ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತಿಕ್ರಮಣ ತೆರವಿಗೆ ಗಡುವು

Last Updated 14 ಜನವರಿ 2011, 10:00 IST
ಅಕ್ಷರ ಗಾತ್ರ

ಲಿಂಗಸುಗೂರ: ಸರ್ವೋಚ್ಚ ನ್ಯಾಯಾ ಲಯದ ಆದೇಶದನ್ವಯ ಪಟ್ಟಣ ಪ್ರಮುಖ ರಸ್ತೆಗಳ ವಿಸ್ತರಣೆಗೆ ಜಿಲ್ಲಾ ಡಳಿತ ಮುಂದಾಗಿತ್ತು. ಸ್ಥಳೀಯ ಸಂಸ್ಥೆಗಳ ಚುನಾವಣೆ ನಂತರದಲ್ಲಿ ವಿಸ್ತರಣೆ ಮಾಡಲು ಮುಂದಾಗಿರುವ ತಾಲ್ಲೂಕು ಆಡಳಿತ ಪುನಃ ನಾಗರಿಕರ ಬೇಡಿಕೆಗೆ ಸ್ಪಂದಿಸಿ ಭಾನುವಾರ ದೊಳಗೆ ಅತಿಕ್ರಮಣ ತೆರವುಗೊಳಿಸು ವಂತೆ ತಹಸೀಲ್ದಾರ್ ಎಂ.ರಾಚಪ್ಪ ಗಡುವು ನೀಡಿದ್ದಾರೆ.

ಗುರುವಾರ ಬೆಳಿಗ್ಗೆ ಏಕಾಏಕಿ ಅತಿಕ್ರಮಣಗೊಂಡ ಪಟ್ಟಣದ ಗುರು ಗುಂಟಾ ರಸ್ತೆ ತೆರವು ಕಾರ್ಯಾ ಚರಣೆಗೆ ತಹಸೀಲ್ದಾರ್ ನೇತೃತ್ವದ ಸಿಬ್ಬಂದಿ ಆಗಮಿಸಿತ್ತು. ಹಿಂದೂ ಸಂಸ್ಕೃತಿಯ ಸಂಕ್ರಾಂತಿ ಹಬ್ಬದ ಆಚರ ಣೆಯಲ್ಲಿ ಜನತೆ ತೊಡಗಿದ್ದಾರೆ. ಇಂಥ ಸಂದರ್ಭದಲ್ಲಿ ಕಟ್ಟಡ ನೆಲಸಮಕ್ಕೆ ಮುಂದಾದರೆ ತೊಂದರೆ ಆಗುತ್ತದೆ ಎಂದು ಮುಖಂಡರು ಮನವಿ ಮಾಡಿಕೊಂಡರು.

ಹಬ್ಬದ ಪ್ರಯುಕ್ತ ಭಾನುವಾರ ದವರೆಗೆ ತಡೆಯಲಾಗುವುದು. ಭಾನು ವಾರದೊಳಗೆ ಸ್ವತಃ ತೆರವುಗೊಳಿಸಲು ಮುಂದಾದರೆ ಸಮಸ್ಯೆ ಇರುವುದಿಲ್ಲ. ಈಗಾಗಲೆ ನೀಡಿರುವ ಗುರುತಿನ ಪ್ರಕಾರ ಮಾಲೀಕರು ತಾಲ್ಲೂಕು ಆಡಳಿತದೊಂದಿಗೆ ಸಹಕರಿಸಬೇಕು. ಇಷ್ಟಕ್ಕೂ ಮೌನ ವಹಿಸಿದರೆ ಸೋಮ ವಾರದಿಂದ ತೆರವು ಕಾರ್ಯಾ ಚರಣೆಗೆ ಚಾಲನೆ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪುರಸಭೆ ಮಾಜಿ ಅದ್ಯಕ್ಷ ಮಲ್ಲಣ್ಣ ವಾರದ, ಹಿರಿಯ ಸದಸ್ಯರಾದ ಖಾದ ರಪಾಷ, ಕುಮಾರಸ್ವಾಮಿ ಸಾಲ್ಮನಿ. ಮುಖಂಡರಾದ ದೊಡ್ಡನ ಗೌಡ ಹೊಸಮನಿ, ಕುಪ್ಪೆರಾವ್ ಕುಲಕರ್ಣಿ ಮತ್ತಿತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT