ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧ್ಯಕ್ಷರಾಗಿ ಪುಷ್ಪಾ, ಉಪಾಧ್ಯಕ್ಷರಾಗಿ ಸುಮಿತ್ರಾ ಆಯ್ಕೆ

ಉಪ್ಪಿನಬೆಟಗೇರಿ ಗ್ರಾಮ ಪಂಚಾಯಿತಿ
Last Updated 19 ಡಿಸೆಂಬರ್ 2012, 8:14 IST
ಅಕ್ಷರ ಗಾತ್ರ

ಉಪ್ಪಿನ ಬೆಟಗೇರಿ (ತಾ.ಧಾರವಾಡ):  ಇಲ್ಲಿಯ ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯ ಕ್ಷ ಸ್ಥಾನಕ್ಕೆ ಭಾನುವಾರ ನಡೆದ ಎರಡನೇ ಸುತ್ತಿನ ಚುನಾವಣೆಯಲ್ಲಿ ಪುಪ್ಷಾ ದೊಡವಾಡ ಅಧ್ಯಕ್ಷ ರಾಗಿ ಹಾಗೂ ಸಮಿತ್ರಾ ಗೌರಿಮಠ ಉಪಾಧ್ಯಕ್ಷರಾಗಿ ಆಯ್ಕೆ ಯಾದರು.

ಮೀನಾಕ್ಷಿ ಗುರ್ಲಕಟ್ಟಿ ಹಾಗೂ ಪುಷ್ಟಾ ದೊಡವಾಡ ಅವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರೆ, ಸುಮಿತ್ರಾ ಗೌರಿಮಠ ಹಾಗೂ ಸಾಯಿರಾಬಾನು ಲಾಲ್ಮಿಯಾ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರು. 25 ಜನ ಸದಸ್ಯರನ್ನು ಒಳಗೊಂಡಿದ್ದ ಚುನಾವಣೆಯಲ್ಲಿ ಪುಷ್ಪಾ ದೊಡವಾಡ ಅವರು 16 ಮತಗಳನ್ನು ಪಡೆದುಕೊಳ್ಳುವುದರ ಮೂಲಕ ಪ್ರತಿಸ್ಪರ್ಧಿಯಾಗಿದ್ದ ಮೀನಾಕ್ಷಿ ಗುರ್ಲಕಟ್ಟಿ ಅವರನ್ನು ಸೋಲಿಸಿ ಅಧ್ಯಕ್ಷ ಸ್ಥಾನದ ಗದ್ದುಗೆ ಏರಿದರು.

ಇತ್ತ ಉಪಾಧ್ಯಕ್ಷ ಸ್ಥಾನಕ್ಕೆ ನಡೆದಿದ್ದ ತುರುಸಿನ ಚುನಾವಣೆಯಲ್ಲಿ ಸುಮಿತ್ರಾ ಗೌರಿಮಠ 14 ಮತಗಳನ್ನು ಪಡೆದುಕೊಳ್ಳುವುದರ ಮೂಲಕ  ಪ್ರತಿಸ್ಪರ್ಧಿ ಯಾಗಿದ್ದ ಸಾಯಿರಾಬಾನು ಲಾಲ್ಮಿಯಾ ಅವರನ್ನು ಸೋಲಿಸಿ ಉಪಾಧ್ಯಕ್ಷರ ಕುಚಿ ಏರಿದರು. ಕಳೆದ ಮೂರು ದಿನಗಳಿಂದ ತೀವ್ರ ಕುತೂಹಲ ಕೆರಳಿಸಿದ್ದ ಈ ಗ್ರಾ.ಪಂ.ಚುನಾವಣೆಯಲ್ಲಿ ಭಾನು ವಾರ ಶಾಂತಿಯುತ ಮತದಾನ ನಡೆಯಿತು.

ಚುನಾವಣಾ ಅಧಿಕಾರಿಯಾಗಿದ್ದ ಬಿ.ಕೆ.ಅಕ್ಕೂರ ವಿಜೇತ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದರು. ಗ್ರಾ.ಪಂ ಕಾರ್ಯದರ್ಶಿ ಬಿ.ಎಸ್.ರಾಠೋಡ, ಗ್ರಾ.ಪಂ.ಸದಸ್ಯರಾದ ಮಕ್ತುಮ್ ತಟಗಾರ, ಕಲ್ಲಪ್ಪ ಬೊಬ್ಬಿ, ಮಡಿವಾಳಪ್ಪ ಜವಳಗಿ, ವಿನಾಯಕ ಅಷ್ಟಗಿ, ಶೈಲಾ ಪೂಜಾರ, ಆದಮಸಾಬ್ ಸೈಯ್ಯದ ನವರ ಅವರು ವಿಜೇತ ಅಭ್ಯರ್ಥಿಗಳಿಗೆ ಅಭಿನಂದಿಸಿದರು.

ಮುಗದ ಗ್ರಾ.ಪಂ: ಅವಿರೋಧ ಆಯ್ಕೆ
ಧಾರವಾಡ:
ತಾಲ್ಲೂಕಿನ ಮುಗದ ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಎರಡನೇ ಅವಧಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಶಾಂತಾ ಕಾಳೆಗೌಡರ, ಉಪಾಧ್ಯಕ್ಷರಾಗಿ ರೆಹಮಾನ್ ಮುಜಾವರ್ ಅವಿರೋಧವಾಗಿ ಆಯ್ಕೆಯಾದರು.

ಅಧ್ಯಕ್ಷ ಸ್ಥಾನ ಅ ವರ್ಗದ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಪುರುಷ ವರ್ಗಕ್ಕೆ ಮೀಸಲಿದ್ದವು. ಚುನಾವಣಾಧಿಕಾರಿ ಈರಣ್ಣ ಅವರು ಇವರಿಬ್ಬರ ಆಯ್ಕೆಯನ್ನು ಘೋಷಿಸಿದರು. ತಾ.ಪಂ.ಮಾಜಿ ಅಧ್ಯಕ್ಷ ಕಲ್ಲಪ್ಪ ಹಟ್ಟಿ, ಎಸ್.ಎಸ್.ಪೀರಜಾದೆ, ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಹನುಮಂತ ಹುಲ್ಲಪ್ಪನವರ, ಎಸ್‌ಡಿಎಂಸಿ ಅಧ್ಯಕ್ಷ ಪುಂಡಲೀಕ ಬೋವಿ ಮತ್ತಿತರರು ಈ ಸಂದರ್ಭದಲ್ಲಿದ್ದರು.

ನರೇಂದ್ರ ಗ್ರಾ.ಪಂ. ಸುಶೀಲಾ ಅಧ್ಯಕ್ಷೆ
ಧಾರವಾಡ:
ತಾಲ್ಲೂಕಿನ ನರೇಂದ್ರ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಸುಶೀಲಾ ಪಾಟೀಲ ಮತ್ತು ಉಪಾಧ್ಯಕ್ಷರಾಗಿ ಶ್ರೀಕಾಂತ ಮುತಾಲಿಕ ದೇಸಾಯಿ ಅವರು ಭಾನುವಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾದರು. 22 ಜನ ಸದಸ್ಯ ಬಲದ ಗ್ರಾಮ ಪಂಚಾಯಿತಿಯ ಎರಡನೇ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಆಯ್ಕೆಗಾಗಿ ನಡೆದ ಚುನಾವಣೆಯು ಭಾರೀ ತುರುಸಿನಿಂದ ಕೂಡಿತ್ತು.

ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಮತ್ತು ಉಪಾಧ್ಯಕ್ಷ ಸ್ಥಾನ ಹಿಂದುಳಿದ ಬ ವರ್ಗಕ್ಕೆ ಮೀಸಲಾಗಿತ್ತು. ಚುನಾವಣಾಧಿಕಾರಿಯಾಗಿ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಎಸ್.ಎನ್. ಮಳ್ಳಪ್ಪನ ವರ ಕಾರ್ಯನಿರ್ವಹಿಸಿದರು. ಅನಂತ ಮುತಾಲಿಕ ದೇಸಾಯಿ, ಯಲ್ಲಪ್ಪ ಪೂಜಾರ, ನಿಜಗುಣಿ ದೇಸಾಯಿ, ಈಶ್ವರ ಆಯಗಾರ, ಚನ್ನವೀರಗೌಡ ಪಾಟೀಲ, ಚನ್ನಪ್ಪ ಬೆಣ್ಣಿ, ಹುಸೇನಸಾಬ್ ವಾಲೀಕಾರ ಮತ್ತಿತರರು ಈ ಸಂದರ್ಭದಲ್ಲಿದ್ದರು.

ಗರಗ: ಅವಿರೋಧವಾಗಿ ಆಯ್ಕೆ
ಧಾರವಾಡ:
ತಾಲ್ಲೂಕಿನ ಗರಗ ಗ್ರಾಮದ ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ, ಅಧ್ಯಕ್ಷರಾಗಿ ಪಾರ್ವತಿ ಉಳವಣ್ಣವರ ಹಾಗೂ ಉಪಾಧ್ಯಕ್ಷರಾಗಿ ಗೌರವ್ವ ಅಂಗಡಿ ಅವರು ಅವಿರೋಧವಾಗಿ ಆಯ್ಕೆಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT