ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಕಮಹಾದೇವಿ ಅನುಭಾವಿ ಕವಯತ್ರಿ

Last Updated 18 ಡಿಸೆಂಬರ್ 2013, 9:34 IST
ಅಕ್ಷರ ಗಾತ್ರ

ತುಮಕೂರು: ಅಕ್ಕಮಹಾದೇವಿ ಕನ್ನಡದ ಮೊದಲ ಶ್ರೇಷ್ಠ ಕವಯತ್ರಿ. ನಾಡಿನ ಮೊದಲ ಅನುಭಾವಿ ಮಹಿಳೆ ಎಂದು ಜಿಲ್ಲಾ ಲೇಖಕಿಯರ ಸಂಘದ ಮಾಜಿ ಅಧ್ಯಕ್ಷೆ ಎಂ.ಸಿ.ಲಲಿತಾ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಕೋರಾ ಮಹಾಲಿಂಗೇ­ಶ್ವರ ಪ್ರೌಢಶಾಲಾ ಆವರಣದಲ್ಲಿ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ ಏರ್ಪಡಿಸಿದ್ದ ಮಾದೇನಹಳ್ಳಿ ಮಲ್ಲಿಕಾರ್ಜುನಯ್ಯ ದತ್ತಿ ಉಪನ್ಯಾಸದಲ್ಲಿ ಮಾತನಾಡಿದರು.

ಆಧ್ಯಾತ್ಮಿಕ ಅನುಭವಗಳನ್ನು ನುಡಿ­ಗಟ್ಟಿನಲ್ಲಿ ಹಿಡಿದುಕೊಡುವಲ್ಲಿ ವಚನ ಸಾಹಿತ್ಯ ಪರಂಪರೆಯಲ್ಲೇ ಅಕ್ಕನ ಸ್ಥಾನ ವಿಶಿಷ್ಟವಾದುದು ಎಂದರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ.ಡಿ.ಎನ್.ಯೋಗೀಶ್ ಮಾತನಾಡಿ,  ಅಕ್ಕನ ವಚನಗಳ ಮುಖ್ಯ ಆಶಯ ಆದರ್ಶ ವ್ಯವಸ್ಥೆ. ಅಕ್ಕನ ವಚನಗಳನ್ನು ಭಕ್ತಿಯ ಆವೇಶದ ಪರಿಧಿಯ ಆಚೆಗೆ ನೋಡುವ ಪ್ರಯತ್ನವನ್ನು ವಿದ್ವಾಂಸರು ಮಾಡಬೇಕಿದೆ ಎಂದು ಹೇಳಿದರು.

ಚಿಂತಕಿ ಇಂದಿರಾ ಪ್ರಿಯದರ್ಶಿನಿ ಅಧ್ಯಕ್ಷತೆ ವಹಿಸಿದ್ದರು. ಬಸವಕೇಂದ್ರದ ಕಾರ್ಯದರ್ಶಿ ಚಂದ್ರಶೇಖರ್, ಮುಖಂಡ­ರಾದ ಮುದ್ದೇನಹಳ್ಳಿ ನಂಜಯ್ಯ, ಕೋರಾ ಸಿದ್ದಲಿಂಗಪ್ಪ,  ಚಿಕ್ಕ­ಬೆಳ್ಳಾವಿ ಶಿವಕುಮಾರ, ಪ್ರೊ.­ಬಿರಾದರ್ ಇತರರು ಹಾಜರಿದ್ದರು.
ಎಲೆರಾಂಪುರ ರುದ್ರಮೂರ್ತಿ ನಿರೂಪಿಸಿದರು. ಚೈತ್ರ ಸ್ವಾಗತಿಸಿದರು. ಕೆ.ಜಿ.ಚಂದನ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT