ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಣ್ವಸ್ತ್ರ:ಪಾಕ್ ಬ್ರಿಟನ್‌ಗಿಂತ ಮುಂದೆ

Last Updated 1 ಫೆಬ್ರುವರಿ 2011, 16:25 IST
ಅಕ್ಷರ ಗಾತ್ರ

ವಾಷಿಂಗ್ಟನ್/ನ್ಯೂಯಾರ್ಕ್ (ಪಿಟಿಐ): ಬರಾಕ್ ಒಬಾಮ ಅವರು 2009ರಲ್ಲಿ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಪಾಕಿಸ್ತಾನ ತನ್ನಲ್ಲಿನ ಅಣ್ವಸ್ತ್ರಗಳ ಸಂಗ್ರಹವನ್ನು ನಿಯಮಿತವಾಗಿ ಹೆಚ್ಚಿಸುತ್ತಿದೆ.  ಅಲ್ಲದೇ ಅಣ್ವಸ್ತ್ರಗಳ ದಾಸ್ತಾನಿನಲ್ಲಿ ಅದು ಬ್ರಿಟನ್ ಹಾಗೂ ಫ್ರಾನ್ಸ್ ರಾಷ್ಟ್ರಗಳನ್ನು ಹಿಂದಿಕ್ಕುವ ಸನಿಹದಲ್ಲಿದೆ ಎಂದು  ‘ನ್ಯೂಯಾರ್ಕ್ ಟೈಮ್ಸ್’ ಮಂಗಳವಾರ ವರದಿ ಮಾಡಿದೆ.

 ‘ಒಬಾಮ ಅಧಿಕಾರ ವಹಿಸಿಕೊಂಡ ಬಳಿಕ ಪಾಕಿಸ್ತಾನವು ತನ್ನ ಅಣ್ವಸ್ತ್ರಗಳ ಸಂಗ್ರಹವನ್ನು ನಿರಂತರವಾಗಿ ವಿಸ್ತರಿಸುತ್ತಿದೆ. ಅಣ್ವಸ್ತ್ರಗಳ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುತ್ತಿದೆ. ಆ ಮೂಲಕ ಅದು ಅಣ್ವಸ್ತ್ರಗಳ ಸಂಗ್ರಹದಲ್ಲಿ ಬ್ರಿಟನ್ ಅನ್ನು ಹಿಂದಿಕ್ಕಿ ವಿಶ್ವದ ಐದನೇ ಅತಿ ದೊಡ್ಡ ಅಣ್ವಸ್ತ್ರ ರಾಷ್ಟ್ರ ಎಂದು ಕರೆಸಿಕೊಳ್ಳಲು ದಾಪುಗಾಲು ಇಡುತ್ತಿರುವುದನ್ನು ಅಮೆರಿಕದ ನೂತನ ಗುಪ್ತಚರ ಮಾಹಿತಿ ದೃಢಪಡಿಸಿದೆ’ ಎಂದು ನ್ಯೂಯಾರ್ಕ್ ಟೈಮ್ಸ್ ವರದಿಯಲ್ಲಿ ತಿಳಿಸಿದೆ.

ಪಾಕಿಸ್ತಾನ ತನ್ನ ಅಣ್ವಸ್ತ್ರಗಳ ಸಂಖ್ಯೆಯನ್ನು 110ಕ್ಕೆ ಏರಿಸಿದೆ ಎಂದು ‘ವಾಷಿಂಗ್ಟನ್ ಪೋಸ್ಟ್’ ವರದಿ ಪ್ರಕಟಿಸಿದ ಒಂದು ದಿನದ ಬಳಿಕ  ‘ನ್ಯೂಯಾರ್ಕ್ ಟೈಮ್ಸ್’ ಈ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT