ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ಯಾಚಾರ: ಭಾರತೀಯ ವೈದ್ಯ ತಪ್ಪಿತಸ್ಥ

Last Updated 17 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಸಿಡ್ನಿ (ಐಎಎನ್‌ಎಸ್‌):  ಭಾರತ ಮೂಲದ ವೈದ್ಯನೊಬ್ಬ ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾಗಿದ್ದು, ಈತನನ್ನು ತಪ್ಪಿತಸ್ಥ ಎಂದು ಮಂಗಳವಾರ ಆಸ್ಟ್ರೇಲಿಯಾ ನ್ಯಾಯಾಲಯ ಹೇಳಿದೆ.

ಮನು ಮೈಮ್‌ಬಿಲ್ಲಿ ಗೋಪಾಲ್‌ ಅತ್ಯಾಚಾರ ಎಸಗಿದ ವೈದ್ಯ. ಹೊಟ್ಟೆ­ನೋವು ಎಂದು ಚಿಕಿತ್ಸೆಗೆ ಬಂದಿದ್ದ ಇಬ್ಬರು ಮಹಿಳೆಯರನ್ನು ಪರೀಕ್ಷೆ ಮಾಡುವ ನೆಪದಲ್ಲಿ ಅನುಮತಿ­ಯಿ­ಲ್ಲದೆ  ಜನನಾಂಗದಲ್ಲಿ ಬೆರಳು ತೂರಿಸಿ­­ದ್ದಾನೆ. ಈ ಕಾರಣ ನ್ಯಾಯಾ­ಲಯ ಈತನನ್ನು ತಪ್ಪಿತಸ್ಥ ಎಂದು ಹೇಳಿದೆ.

ಈತ ಮೂಲತಃ ಕೇರಳದ ಕೊಚ್ಚಿಯವನು. ಈತನ ಹೆಂಡತಿ ಮಗಳು ಕೊಚ್ಚಿಯಲ್ಲಿಯೇ ವಾಸಿಸು­ತ್ತಾರೆ ಎಂದು ಮೂಲಗಳು ತಿಳಿಸಿವೆ.
ಅತ್ಯಾಚಾರದ ಸಂಬಂಧ ಪ್ರಕರಣ ದಾಖಲಾಗಿರುವ ವಿಷಯ ತಿಳಿದು ಭಾರತಕ್ಕೆ ಬರಲು ಸಜ್ಜಾಗಿದ್ದ ವೈದ್ಯನನ್ನು ಮೆರ್ಲ್ಬನ್‌  ಅಂತರ­ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT