ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರ ವಿವಿ ಕ್ರಿಕೆಟ್ ಟೂರ್ನಿ: ಪ್ರೇಮಸಾಗರ್ ಭರ್ಜರಿ ಶತಕ

Last Updated 16 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಮಣಿಪಾಲ: ಪ್ರೇಮಸಾಗರ್ ಅವರ ಭರ್ಜರಿ ಶತಕದ ನೆರವಿನಿಂದ ತಿರುಪತಿಯ ಶ್ರೀವೆಂಕಟೇಶ್ವರ ವಿಶ್ವವಿದ್ಯಾಲಯ ತಂಡ, ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಕ್ರಿಕೆಟ್ ಟೂರ್ನಿಯ ಮೊದಲ ಸುತ್ತಿನ ಪಂದ್ಯದಲ್ಲಿ ಭಾನುವಾರ ಚೆನ್ನೈನ ಹಿಂದೂಸ್ತಾನ ವಿ.ವಿ. ತಂಡವನ್ನು 96 ರನ್‌ಗಳಿಂದ ಸುಲಭವಾಗಿ ಮಣಿಸಿತು.

ಮಣಿಪಾಲ ವಿ.ವಿ. ಮೈದಾನ (2)ದಲ್ಲಿ ನಡೆದ ಈ ಪಂದ್ಯದಲ್ಲಿ ಪ್ರೇಮಸಾಗರ್ 110 ಎಸೆತಗಳಲ್ಲಿ 5 ಸಿಕ್ಸರ್, 16 ಬೌಂಡರಿಗಳಿದ್ದ 151 ರನ್ ಚಚ್ಚಿದರು. ಮೊದಲು ಆಡುವ ಅನಿವಾರ್ಯತೆ ಪಡೆದರೂ ತಿರುಪತಿಯ ತಂಡ 284 ರನ್‌ಗಳ ಉತ್ತಮ ಮೊತ್ತ ಪೇರಿಸಿತು. ಉತ್ತರವಾಗಿ ಹಿಂದೂಸ್ತಾನ್ ವಿ.ವಿ. 188 ರನ್ ಗಳಿಸಲಷ್ಟೇ ಶಕ್ತವಾಯಿತು.

ಇನ್ನೊಂದು ಪಂದ್ಯದಲ್ಲಿ ಕುಪ್ಪಂನ ದ್ರಾವಿಡ ವಿ.ವಿ. ತಂಡ ನಾಲ್ಕು ವಿಕೆಟ್‌ಗಳಿಂದ ವಿಜಯವಾಡದ ಡಾ.ಎನ್‌ಟಿಆರ್ ಆರೋಗ್ಯ ವಿಜ್ಞಾನ ವಿ.ವಿ. ತಂಡವನ್ನು ಸೋಲಿಸಿತು.

ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿ.ವಿ. ಎಂಟು ವಿಕೆಟ್‌ಗಳಿಂದ ಮಧುರೈಯ ಕಲಸಲಿಂಗಮ್ ವಿ.ವಿ. ಎದುರು ತಲೆಬಾಗಿತು. ಕೃಷ್ಣದೇವರಾಯ ವಿ.ವಿ. ಭಾನುವಾರ ಕಣಕ್ಕಿಳಿದ ಕರ್ನಾಟಕ ಏಕೈಕ ವಿ.ವಿ. ತಂಡವಾಗಿತ್ತು.

ಕಾಕಿನಾಡದ ಜೆಎನ್‌ಟಿಯು ವಿ.ವಿ ತಂಡ ಏಳು ವಿಕೆಟ್‌ಗಳಿಂದ ಚೆನ್ನೈನ ಎಎಂಇಟಿ ತಂಡದ ವಿರುದ್ಧ,  ಪಾಂಡಿಚೇರಿ ವಿ.ವಿ. ಎಂಟು ವಿಕೆಟ್‌ಗಳಿಂದ ಹೈದರಾಬಾದ್ ವಿ.ವಿ. ವಿರುದ್ಧ ಜಯಗಳಿಸಿದವು. ಪಾಂಡಿಚೇರಿ ಪರ ಮಧ್ಯಮ ವೇಗಿ ರಾಜವಿಘ್ನೇಶ್ 12 ರನ್ನಿಗೆ 7 ವಿಕೆಟ್ ಪಡೆದಿದ್ದು ಪಂದ್ಯದ ವಿಶೇಷ ಎನಿಸಿತು.

ಸ್ಕೋರುಗಳು: ಮಣಿಪಾಲ ವಿ.ವಿ ಮೈದಾನ 2: ಶ್ರೀವೆಂಕಟೇಶ್ವರ ವಿಶ್ವವಿದ್ಯಾಲಯ, ತಿರುಪತಿ: 50 ಓವರುಗಳಲ್ಲಿ 7 ವಿಕೆಟ್‌ಗೆ 284 (ಪ್ರೇಮ್ ಸಾಗರ್ 151, ಎಂ.ಮಹೇಶ್ವರ್ 43, ಸುದರ್ಶನ್ ಪ್ರಸಾದ್ 29); ಹಿಂದೂಸ್ತಾನ್ ವಿಶ್ವವಿದ್ಯಾಲಯ, ಚೆನ್ನೈ: 43.4 ಓವರಗಳಲ್ಲಿ 188 (ಆದಿತ್ಯ ವಿ. 42, ಎ.ಆರಿಫ್ 41, ಹರಿಪ್ರಶಾಂತ್ 34; ಎ.ರಾಜಾ 36ಕ್ಕೆ2, ಸುದರ್ಶನ್ ಪ್ರಸಾದ್ 38ಕ್ಕೆ2, ಮಹೇಶ್ವರ್ 28ಕ್ಕೆ2).

ಬ್ರಹ್ಮಾವರದ ಎಸ್‌ಎಂಎಸ್ ಪಿಯು ಕಾಲೇಜು ಮೈದಾನ: ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯ, ಬಳ್ಳಾರಿ: 28.3 ಓವರುಗಳಲ್ಲಿ 91 (ನಿಖಿತ್ 32; ಟಿ.ಮುಖೇಶ್ ಕುಮಾರ್ 3ಕ್ಕೆ3, ಎಂ.ಪೊನ್‌ಮನೋಜ್ 28ಕ್ಕೆ3); ಕಲಸಲಿಂಗಮ್ ವಿಶ್ವವಿದ್ಯಾಲಯ, ಮಧುರೈ: 24.4 ಓವರುಗಳಲ್ಲಿ 2 ವಿಕೆಟ್‌ಗೆ 93 (ಮಿಲ್ಟನ್ ರಾಜಾ ಎಸ್. 26, ರಾಜಲಿಂಗಮ್ ಔಟಾಗದೇ 24).

ಎಂಐಟಿ ಮೈದಾನ: ಡಾ.ಎನ್‌ಟಿಆರ್ ಆರೋಗ್ಯ ವಿಜ್ಞಾನ ವಿ.ವಿ, ವಿಜಯವಾಡ: 50 ಓವರುಗಳಲ್ಲಿ 9 ವಿಕೆಟ್‌ಗೆ 210 (ಸ್ವರೂಪ್ 81; ಲಕ್ಷ್ಮೀಪತಿ 40ಕ್ಕೆ4); ದ್ರಾವಿಡ ವಿ.ವಿ, ಕುಪ್ಪಂ: 48.5 ಓವರುಗಳಲ್ಲಿ 6 ವಿಕೆಟ್‌ಗೆ 213 (ಎಂ.ಬಾಲಕೃಷ್ಣ 87, ಡಿ.ಲಕ್ಷ್ಮಿಪತಿ ಔಟಾಗದೇ 47).

ಎನ್‌ಐಟಿಕೆ ಮೈದಾನ, ಸುರತ್ಕಲ್: ಅಕಾಡೆಮಿ ಆಫ್ ಮೆರಿಟೈಂ ಎಜುಕೇಷನ್ ಅಂಡ್ ಟ್ರೈನಿಂಗ್ (ಎಎಂಇಟಿ), ಚೆನ್ನೈ: 90 (ಸತೀಶ್ 40; ವಿಲ್ಸನ್ 14ಕ್ಕೆ2, ಮನೋಹರ್ 5ಕ್ಕೆ2); ಜೆಎನ್‌ಟಿಯು, ಕಾಕಿನಾಡ: 18.3 ಓವರುಗಳಲ್ಲಿ 3 ವಿಕೆಟ್‌ಗೆ 93 (ಪ್ರಣೀತ್ 44; ರೇವಂತ್ 9ಕ್ಕೆ2).

ಹೈದರಾಬಾದ್ ವಿ.ವಿ: 25 ಓವರುಗಳಲ್ಲಿ 68 (ರಾಜವಿಘ್ನೇಶ್ 12ಕ್ಕೆ 7, ದೇವೇಂದ್ರ 25ಕ್ಕೆ2); ಪಾಂಡಿಚೇರಿ ವಿ.ವಿ: 8 ಓವರುಗಳಲ್ಲಿ 2 ವಿಕೆಟ್‌ಗೆ 72 (ರಘುರಾಮ್ ಔಟಾಗದೇ 30, ರಾಜವಿಘ್ನೇಶ್ 27).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT