ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಣ್ಣಾ ಹೋರಾಟಕ್ಕೆ ವ್ಯಾಪಕ ಬೆಂಬಲ

Last Updated 27 ಆಗಸ್ಟ್ 2011, 4:30 IST
ಅಕ್ಷರ ಗಾತ್ರ

ಕೊಪ್ಪಳ: ಭ್ರಷ್ಟಾಚಾರದ ವಿರುದ್ಧ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ನಡೆಸಿರುವ ಹೋರಾಟಕ್ಕೆ ಬೆಂಬಲ ಸೂಚಿಸಿ ಶುಕ್ರವಾರ ಸಹ ನಗರದಲ್ಲಿ ವಿವಿಧ ಸಂಘಟನೆಗಳು ಮೆರವಣಿಗೆ, ಪ್ರದರ್ಶನ ನಡೆಸಿದವು.
ಸರ್ಕಾರಿ ಕಚೇರಿಗಳಲ್ಲಿ ಲಂಚ ನೀಡದೇ ಯಾವುದೇ ಕೆಲಸ ಆಗುವುದಿಲ್ಲ.

ದೇಶದ ಆಡಳಿತ ವ್ಯವಸ್ಥೆಯ ಪ್ರತಿ ಹಂತದಲ್ಲಿ ಹಾಸುಹೊಕ್ಕಾಗಿರುವ ಭ್ರಷ್ಟಾಚಾರವನ್ನು ಬೇರು ಸಮೇತ ಕೊತ್ತೊಗೆಯಲು ಜನಲೋಕಪಾಲ ಮಸೂದೆಯನ್ನು ಜಾರಿಗೊಳಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ (ಎಬಿವಿಪಿ) ಜಿಲ್ಲಾ ಘಟಕದ ಕಾರ್ಯಕರ್ತರು ನಗರದ ಅಶೋಕ ವೃತ್ತದಲ್ಲಿ ಮಾನವ ಸರಪಳಿ ರಚನೆ ಮಾಡಿ, ಅಣ್ಣಾ ಹಜಾರೆ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.
ಸಂಘಟನೆಯ ಕಾರ್ಯ ಕಾರ್ಯಕಾರಿಣಿ ಸದಸ್ಯ ಅಮಿತ್ ಕಂಪ್ಲೀಕರ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶಿವಾನಂದ ಬಿರಾದಾರ, ಶರಣು, ರಾಕೇಶ ಕಾಂಬ್ಳೇಕರ್, ನೇತ್ರಾ, ಗಾಯತ್ರಿ, ನಂದಿನಿ, ಶ್ರೀದೇವಿ ಮತ್ತಿತರರು ನೇತೃತ್ವ ವಹಿಸಿದ್ದರು.

ಹಿಂದೂಸ್ತಾನ್ ಕೋಕಾಕೋಲಾ ಬೆವರೇಜಸ್ ಕಾರ್ಮಿಕರ ಸಂಘ ಹಾಗೂ ಹಿಂದೂಸ್ತಾನ್ ಕೋಕಾಕೋಲಾ ಬೆವರೇಜಸ್ ಗುತ್ತಿಗೆ ಕಾರ್ಮಿಕರ ಸಂಘಗಳ ಪದಾಧಿಕಾರಿಗಳು ಸಹ ಮೆರವಣಿಗೆ ನಡೆಸಿದರು.ಅಶೋಕ ವೃತ್ತದಿಂದ ಮೆರವಣಿಗೆ ಆರಂಭಿಸಿದ ಉಭಯ ಸಂಘಟನೆಗಳ ಕಾರ್ಯಕರ್ತರು, ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಪ್ರಧಾನ ಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದರು.

ಅಣ್ಣಾ ಹಜಾರೆ ನೇತೃತ್ವದ ತಂಡದ ಬೇಡಿಕೆಯಂತೆ ಜನಲೋಕಪಾಲ ಮಸೂದೆಯನ್ನು ಜಾರಿಗೆ ತರುವಂತೆ ಆಗ್ರಹಿಸಿದರು.ಉಭಯ ಸಂಘಗಳ ಅಧ್ಯಕ್ಷರಾದ ಚೆನ್ನವೀರಯ್ಯ ಹಿರೇಮಠ, ರಮೇಶಕಮಾರ್ ಮತ್ತಿತರರು ನೇತೃತ್ವ ವಹಿಸಿದ್ದರು.

ಕೊಪ್ಪಳ ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಒಕ್ಕೂಟದ ನೇತೃತ್ವದಲ್ಲಿ ನಡೆದ ಹೋರಾಟದಲ್ಲಿ ನಗರದಲ್ಲಿನ ವಿವಿಧ ವರ್ತಕರ ಸಂಘಟನೆಗಳು ಸದಸ್ಯರು ಪಾಲ್ಗೊಂಡಿದ್ದರು. ಗಡಿಯಾರಕಂಬದಿಂದ ಹೊರಟ ಮೆರವಣಿಗೆ ಜವಾಹರ್ ರಸ್ತೆ, ಅಶೋಕ ವೃತ್ತ ಹಾಗೂ ಮುಖ್ಯ ರಸ್ತೆ ಮೂಲಕ ಹಾಯ್ದು ಜಿಲ್ಲಾಧಿಕಾರಿ ಕಚೇರಿ ತಲುಪಿತು.

ಒಕ್ಕೂಟದ ಅಧ್ಯಕ್ಷ ಶ್ರೀನಿವಾಸ ಗುಪ್ತಾ, ಕಾರ್ಯದರ್ಶಿ ಎಸ್.ಬಿ.ಶಿವಯೋಗಪ್ಪ ಮತ್ತಿತರರು ಪಾಲ್ಗೊಂಡಿದ್ದರು.ತಾಲ್ಲೂಕಿನ ಅಳವಂಡಿ ಗ್ರಾಮದಲ್ಲಿ ಸಹ ವಿವಿಧ ಸಂಘ-ಸಂಸ್ಥೆಗಳು ಮೆರವಣಿಗೆ ನಡೆಸಿ ಅಣ್ಣಾ ಹಜಾರೆ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದವು.

ಗ್ರಾಮದ ಚೌಡಪ್ಪ ಜಂತ್ಲಿ, ನಾಗಪ್ಪ ಸವಡಿ, ಹನುಮಂತಪ್ಪ ಉಂಕಿ, ಶರಣಪ್ಪ ಜಡಿ, ಬಸವಗೌಡ್ರ ಕಲಾದಗಿ, ಬಸವರಾಜ ಬಳ್ಳಾರಿ, ಮಂಜುನಾಥ ಜಡಿ, ಪರಪ್ಪ ನಾಗರಳ್ಳಿ, ಶ್ರೀನಿವಾಸ ಕಲಾದಗಿ, ಶಿದ್ಲಿಂಗಯ್ಯ ನಂದಾಲಿ, ಯಂಕಪ್ಪ ವಡ್ಡರ, ಫಕೀರಪ್ಪ ಸಂಪಗಿ, ಅಂದಪ್ಪ ಶೆಟ್ರ, ಗೂಳರಡ್ಡ ತವದಿ, ವಿಜಯಕುಮಾರ ಧೋತರಗಾವಿ ಮತ್ತಿತರರು ಮೆರವಣಿಗೆಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT