್ಯಾಟೆ ಮಂದಿ

Last Updated 27 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

`ಪ್ಯಾಟೆ ಮಂದಿ ಕಾಡಿಗ್ ಬಂದ್ರು~ ರಿಯಾಲಿಟಿ ಶೋ ಯಶಸ್ಸಿನಿಂದಾಗಿ, ಅದರ ಮುಂದುವರಿದ ಭಾಗವಾದ `ಪ್ಯಾಟೆ ಮಂದಿ ಕಾಡಿಗ್ ಬಂದ್ರು- ಸೀಸನ್ 2~, ಅಕ್ಟೋಬರ್ 31ರಿಂದ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.

ಈ ಶೋನ ಮುಖ್ಯ ಆಕರ್ಷಣೆ ಅಂಡಮಾನ್. ಪ್ರಾಕೃತಿಕ ಸೌಂದರ್ಯ ಹಾಗೂ ಪ್ರಕೃತಿ ವಿಕೋಪಗಳ ನೆಲೆವೀಡಾದ ಅಂಡಮಾನ್‌ಗೆ ಚಾರಿತ್ರಿಕ ಮಹತ್ವವಿದೆ. ಈ ನಿಗೂಢ ದ್ವೀಪಗಳ ಅಂಡಮಾನ್‌ನಲ್ಲಿ ನಡೆಯುವ ಪಂದ್ಯಾವಳಿಯಲ್ಲಿ ಪ್ಯಾಟೆ ಮಂದಿ ಶೋನ 16ಸ್ಪರ್ಧಿಗಳು ಭಾಗವಹಿಸುತ್ತಿದ್ದಾರೆ.

ಮನರಂಜನೆಯ ಜೊತೆಗೆ ಅಂಡಮಾನ್ ಅನ್ನು ಪರಿಚಯಿಸುವುದು ಕೂಡ ಈ ರಿಯಾಲಿಟಿ ಶೋ ಉದ್ದೇಶವಾಗಿದೆ. ಅಲ್ಲಿನ ಸುಂದರ ಸಮುದ್ರತೀರ, ಕಾಡು, ಇತಿಹಾಸವನ್ನ ವಿಭಿನ್ನ ರೀತಿಯಲ್ಲಿ ಕಿರುತೆರೆಯಲ್ಲಿ ಪ್ರಸ್ತುತಪಡಿಸುವ ಪ್ರಯತ್ನ ನಡೆಯಲಿದೆಯಂತೆ. ಅಂದಹಾಗೆ, ಈ ಕಾರ್ಯಕ್ರಮ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8ಕ್ಕೆ ಪ್ರಸಾರವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT