ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಥ್ಲೆಟಿಕ್: ಖ್ಯಾತಿಗೆ ಬೆಳ್ಳಿ, ಮೂರನೇ ದಿನ ಕರ್ನಾಟಕಕ್ಕೆ ಏಕೈಕ ಪದಕ...

Last Updated 13 ಜೂನ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಚಿನ್ನದ ಹುಡುಗಿ ಕರ್ನಾಟಕದ ಅಶ್ವಿನಿ ಅಕ್ಕುಂಜಿ ಅವರ ಅಲಭ್ಯತೆಯ ಲಾಭ ಪಡೆದ ಪಂಜಾಬ್‌ನ ಸಪಿಂದರ್ ಕೌರ್ ಇಲ್ಲಿ ನಡೆಯುತ್ತಿರುವ 51ನೇ ರಾಷ್ಟ್ರೀಯ ಸೀನಿಯರ್ ಅಂತರ ರಾಜ್ಯ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನ ಮಹಿಳೆಯರ 400 ಮೀ. ಹರ್ಡಲ್ಸ್ ನಲ್ಲಿ ಮೊದಲ ಸ್ಥಾನ ಪಡೆದರು.

ಅಶ್ವಿನಿ ಸ್ಪರ್ಧಿಸದ ಕಾರಣ ಕಂಠೀರವ ಕ್ರೀಡಾಂಗಣದಲ್ಲಿ ಸೋಮವಾರ ಸಂಜೆ ಸಪಿಂದರ್‌ಗೆ ಅಷ್ಟೇನು ಪೈಪೋಟಿ ಎದುರಾಗಲಿಲ್ಲ. ಕೇರಳದ ಎಂ.ಎಸ್.ದರ್ಶನಾ ಹಾಗೂ ಕೆ.ಎ.ಸೋನಿಯಾ ನಂತರದ ಸ್ಥಾನ ಪಡೆದರು. ಕೈನೋವಿನಿಂದ ಚೇತರಿಸಿಕೊಳ್ಳುತ್ತಿರುವ ಅಶ್ವಿನಿ ಮುನ್ನೆಚ್ಚರಿಕೆ ಕ್ರಮವಾಗಿ 400 ಮೀ. ಹರ್ಡಲ್ಸ್‌ನಲ್ಲಿ ಪಾಲ್ಗೊಳ್ಳಲಿಲ್ಲ. ಅವರು ಈ ವಿಭಾಗದಲ್ಲಿ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನ ಜಯಿಸಿದ್ದರು.

ಆದರೆ ಅಚ್ಚರಿ ಫಲಿತಾಂಶ ಬಂದಿದ್ದು ಪುರುಷರ ವಿಭಾಗದ 400 ಮೀ. ಹರ್ಡಲ್ಸ್‌ನಲ್ಲಿ. ಏಕೆಂದರೆ ರಾಷ್ಟ್ರೀಯ ದಾಖಲೆ ಹೊಂದಿರುವ ಹಾಗೂ ಏಷ್ಯನ್ ಕೂಟದಲ್ಲಿ ಚಿನ್ನದ ಪದಕ ಜಯಿಸಿದ್ದ ಕೇರಳದ ಜೋಸೆಫ್ ಅಬ್ರಹಾಂ ಆಘಾತಕ್ಕೆ ಒಳಗಾದರು. ಕಾರಣ ಅಬ್ರಹಾಂ ಅವರನ್ನು ಹಿಂದಿಕ್ಕಿದ ಪಂಜಾಬ್‌ನ ಸತಿಂದರ್ ಸಿಂಗ್ ಬಂಗಾರ ಗೆದ್ದರು.

ಹಿಂದೆ ಸರಿದ ಮಯೂಖಾ: 13 ದಿನಗಳ ಹಿಂದೆ ನಡೆದ ಏಷ್ಯನ್ ಗ್ರ್ಯಾನ್‌ಪ್ರಿ ಅಥ್ಲೆಟಿಕ್ ಕೂಟದ ಟ್ರಿಪಲ್ ಜಂಪ್‌ನಲ್ಲಿ ನೂತನ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದ ಕೇರಳದ ಮಯೂಖಾ ಜಾನಿ ಇಲ್ಲಿ ಪಾಲ್ಗೊಳ್ಳಲಿಲ್ಲ. ಇದರ ನೆರವು ಪಡೆದ ಮಯೂಖಾ ಅವರ ಸ್ನೇಹಿತೆ ಎಂ.ಎ.ಪ್ರಜುಷಾ ಚಿನ್ನದ ಪದಕ ಗೆದ್ದರು.
 
ಕಾಮನ್‌ವೆಲ್ತ್ ಯೂತ್ ಕ್ರೀಡಾಕೂಟದ ಚಾಂಪಿಯನ್ ಮಹಾರಾಷ್ಟ್ರದ ಶ್ರದ್ಧಾ ಘುಲೆ ಬೆಳ್ಳಿ ಜಯಿಸಿದರು. ಮಯೂಖಾ ಲಾಂಗ್‌ಜಂಪ್‌ನಲ್ಲಿ ಮೊದಲ ಸ್ಥಾನ ಗಳಿಸಿದ್ದರು. ಆದರೆ ಜಪಾನ್‌ನಲ್ಲಿ ನಡೆಯಲಿರುವ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಅವರು ಟ್ರಿಪಲ್ ಜಂಪ್‌ನಲ್ಲಿ ಸ್ಪರ್ಧಿಸಲಿದ್ದಾರೆ.

ಪೋಲ್ ವಾಲ್ಟ್‌ನಲ್ಲಿ ಕರ್ನಾಟಕದ ಖ್ಯಾತಿ ಬೆಳ್ಳಿ ಪದಕ ಗೆದ್ದರು. ಮೂರನೇ ದಿನದ ಸ್ಪರ್ಧೆಯಲ್ಲಿ ರಾಜ್ಯಕ್ಕೆ ಲಭಿಸಿದ ಏಕೈಕ ಪದಕವಿದು.

ಫಲಿತಾಂಶ ಇಂತಿವೆ:
ಪುರುಷರ ವಿಭಾಗ: 400 ಮೀ. ಹರ್ಡಲ್ಸ್: ಸತಿಂದರ್ ಸಿಂಗ್ (ಪಂಜಾಬ್; 51.13 ಸೆ.)-1, ಜೋಸೆಫ್ ಅಬ್ರಹಾಂ (ಕೇರಳ; 51.41 ಸೆ.)-2, ಅವಿನ್ ಥಾಮಸ್ (ಕೇರಳ; 51.89 ಸೆ.)-3. ಹೈಜಂಪ್: ಜಿತಿನ್ ಥಾಮಸ್ (ಮಹಾರಾಷ್ಟ್ರ; 2.10 ಮೀ.ಎತ್ತರ)-1, ಎಲ್.ಯೋಗರಾಜ್ (ತಮಿಳುನಾಡು; 2.10 ಮೀ.)-2, ನಿಖಿಲ್ ಚಿತ್ರಾಸು (ತಮಿಳುನಾಡು; 2.10)-3.

ಷಾಟ್‌ಪಟ್: ಸೌರವ್ ವಿಜ್ (ದೆಹಲಿ; 18.99ಮೀ. ದೂರ)-1, ಬುಧಿಸತ್ವ (ಮಧ್ಯಪ್ರದೇಶ; 17.98ಮೀ.)-2, ಜಾಗ್ರೂಪ್ ಸಿಂಗ್ (ಪಂಜಾಬ್; 17.85ಮೀ.)-3. ಹ್ಯಾಮರ್ ಥ್ರೋ: ಹರ್ವಿಂದರ್ ಸಿಂಗ್ (ಉತ್ತರಪ್ರದೇಶ; 66.21ಮೀ.)-1, ಚಂದ್ರೋದಯ ನಾರಾಯಣ (ಉತ್ತರಪ್ರದೇಶ; 63.44 ಮೀ.)-2, ಶಿವಕುಮಾರ್ (ಉತ್ತರಾಖಂಡ; 61.90ಮೀ.)-3. 5000
 
ಮೀ.: ಸುರೇಶ್ ಪಟೇಲ್ (ಉತ್ತರಪ್ರದೇಶ; 14:11.47)-1, ಅರ್ಜುನ್ ಪ್ರಧಾನ್ (ಉತ್ತರಾಖಂಡ; 14:13.70)-2, ರಾಹುಲ್ ಪಟೇಲ್ (ಮಹಾರಾಷ್ಟ್ರ; 14:16.82)-3.

ಮಹಿಳೆಯರ ವಿಭಾಗ: 400 ಮೀ. ಹರ್ಡಲ್ಸ್: ಸಪಿಂದರ್ ಕೌರ್ (ಪಂಜಾಬ್; 1:00.56)-1, ಎಂ.ಎಸ್.ದರ್ಶನಾ (ಕೇರಳ; 1:01.45)-2, ಕೆ.ಎ.ಸೋನಿಯಾ (ಕೇರಳ; 1:02.65)-3. ಟ್ರಿಪಲ್ ಜಂಪ್: ಎಂ.ಎ.ಪ್ರಜುಷಾ (ಕೇರಳ; 13.53 ಮೀ.)-1, ಶ್ರದ್ಧಾ ಘುಲೆ (ಮಹಾರಾಷ್ಟ್ರ; 12.80 ಮೀ.)-2, ಅಮಿತಾ ಬೇಬಿ (ಕೇರಳ; 12.61ಮೀ.)-3. 5000 ಮೀ.: ಕವಿತಾ ರಾವುತ್ (ಮಹಾರಾಷ್ಟ್ರ; 17:00.89)-1, ಎಲ್.ಸೂರ್ಯಾ (ತಮಿಳುನಾಡು; 17:01.00)-2, ಪ್ರೀಜಾ ಶ್ರೀಧರನ್ (ಕೇರಳ; 17:01.22)-3. ಪೋಲ್

ವಾಲ್ಟ್: ರೆಮ್ಯಾ (ಕೇರಳ; 3.40 ಮೀ.)-1, ಖ್ಯಾತಿ (ಕರ್ನಾಟಕ; 3.40ಮೀ.)-2, ಕಿರಂಬೀರ್ ಕೌರ್ (ಪಂಜಾಬ್; 3.30 ಮೀ.)-3. ಹೆಪ್ಟಾಥ್ಲಾನ್: ಸುಶ್ಮಿತಾ ಸಿಂಗ್ ರಾಯ್(ಪಶ್ಚಿಮ ಬಂಗಾಳ; 5625 ಪಾಯಿಂಟ್)-1, ನವಪ್ರೀತ್ ಕೌರ್ (ಪಂಜಾಬ್; 5070)-2, ಡಿ.ಕಪುರ್‌ಮಾಲಾ (ತಮಿಳುನಾಡು; 4911)-3.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT