ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಜ್ಜನ ಕಾಯಕ ಇಲ್ಲಿ ನಿರಂತರ

Last Updated 2 ಅಕ್ಟೋಬರ್ 2012, 4:20 IST
ಅಕ್ಷರ ಗಾತ್ರ

ಸಂಡೂರು:  ದೇಶಕ್ಕೆ  ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮಾಗಾಂಧಿ ಸಂಡೂರಿಗೆ 1934ರಲ್ಲಿ ಭೇಟಿ ನೀಡಿದ ಸಂದರ್ಭದಲ್ಲಿ ಇಲ್ಲಿನ ವನಸಿರಿಯನ್ನು ಕಂಡು ಈ ಪ್ರದೇಶ ಮರುಭೂಮಿಯಲ್ಲಿ ಒಂದು ಓಯಾಸಿಸ್ ಇದ್ದಂತೆ ಎಂದು ಬಣ್ಣಿಸಿದ್ದರು. ಎಲ್ಲಕ್ಕಿಂತ ಮಿಗಿಲಾಗಿ ಈ ಭಾಗದ ರಾಜ ಮನೆತನಗಳಲ್ಲಿ ಪ್ರಮುಖವಾದ ಘೋರ್ಪಡೆ ರಾಜ ವಂಶಸ್ಥರು ಸಮಾಜದ ಕಟ್ಟಕಡೆಯ ಸ್ಥಾನದಲ್ಲಿ ಗುರುತಿಸಿಕೊಳ್ಳುತ್ತಿದ್ದ ದಲಿತ ಜನಾಂಗ ದವರಿಗೆ ದೇವಾಲಯಗಳಲ್ಲಿ  ಮುಕ್ತ ಅವಕಾಶ ನೀಡಿದ್ದನ್ನು ಕಂಡು ಪುಳಕಿತರಾಗಿದ್ದರು.
 
`ದಕ್ಷಿಣ ಭಾರತದ ಒಂದು  ಪುಟ್ಟ ಸಂಸ್ಥಾನ ಹರಿಜನರಿಗೆ ದೇವಸ್ಥಾನಗಳಲ್ಲಿ ಮುಕ್ತ ಪ್ರವೇಶ ನೀಡಿತ್ತು, ಆಕಾಶವೇನು ಕಳಚಿಬೀಳಲಿಲ್ಲ ~ (ಅ ಖಞಚ್ಝ್ಝ ಠಿಠಿಛಿ ಜ್ಞಿ ಟ್ಠಠಿ ಜ್ಞಿಜಿ  ಠಿಜ್ಟಟಡ್ಞಿ ಟಛ್ಞಿ ಠಿಛಿಞಟ್ಝಛಿ ಠಿಟ ಠಿಛಿ ಏಚ್ಟಜ್ಜಿಚ್ಞ, ಠಿಛಿ ಛಿಛ್ಞಿ ಛಿ ್ಞಟಠಿ ್ಛಚ್ಝ್ಝಛ್ಞಿ)  ಎಂದು ತಮ್ಮ ಪತ್ರಿಕೆಯಲ್ಲಿ ದಾಖಲಿಸಿರುವುದು ಸಂಡೂರಿನ  ಹೆಗ್ಗಳಿಕೆ ಎನ್ನಬಹುದು.

1985ರ ಅಕ್ಟೋಬರ್ 11ರಂದು ಮಹಾತ್ಮಾ ಗಾಂಧೀಜಿಯವರ 125ನೇ ಜನ್ಮ ದಿನಾಚರಣೆ ನಿಮಿತ್ತ ಅಂದಿನ ರಾಜ್ಯಪಾಲರಾಗಿದ್ದ ಖುರ್ಷಿದ್ ಆಲಂಖಾನ್, ಗಾಂಧೀಜಿ ಅವರು ಇಬ್ಬರು ದಲಿತ ಮಕ್ಕಳನ್ನು ಅಪ್ಪಿಕೊಂಡು ನಿಂತಿರುವ ಕಪ್ಪು ಅಮೃತ ಶಿಲೆಯಲ್ಲಿನ ಎತ್ತರದ ಮೂರ್ತಿಯನ್ನು ಅನಾವರಣಗೊಳಿಸಿದ್ದರು. ಗಾಂಧೀಜಿ ನೆನಪಿಗಾಗಿ ಪಟ್ಟಣದಲ್ಲಿ ಗ್ರಂಥಾಲಯ, ಹಳೇ ತ್ಲ್ಲಾಲೂಕು ಕಚೇರಿ ಬಳಿ ಚರಕದಿಂದ ನೂಲು ತೆಗೆಯುವ ಕೆಲಸಗಳು ಇಂದಿಗೂ ನಡೆಯತ್ತಿದೆ.

ಅಹಿಂಸಾ ಮಾರ್ಗದಿಂದ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟ ಇತಿಹಾಸ ಪ್ರಪಂಚದ ಯಾವುದೇ ದೇಶಕ್ಕೂ ಇಲ್ಲ. ಹಿಂಸೆ ನೀಡಿದ ಬ್ರಿಟಿಷ್ ಅಧಿಕಾರಿ ಮೌಂಟ್ ಬ್ಯಾಟನರನ್ನು ಸ್ವಾತಂತ್ರ್ಯಾ ನಂತರ  ಭಾರತದ ಮೊದಲ ಗೌರ‌್ನರ್ ಜನರಲ್ ಆಗಿ ಸೇವೆ ಸಲ್ಲಿಸಲು ಅವಕಾಶ ನೀಡಿದ್ದು, ಗಾಂಧೀಜಿ ಅವರ ಕ್ಷಮಾಗುಣವನ್ನು ತೋರಿಸುತ್ತದೆ. ಅವರ ತತ್ವ, ಚಿಂತನೆಗಳನ್ನು ನಮ್ಮ ಮುಂದಿನ ಪೀಳಿಗೆಗೆ ತಿಳಿಸಿಕೊಡಬೇಕಾದ ಕರ್ತವ್ಯವನ್ನು ನಾವು ಮರೆಯಬಾರದು ಎನುತ್ತಾರೆ ವಿರಕ್ತ ಮಠದ ಪ್ರಭುಸ್ವಾಮೀಜಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT