ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಥ್ಲೆಟಿಕ್ಸ್ ಅಧಿಕಾರಿ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ

Last Updated 17 ಫೆಬ್ರುವರಿ 2011, 18:40 IST
ಅಕ್ಷರ ಗಾತ್ರ

ರಾಂಚಿ (ಪಿಟಿಐ): ಉತ್ತರ ಪ್ರದೇಶದ ಅಥ್ಲೀಟ್ ಪ್ರಿಯಾಂಕ ಪನ್ವಾರ್ ಅವರು ಇಲ್ಲಿ ನಡೆಯುತ್ತಿರುವ 34ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾರತ ಅಥ್ಲೆಟಿಕ್ ಫೆಡರೇಷನ್‌ನ (ಎಎಫ್‌ಐ) ತಾಂತ್ರಿಕ ಅಧಿಕಾರಿ ಅನು ಕುಮಾರ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪವೆಸಗಿದ್ದಾರೆ.

ಅನು ನಾಲ್ಕು ವರ್ಷಗಳಿಂದ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು 24 ವರ್ಷ ವಯಸ್ಸಿನ ಪ್ರಿಯಾಂಕ ಆಪಾದಿಸಿದ್ದಾರೆ. ಅದಕ್ಕೆ ವಿರೋಧ ವ್ಯಕ್ತಪಡಿಸಿದರೆ ತಂಡದಿಂದ ಕೈಬಿಡುವುದಾಗಿ ಬೆದರಿಕೆ ಹಾಕುತ್ತಾರೆ ಎಂದೂ ಅವರು ದೂರಿದ್ದಾರೆ.

ಈ ಸಂಬಂಧ ಪ್ರಿಯಾಂಕ ಅವರ ಪೋಷಕರು ಮುಜಾಫರ್‌ನಗರದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ‘ದೂರು ನೀಡಿರುವುದು ನಿಜ. ನನಗೆ ಮಾತ್ರವಲ್ಲ; ಉಳಿದ ಅಥ್ಲೀಟ್‌ಗಳ ಮೇಲೂ ಅನು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ’ ಎಂದು 100 ಮೀಟರ್‌ನಲ್ಲಿ ಗುರುವಾರ ಕಂಚಿನ ಪದಕ ಜಯಿಸಿದ ಬಳಿಕ ಪ್ರಿಯಾಂಕ ಸುದ್ದಿಗಾರರಿಗೆ ತಿಳಿಸಿದರು.

ಆದರೆ ಹೆಚ್ಚಿನ ವಯೋಮಿತಿ ಕಾರಣ ಸಹೋದರ ಅರುಣ್ ಅವರನ್ನು ಕ್ರೀಡಾಕೂಟದಿಂದ ಕೈಬಿಟ್ಟಿದ್ದಕ್ಕೆ ಪ್ರಿಯಾಂಕ ತಮ್ಮ ವಿರುದ್ಧ ಬ್ಲಾಕ್ ಮೇಲ್ ತಂತ್ರ ಅನುಸರಿಸುತ್ತಿದ್ದಾರೆ. ಈ ಸಂಬಂಧ ನಾವು ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದೇವೆ ಎಂದು ಅನು ಹಾಗೂ ಅವರ ಪತ್ನಿ ನಿಧಿ ನುಡಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT