ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಣ್ಣಾ ಪರ ಪ್ರತಿಭಟನೆಗೆ ವಿದ್ಯಾರ್ಥಿ ಶಕ್ತಿ

Last Updated 26 ಆಗಸ್ಟ್ 2011, 6:50 IST
ಅಕ್ಷರ ಗಾತ್ರ

ವಿಜಾಪುರ: ಪ್ರಬಲ ಜನ ಲೋಕಪಾಲ ಮಸೂದೆಗೆ ಆಗ್ರಹಿಸಿ ಅಣ್ಣಾ ಹಜಾರೆ ನಡೆಸುತ್ತಿರುವ ಹೋರಾಟ ಬೆಂಬಲಿಸಿ ಜಿಲ್ಲೆಯಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ಮುಂದುವರೆದಿವೆ. ಗುರುವಾರ ವಿದ್ಯಾರ್ಥಿಗಳು ಹಾಗೂ ವಿವಿಧ ಸ್ವಯಂ ಸೇವಾ ಸಂಸ್ಥೆಯವರು ಬೀದಿಗಿಳಿದು ಪ್ರತಿಭಟನೆ ನಡೆಸಿದರು.  

ಅಣ್ಣಾ ಹಜಾರೆ ವೇದಿಕೆ ಹಾಗೂ ವಿವಿಧ ಪ್ರಗತಿಪರ ಸಂಘಟನೆಯವರು ವಿಶ್ವನಾಥ ಭಾವಿ, ಡಾ.ಕಂಠೀರವ ಕುಳ್ಳೊಳ್ಳಿ ಇತರರ ನೇತೃತ್ವದಲ್ಲಿ ಇಲ್ಲಿಯ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ನಡೆಸುತ್ತಿರುವ ಸತ್ಯಾಗ್ರಹ ಗುರುವಾರ ಹತ್ತನೇ ದಿನದಲ್ಲಿ ಮುಂದುವರೆದಿದೆ. ರೋಟರಿ ಹಿರಿಯ ನಾಗರಿಕ ವೇದಿಕೆಯವರು ಹಾಗೂ ಆಟೋ ಚಾಲಕರು ಈ ಹೋರಾಟಕ್ಕೆ ಬೆಂಬಲ ಸೂಚಿಸಿದರು.

ಬಿಎಲ್‌ಡಿಇ ಸಂಸ್ಥೆಯ ಎಂಜಿನಿಯರಿಂಗ್ ಕಾಲೇಜು ಹಾಗೂ ಪಾಲಿಟೆಕ್ನಿಕ್‌ನ ವಿದ್ಯಾರ್ಥಿಗಳು ಎಂಜಿನಿಯರಿಂಗ್ ಕಾಲೇಜಿನ ಎದುರು ಧರಣಿ ನಡೆಸಿದರು. ನಂತರ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿ ಮನವಿ ಸಲ್ಲಿಸಿದರು. ವಿದ್ಯಾರ್ಥಿ ಮುಖಂಡರಾದ ಅಜೀತ್ ವಠಾರ, ವಿಶ್ವನಾಥ ಚಿಕರಡ್ಡಿ, ಭ್ರಷ್ಟಾಚಾರದ ನಿರ್ಮೂಲನೆಗೆ ಪ್ರಬಲ ಜನ ಲೋಕಪಾಲ ಕಾಯ್ದೆ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

ವಿದ್ಯಾರ್ಥಿ ಮುಖಂಡರಾದ ಸಚಿನ್ ಕೊಕಟನೂರ, ಶಶಿಕಿರಣ ಮೇತ್ರಿ, ಅಮೋಲ ನಾಲ್ಗೆ, ಸಂತೋಷ ಪಾಟೀಲ, ಮೋಹನ್ ಸಂಧು, ಮಲ್ಲು ದೇಸಾಯಿ, ಅಮೃತಾ ಮೆಂಡಗುದ್ಲಿ, ಚಿನ್ನು ಗುಪ್ತಾ ಇತರರು ಪಾಲ್ಗೊಂಡಿದ್ದರು.

ಉಜ್ವಲ ಗ್ರಾಮೀಣ ಅಭಿವೃದ್ಧಿ ಸೇವಾ ಸಂಸ್ಥೆಯವರು ಜನಪರ ಸಂಘಟನೆಗಳ ಸಹಯೋಗದಲ್ಲಿ ಪ್ರತಿಭಟನಾ ರ‌್ಯಾಲಿ ಹಾಗೂ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಿದರು. ಇಲ್ಲಿಯ ಶಿವಾಜಿ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ಮೆರವಣಿಗೆ ನಡೆಸಿದರು.

ಅಣ್ಣಾ ಹಜಾರೆ ವೇದಿಕೆಯವರು ನಡೆಸುತ್ತಿರುವ ಸತ್ಯಾ ಗ್ರಹದಲ್ಲಿ ಪಾಲ್ಗೊಂಡರು. ಉಜ್ವಲ ಸಂಸ್ಥೆಯ ಸುನಂದಾ ತೋಳಬಂದಿ, ವಾಸುದೇವ ತೋಳ ಬಂದಿ, ಮಕ್ಕಳ ಬಳಗದ ಹ.ಮ. ಪೂಜಾರ ಮಾತ ನಾಡಿ, ಜನರು ಭ್ರಷ್ಟಾಚಾರದಿಂದ ನಲುಗಿ ಹೋಗಿದ್ದಾರೆ. ಜನಲೋಕಪಾಲ ಮಸೂದೆ ಜಾರಿಯಾದಲ್ಲಿ ದೇಶದ ಅಭಿವೃದ್ಧಿ ಸಾಧ್ಯ ಎಂದರು.

ಶಿವಶರಣಿ ಸಂಸ್ಥೆಯ ಶಾಂತಾಬಾಯಿ ಮಮ ದಾಪೂರ, ಗ್ರಾಮಬಂಧು ಸಂಸ್ಥೆಯ ಎಂ.ಎಫ್. ದಖನಿ, ಮಾತನಾಡಿದರು. ಕೆಎಚ್‌ಪಿಟಿ ಸಂಸ್ಥೆಯ ಜಯಕುಮಾರ ಹೊರಪೇಟಿ, ಮುರಗೇಶ ಇಂಗಳೆ, ಜಾಗೃತಿ ಸಂಘದ ಮಹಾದೇವಿ ಹುಲ್ಲೂರ, ನವ ಸ್ಪೂರ್ತಿ ಸಂಸ್ಥೆಯ ಇಸ್ಮಾಯಿಲ್ ಬಿದರಕುಂದಿ ಇತರರು ಪಾಲ್ಗೊಂಡಿದ್ದರು.

ತಾಲ್ಲೂಕಿನ ಬುರಣಾಪುರದ ಕಾಸ್ಮೋನಿಕೇತನ ಶಾಲೆಯ ಮಕ್ಕಳು ಹಾಗೂ ಶಿಕ್ಷಕರು ಅಣ್ಣಾ ಹೋರಾಟ ಬೆಂಬಲಿಸಿ ಪ್ರತಿಭಟನೆ ನಡೆಸಿದರು. ಸಂಸ್ಥೆಯ ಎಚ್.ಜಿ. ಕುಂಬಾರ, ಪ್ರಣವ ಕುಂಬಾರ, ಮುಖ್ಯಗುರು ಬಿ.ಎಸ್. ಅವಟಿ ಇತರರು ಪಾಲ್ಗೊಂಡಿದ್ದರು.

ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಜಿಲ್ಲಾ ಘಟಕದವರು ಪ್ರಬಲ ಜನ ಲೋಕಪಾಲ ಮಸೂದೆ ಜಾರಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಸಂಘದ ಅಧ್ಯಕ್ಷ ಎಸ್.ಎಲ್. ಗುಲ್ಬರ್ಗ, ಎಚ್.ಡಿ. ಮುಲ್ಲಾ, ಎಂ.ಎಸ್. ಮಸಳಿ, ಬಿ.ಎಚ್. ಮಹಾಬರಿ ಇತರರು ಪಾಲ್ಗೊಂಡಿದ್ದರು.

ಅಸ್ಕಿ ಗ್ರಾಮಸ್ಥರ ಬೆಂಬಲ
ತಾಳಿಕೋಟೆ: ಸಮೀಪದ ಅಸ್ಕಿ ಗ್ರಾಮದಲ್ಲಿ ಅಣ್ಣಾ ಹಜಾರೆ ಅವರ ಹೋರಾಟ ಬೆಂಬಲಿಸಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಪ್ರತಿಭಟನಾ ರ‌್ಯಾಲಿ ನಡೆಸಲಾಯಿತು.ರ‌್ಯಾಲಿಯಲ್ಲಿ ಎಸ್.ಎಸ್.ಪಾಟೀಲ, ಪ್ರಭುಗೌಡ ಬಿರಾದಾರ, ರಾಮನಗೌಡ ಬಿರಾದಾರ, ಸೋಮನ ಗೌಡ ನಾಡಪ್ಪಗೋಳ, ಸೋಮನಗೌಡ ಬಿರಾ ದಾರ, ರಡ್ಡಿ ನಾಡಪ್ಪಗೋಳ, ಗುರುಸ್ವಾಮಿ ಹಿರೇಮಠ, ರಾಮನಗೌಡ ಸಾಲವಾಡಗಿ, ಬಸನ ಗೌಡ ಜಕಣಿತೋಟ, ಸಿದ್ಧಯ್ಯ ಹಿರೇಮಠ, ರವಿ ಮಗದಾಳೆ ಮೊದಲಾದವರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT