ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಣ್ಣಾ–ಆಮ್‌ ಆದ್ಮಿ ಭಿನ್ನಮತ ಮತ್ತೆ ಬಹಿರಂಗ

ನಿರಶನ ವೇದಿಕೆಯಲ್ಲೇ ವಾಗ್ವಾದ
Last Updated 13 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ರಾಳೆಗಣಸಿದ್ದಿ (ಪಿಟಿಐ): ಅಣ್ಣಾ ತಂಡ ಮತ್ತು ಆಮ್‌ ಆದ್ಮಿ ಪಕ್ಷದ ನಡುವಿನ ಭಿನ್ನಾಭಿಪ್ರಾಯ ಸಾರ್ವ­ಜ­ನಿ­ಕವಾಗಿಯೇ ಬಹಿರಂಗ­ವಾಗಿದೆ.

ಅಣ್ಣಾ ಹಜಾರೆ ಉಪವಾಸ ನಡೆ­ಸುತ್ತಿ­ರುವ ಸ್ಥಳದಲ್ಲಿ ಸೇನೆಯ ಮಾಜಿ ಮುಖ್ಯಸ್ಥ ವಿ.ಕೆ. ಸಿಂಗ್‌ ಜೊತೆಗೆ ವಾಗ್ವಾ­ದಕ್ಕೆ ಇಳಿದ ಆಮ್‌ ಆದ್ಮಿ
ಪಕ್ಷ­ದ ಮುಖಂಡ ಗೋಪಾಲ್‌ ರಾಯ್‌ ಅವರನ್ನು ಸ್ಥಳದಿಂದ ಹೊರ ಹೋಗು­ವಂತೆ ಹಜಾರೆ ಅವರೇ ಸೂಚಿಸಿದರು.

ವಿ.ಕೆ. ಸಿಂಗ್‌ ಮಾತನಾಡುತ್ತಾ ‘ವೈಯಕ್ತಿಕ ಲಾಭಕ್ಕಾಗಿ ನಾವು ಭ್ರಷ್ಟಾಚಾರ ವಿರುದ್ಧದ ಹೋರಾಟ­ವನ್ನು ಒಡೆದು ಪ್ರತ್ಯೇಕ ಗುಂಪು ರಚಿಸಿಕೊಳ್ಳಬಾರದು’ ಎಂದು ಹೇಳಿದರು. ಸಿಂಗ್‌ ಅವರ ಹೇಳಿಕೆಗೆ, ಉಪ­ವಾಸ ಮುಗಿಯುವವರೆಗೆ ರಾಳೆ­ಗಣ­ಸಿದ್ದಿಯಲ್ಲಿ ಇರುವುದಕ್ಕೆ ಆಮ್‌ ಆದ್ಮಿ ಪಕ್ಷದಿಂದ ನಿಯೋಜಿತ­ರಾಗಿದ್ದ ಗೋಪಾಲ್‌ ರಾಯ್‌ ಆಕ್ಷೇಪ ವ್ಯಕ್ತ­ಪಡಿಸಿದರು. ಲೋಕ­ಪಾಲದ ಬಗ್ಗೆ ಮಾತ್ರ ಚರ್ಚಿಸಿ, ಇತರ ವಿಷಯ­ಗಳನ್ನು ಏಕೆ ಎಳೆದು ತರುತ್ತೀರಿ ಎಂದು ಪ್ರಶ್ನಿಸಿದರು.

ಆದರೆ ಈ ಸಂದರ್ಭದಲ್ಲಿ ಮಧ್ಯ­ಪ್ರವೇಶಿಸಿದ ಹಜಾರೆ, ಸಿಂಗ್‌ ಅವರ ಮಾತಿನ ಮಧ್ಯ ಪ್ರವೇಶಿಸದಂತೆ ರಾಯ್‌ಗೆ ಒರಟಾಗಿ ಹೇಳಿದರು.
ಘಟನೆ ನಂತರ ರಾಯ್‌ ಅವರನ್ನು ಆಮ್‌ ಆದ್ಮಿ ಪಕ್ಷ ರಾಳೆಗಣ­ಸಿದ್ದಿಯಿಂದ ಹಿಂದಕ್ಕೆ ಕರೆಸಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT