ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ಆಗಲಿ

Last Updated 23 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ದೆಹಲಿಯಲ್ಲಿ ವಿದ್ಯಾರ್ಥಿನಿಯ ಮೇಲಿನ ಅತ್ಯಾಚಾರ ವಿಚಾರ ತಿಳಿದು  ಆಘಾತವಾಯಿತು. ಇದು ನಾಗರಿಕ ಸಮಾಜವೇ ಎಂದೆನಿಸಿ ದಿಗ್ಭ್ರಾಂತಳಾದೆ. ಇತ್ತೀಚೆಗೆ ಈ ರೀತಿ ಗುಂಪು ಅತ್ಯಾಚಾರಗಳು ಶಿಶುವಿನಿಂದ ಹಿಡಿದು ವೃದ್ಧರವರೆಗೂ ನಡೆಯುತ್ತಲೆ ಇದೆ. ಆದರೆ  ನಿದರ್ಶನ ರೂಪದ ಶಿಕ್ಷೆ ಆಗುತ್ತಿಲ್ಲವೇಕೆ?

ಇನ್ನೊಂದೆಡೆ ಅಶ್ಲೀಲ ಸಿನಿಮಾ ಚಿತ್ರಗಳು, ಜಾಹೀರಾತುಗಳು ಮಹಿಳೆಯರನ್ನು ಕೀಳಾಗಿ ಪ್ರದರ್ಶಿಸುತ್ತಿವೆ. ಹೀಗಾಗಿ ಮಹಿಳೆಯರೆಂದರೆ ಭೋಗಲಾಲಸೆ ವಸ್ತುಗಳೆಂದು ಪರಿಗಣಿಸಲಾಗುತ್ತಿದೆ. ಮಹಿಳೆಯರನ್ನು ಕಂಡರೆ ಪ್ರಾಣಿಗಳಂತೆ ಬೇಟೆಯಾಡಿ ಹೀನಕೃತ್ಯವೆಸಗುತ್ತಿರುವುದು, ವಿಚಿತ್ರ ಸಂತೋಷ ಪಡೆಯುತ್ತಿರುವುದನ್ನು ನೋಡಿದರೆ ವಿಷಾದವೆನಿಸುತ್ತದೆ. ಹೆಣ್ಣುಮಕ್ಕಳ ಮೇಲಾಗುವ ಇಂಥ ಯಾವುದೇ ದುಷ್ಕೃತ್ಯಕ್ಕೆ ಕಠಿಣ ಶಿಕ್ಷೆ ಕೊಡಬೇಕು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT