ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಿಯಮಿತ ವಿದ್ಯುತ್‌ ನಿಲುಗಡೆ: ಪರದಾಟ

Last Updated 21 ಸೆಪ್ಟೆಂಬರ್ 2013, 8:30 IST
ಅಕ್ಷರ ಗಾತ್ರ

ಯಲಬುರ್ಗಾ:  ನಾಲ್ಕೈದು ದಿನ­ಗಳಿಂದ ಸಮರ್ಪಕ ವಿದ್ಯುತ್‌ ಪೂರೈಕೆ­ಯಾಗದೇ ಇರುವ ಕಾರಣ ತಾಲ್ಲೂಕಿನ ಗ್ರಾಮಗಳಿಂದ ವಿವಿಧ ಕೆಲಸಗಳಿಗಾಗಿ ಪಟ್ಟಣಕ್ಕೆ ಆಗಮಿಸುವ ಜನರು ತೀವ್ರ ತೊಂದರೆ ಅನುಭವಿಸುವಂತಾಗಿದೆ.

ವಿದ್ಯುತ್‌ ದುರಸ್ತಿ ಕಾರ್ಯದ ನೆಪದಲ್ಲಿ ಬೆಳಿಗ್ಗೆ 10ಗಂಟೆಯಿಂದ ಸಂಜೆ 7ಗಂಟೆವರೆಗೂ ವಿದ್ಯುತ್‌ ಸಂಪರ್ಕ ಕಡಿತಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಪಡಿತರ ಕಾರ್ಡ್‌, ಆಧಾರ ಕಾರ್ಡ್‌ ಹಾಗೂ ಪಹಣಿ ಪಡೆಯಲು ಸಾಧ್ಯವಾ­ಗುತ್ತಿಲ್ಲ, ಅಲ್ಲದೇ ವಿವಿಧ ಸರ್ಕಾರಿ ಕೆಲಸಗಳು ಕೂಡಾ ಆಗದೇ ಕಷ್ಟ ಅನು­ಭವಿಸುವಂತಾಗಿದೆ. ಜೆಸ್ಕಾಂ ಅಧಿಕಾರಿ­ಗಳು ಇದಕ್ಕೆ ಸ್ಪಂದಿಸುತ್ತಿಲ್ಲ ಎಂದು ಜನರು ದೂರುತ್ತಿದ್ದಾರೆ.

ಪಡಿತರ ಆಹಾರ ಧ್ಯಾನ ಪಡೆಯಲು ಆಧಾರ ಕಾರ್ಡ್‌ ಕಡ್ಡಾಯ ಮಾಡಿದ್ದರ ಹಿನ್ನೆಲೆಯಲ್ಲಿ ವಿವಿಧ ಗ್ರಾಮದ ಜನರು ಸಾಕಷ್ಟು ಸಂಖ್ಯೆಯಲ್ಲಿ ಪಟ್ಟಣಕ್ಕೆ ಬರುತ್ತಿದ್ದಾರೆ. ಆದರೆ ಪಟ್ಟಣದಲ್ಲಿ ಸಮರ್ಪಕ ವಿದ್ಯುತ್‌ ಪೂರೈಕೆ ಇಲ್ಲದ ಕಾರಣ ಅವರು ವಾಪಾಸು ತೆರಳಬೇಕಾ­ಗುತ್ತಿದೆ. ಉಪ್ಪಲದಿನ್ನಿ, ಗಾಣದಾಳ ಗ್ರಾಮದ ಮಹಿಳೆಯರು ಕುಟುಂಬ ಸಮೇತ ಬುತ್ತಿ ಕಟ್ಟಿಕೊಂಡು ಬಂದು ವಾಪಸ್ಸಾಗುತ್ತಿದ್ದಾರೆ. ಸಮಸ್ಯೆ ಕುರಿತು ಜೆಸ್ಕಾಂ ಅಧಿಕಾರಿ­ಗಳಿಗೆ ಮನವಿ ಮಾಡಿ­ದರೂ ಯಾವುದೇ ಪ್ರಯೋಜನವಾಗಿಲ್ಲ   ಎಂದು ಗಾಣದಾಳ ಸೋಮಣ್ಣ ಡೊಳ್ಳಿನ್‌ ಬೇಸರ ವ್ಯಕ್ತಪಡಿಸಿದರು.

ವಿದ್ಯುತ್‌ ಇಲ್ದೆ ಕಾದು ಕಾದು ಮರಳಿ ಊರಿಗೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದೆ ಎಂದು ಹೊಸೂರ ಗ್ರಾಮದ ಶಂಕರ ಮೂಲಿ, ತರಲಕಟ್ಟಿಯ ಬಸವರಾಜ ಗೊಂದಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಈ ಕುರಿತು ತಹಶಿೀಲ್ದಾರ್‌ ಅವರಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ ಎಂದು ಗುನ್ನಾಳ ಗ್ರಾಮದ ಹನಮೇಶ  ತಿಳಿಸುತ್ತಾರೆ.

ವಿದ್ಯುತ್‌ ಅಲಭ್ಯತೆಯೇ  ತೊಂದರೆಗೆ ಕಾರಣ: ಜಿಲ್ಲಾ ಪಂಚಾಯಿತಿ ಕಚೇರಿ ಆವರಣದಲ್ಲಿರುವ ತಮ್ಮ ಕೇಂದ್ರದಲ್ಲಿ 5 ಕಂಪ್ಯೂಟರ್‌ಗಳಿದ್ದು, ವಿದ್ಯುತ್‌ ಸರಿಯಾ­ಗಿದ್ದರೆ, ಪ್ರತಿದಿನ 300ಕ್ಕೂ ಅಧಿಕ ಜನರ ಮಾಹಿತಿಯನ್ನು ದಾಖಲಿಸಿ­ಕೊಳ್ಳುತ್ತೇವೆ. ಆದರೆ ವಿದ್ಯುತ್‌ ಕೊರತೆಯಿಂದ ಸಮಸ್ಯೆಯಾಗಿದೆ ಎಂದು ಯಲಬುರ್ಗಾ ಆಧಾರ ಕೇಂದ್ರದ ಕಂಪ್ಯೂಟರ್‌ ಆಪರೇಟರ್‌ ಶಾಬೀರಾ ಬೇಗಂ ತಿಳಿಸುತ್ತಾರೆ.

ಮೂರು ದಿನಾ ಆಯ್ತು ಕರೆಂಟಿಲ್ಲ ಕರೆಂಟಿಲ್ಲ ಅಂತಾ ಹೇಳ್ತಾರ್ರಿ: ಮಕ್ಳು ಮರಿ ಕಟ್ಕೊಂಡು ಟ್ರ್ಯಾಕ್ಟರ್‌ ಬಾಡ್ಗಿ ಮಾಡಿಕೊಂಡು ಯಲಬುರ್ಗಾಕ್ಕೆ ಬಂದು ಬಂದೂ ಹೋಂಟಿವಿ್ರ ಸಾಹೆಬ್ರ, ಮೂರು ದಿನಾ ಆಯ್ತು ಕರೆಂಟಿಲ್ಲ, ಕರೆಂಟಿಲ್ಲ ಅಂತ ಹೇಳ್ತಾರ್ರಿ, ಬುತ್ತಿ ಕಟ್ಕೊಂಡು ಬಂದು ಇಲ್ಲಿ ಉಂಡು ಹೋಗೋದು ಒಂದು ಕೆಲಸ ಆಗೈತಿ್ರಿ, ಬಡವ್ರು ಅದೀವ್ರಿ ದಿನಾ ಎಷ್ಟಂತ ಖರ್ಚು ಇಟ್ಕೊಂಡು ಬರಬೇಕು ನೀವೇ ಹೇಳ್ರಿ’ ಎಂದು ಉಪ್ಪಲದಿನ್ನಿ ಗ್ರಾಮದ ಅಂದಮ್ಮ ಉಳ್ಳಾಗಡ್ಡಿ ಪ್ರಶ್ನಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT