ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿವೇಶನಕ್ಕೆ ಹಾಜರಾದ ಸೂ ಕಿ

Last Updated 9 ಜುಲೈ 2012, 19:30 IST
ಅಕ್ಷರ ಗಾತ್ರ

ನೇಪಿತೌ (ಮ್ಯಾನ್ಮಾರ್) (ಎಎಫ್‌ಪಿ): ದೇಶದಲ್ಲಿ ಪ್ರಜಾತಂತ್ರ ವ್ಯವಸ್ಥೆ ಸ್ಥಾಪಿಸಲು ಕಾಲು ಶತಮಾನಗಳಿಂದ ಹೋರಾಡಿದ ಮ್ಯಾನ್ಮಾರ್‌ನ ಪ್ರತಿಪಕ್ಷದ ನಾಯಕಿ ಆಂಗ್ ಸಾನ್ ಸೂ ಕಿ ಅವರು ಸಂಸತ್‌ನ ಅಧಿವೇಶನಕ್ಕೆ ಸೋಮವಾರ ಹಾಜರಾದರು.

ಯಾವುದೇ ಉದ್ವೇಗ ಇಲ್ಲದೆ, ಶಾಂತಚಿತ್ತರಾಗಿದ್ದ ಸೂ ಕಿ ಸಂಸತ್‌ಗೆ ಆಗಮಿಸಿದರು. ಈ ಸಂದರ್ಭದಲ್ಲಿ ಸುದ್ದಿಸಂಸ್ಥೆ ಜತೆ ಮಾತನಾಡಿದ ಅವರು `ದೇಶದ ಒಳಿತಿಗಾಗಿ ಶಕ್ತಿ ಮೀರಿ ಶ್ರಮಿಸುವೆ~ ಎಂದರು.

ಸೂ ಕಿ ಅವರು ಕಳೆದ ವಾರವೇ ಅಧಿವೇಶನದಲ್ಲಿ ಭಾಗವಹಿಸಬೇಕಿತ್ತು. ಆದರೆ, ಯೂರೋಪ್ ಪ್ರವಾಸದ ಬಳಲಿಕೆ ಮತ್ತು ತಮ್ಮ ಕ್ಷೇತ್ರಕ್ಕೆ ಭೇಟಿ ನೀಡುವ ಕಾರ್ಯಕ್ರಮ ಇದ್ದ ಕಾರಣ ಅವರು ಅಧಿವೇಶನದಲ್ಲಿ ಭಾಗವಹಿಸುವುದನ್ನು ಮುಂದೂಡಿದ್ದರು.

ಇದೇ ಮೊದಲ ಬಾರಿಗೆ ಸಂಸತ್ ಅಧಿವೇಶನದಲ್ಲಿ ಭಾಗವಹಿಸುತ್ತಿರುವ ಸೂ ಕಿ ಅವರ ಆಗಮನಕ್ಕೆ ವಿಶೇಷವಾದ ಸಿದ್ಧತೆಗಳೇನು ಮ್ಯಾನ್ಮಾರ್ ಸಂಸತ್‌ನ ಕೆಳಮನೆಯಲ್ಲಿ ಇರಲಿಲ್ಲ. ಬೆಳಿಗ್ಗೆ ನಡೆದ ಕಲಾಪದಲ್ಲಿ ಭಾಗವಹಿಸಿ ಮಾತನಾಡಿದ ಸದಸ್ಯರ ಮಾತುಗಳನ್ನು ಅವರು ಆಸಕ್ತಿಯಿಂದ ಆಲಿಸಿದರು.

`ನಾಯಕಿ ಸೂ ಕಿ ಅವರನ್ನು ಸಂಸತ್ ಅಧಿವೇಶನದಲ್ಲಿ ನೋಡುತ್ತಿರುವುದು ಸಂತೋಷವನ್ನುಂಟು ಮಾಡಿದೆ. ನಾವು ಅವರ ಬೆಂಬಲಕ್ಕೆ ಸದಾ ಇರುತ್ತೇವೆ~ ಎಂದು `ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ~ (ಎನ್‌ಎಲ್‌ಡಿ) ಸಂಸದೆ ಮೇ ವಿನ್ ಮಿಯಿಂಟ್ ಹೇಳಿದ್ದಾರೆ.

`ಸೂ ಕಿ ಅವರು ಇಂದು ಸಂಸತ್‌ಗೆ ಆಗಮಿಸಿದ್ದು ಸಂತೋಷಕರ, ಅವರನ್ನು ಸ್ವಾಗತಿಸುತ್ತೇವೆ~ ಎಂದು ಸೇನಾ ಮುಖ್ಯಸ್ಥ  ವೇ ಲಿನ್ ತಿಳಿಸಿದ್ದಾರೆ.

ಸೂ ಕಿ ನೇತೃತ್ವದ ಎನ್‌ಎಲ್‌ಡಿ ಮ್ಯಾನ್ಮಾರ್ ಸಂಸತ್‌ನ ಕೆಳ ಮನೆಯಲ್ಲಿ 37 ಸ್ಥಾನಗಳಿಸಿದ್ದರೂ ಸಂಸತ್‌ನ ಕೆಳಮನೆ ಈಗಲೂ ಸೇನೆಯ ಹಿಡಿತದಲ್ಲೇ ಇದೆ. ಸೇನೆ ಮತ್ತು ಮಿತ್ರ ಪಕ್ಷಗಳ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲೇ ಇದ್ದಾರೆ. ಆದರೂ ಸೇನೆಯವರು ಸೂಕಿ ಅವರನ್ನು ನೋಡಲು ಸಂಸತ್‌ನಲ್ಲಿ ತವಕಿಸುತ್ತಿದ್ದರು.

ಮ್ಯಾನ್ಮಾರ್ ಸಂವಿಧಾನವು ಸೇನಾ ಅಧಿಕಾರಿಗಳಿಗೆ ಸಂಸತ್‌ನಲ್ಲಿ ಶೇ 25ರಷ್ಟು ಸ್ಥಾನವನ್ನು ಕಲ್ಪಿಸಿಕೊಟ್ಟಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT