ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಅತಿಥಿ'ಗೆ ಅವಮಾನ ಸಲ್ಲದು

Last Updated 5 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಸುಧಾಕರ ಹೊಸಳ್ಳಿ ಅವರು `ಸಂಗತ' ಅಂಕಣಕ್ಕೆ ಬರೆದ ಲೇಖನದಲ್ಲಿ (ಸೆ. 5) ಅತಿಥಿ ಉಪನ್ಯಾಸಕರ ಸಮಸ್ಯೆಯ ಬಗ್ಗೆ ನೀಡಿದ ಚಿತ್ರಣ ನೂರಕ್ಕೆ ನೂರರಷ್ಟು ಸತ್ಯ. ಅತಿಥಿ ಉಪನ್ಯಾಸಕರನ್ನು ನಡೆಸಿಕೊಳ್ಳುತ್ತಿರುವ ರೀತಿ ಸರಿಯಲ್ಲ. ಪ್ರಾಥಮಿಕ ಶಿಕ್ಷಕರಿಗೆ ತಿಂಗಳಿಗೆ ರೂ 5 ಸಾವಿರ, ಪ್ರೌಢಶಾಲಾ ಶಿಕ್ಷಕರಿಗೆ ರೂ 6 ಸಾವಿರ, ಕಾಲೇಜ್ ಉಪನ್ಯಾಸಕರಿಗೆ ರೂ 8 ಸಾವಿರ ಸಂಬಳ ಕೊಡುತ್ತಿದ್ದಾರೆ.

ಈ ಕಡಿಮೆ ಸಂಬಳದಲ್ಲಿ ಅವರು ತಮ್ಮ ವೃತ್ತಿಯಲ್ಲಿ ಸಂಪೂರ್ಣ ಸಮರ್ಪಣಾ ಭಾವದಿಂದ ವಿದ್ಯಾರ್ಥಿಗಳಿಗೆ ಕಲಿಸಲು ಸಾಧ್ಯವೇ?
ಸಂಬಳ ಸಾಲುತ್ತಿಲ್ಲ. ಶಾಲಾ ಕಾಲೇಜಿನಲ್ಲಿ ಉತ್ತಮ ರೀತಿಯಲ್ಲಿ ಪಾಠ ಹೇಳಿಕೊಟ್ಟರೂ `ಅತಿಥಿ'ಗಳು ಎಂಬ ಕಾರಣಕ್ಕೆ ಗೌರವ ಸಿಗುತ್ತಿಲ್ಲ. ಮುಳುಗುವವನಿಗೆ ಹುಲ್ಲು ಕಡ್ಡಿಯೇ ಆಸರೆ ಎಂಬ ಹಾಗೇ ಉದ್ಯೋಗ ಕಾಯಂ ಆಗಬಹುದು ಎಂಬ ಏಕೈಕ ಭರವಸೆ ಅವರನ್ನು ಮುನ್ನಡೆಸಿದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT