ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಾಯಕಾರಿ ಮರಗಳ ತೆರವು

Last Updated 17 ಮೇ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಮಳೆಗಾಲದಲ್ಲಿ ನೆಲಕ್ಕುರುಳಬಹುದಾದ ಅಪಾಯಕಾರಿ ಮರಗಳನ್ನು ಗುರುತಿಸಿ ತೆರವುಗೊಳಿಸುವ ಸಂಬಂಧ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಸಭೆ ಕರೆದು ಚರ್ಚಿಸಲಾಗುವುದು ಎಂದು ಮೇಯರ್ ಡಿ. ವೆಂಕಟೇಶಮೂರ್ತಿ ಬುಧವಾರ ಇಲ್ಲಿ ಹೇಳಿದರು.

ಮಳೆಯಿಂದ ತೊಂದರೆಗೊಳಗಾದ ಬನಶಂಕರಿ, ಜಯನಗರ, ಬಸವನಗುಡಿ, ಯಡಿಯೂರು ಮತ್ತಿತರ ಬಡಾವಣೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

`ನಗರದಲ್ಲಿ ಅನೇಕ ಹಳೇ ಮರಗಳ ಬೇರುಗಳು ಭದ್ರವಾಗಿಲ್ಲ. ಹೀಗಾಗಿ, ಮಳೆಗಾಲದಲ್ಲಿ ಸುಲಭವಾಗಿ ನೆಲಕ್ಕುರುಳುತ್ತಿವೆ. ಇಂತಹ ಅಪಾಯಕಾರಿ ಮರಗಳನ್ನು ಗುರುತಿಸಿ ತೆರವುಗೊಳಿಸುವುದು, ಆ ಜಾಗದಲ್ಲಿ ಹೊಂಗೆ, ಹೂ-ಹಣ್ಣು ಕೊಡುವ ಅಥವಾ ಸುವಾಸನೆ ಬೀರುವ ಹೂ ಗಿಡಗಳನ್ನು ಬೆಳೆಸುವ ಸಂಬಂಧ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಜತೆ ಚರ್ಚಿಸಲಾಗುವುದು ಎಂದರು.

ಉರುಳಿದ 60ಕ್ಕೂ ಅಧಿಕ ಮರ: ಎರಡು ದಿನಗಳಲ್ಲಿ ನಗರದಲ್ಲಿ ಸುಮಾರು 60ಕ್ಕೂ ಅಧಿಕ ಮರಗಳು ನೆಲಕ್ಕುರುಳಿವೆ. ಅದೃಷ್ಟವಶಾತ್, ಯಾವುದೇ ಅನಾಹುತ ಸಂಭವಿಸಿಲ್ಲ. ಪಾಲಿಕೆ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ತೆರಳಿ ನೆಲಕ್ಕುರುಳಿದ ಮರಗಳನ್ನು ತೆರವುಗೊಳಿಸುವ ಮೂಲಕ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ ಎಂದು ಅವರು ತಿಳಿಸಿದರು.

ಅನಾಹುತ ಸಂಭವಿಸಿದ ತಕ್ಷಣ ಸ್ಥಳಕ್ಕೆ ತೆರಳಲು ಸಿಬ್ಬಂದಿಗಳ ಅನುಕೂಲಕ್ಕಾಗಿ ಹೆಚ್ಚು ವಾಹನಗಳನ್ನು ಖರೀದಿಸಲು ಪಾಲಿಕೆ ಚಿಂತನೆ ನಡೆಸಿದೆ ಎಂದು ಅವರು ತಿಳಿಸಿದರು.

24 ಗಂಟೆಗಳ ನಿಯಂತ್ರಣ ಕೊಠಡಿ: ಈ ನಡುವೆ, ಮಳೆಗಾಲದಲ್ಲಿ ಸಂಭವಿಸಬಹುದಾದ ಅನಾಹುತಗಳನ್ನು ನಿಯಂತ್ರಿಸಿ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳಲು ಸಾರ್ವಜನಿಕರ ಅನುಕೂಲಕ್ಕಾಗಿ ಬಿಬಿಎಂಪಿಯು ಎಲ್ಲ ವಲಯಗಳಲ್ಲಿ ದಿನದ 24 ಗಂಟೆ ಕಾರ್ಯನಿರ್ವಹಿಸುವ ನಿಯಂತ್ರಣ ಕೊಠಡಿಗಳನ್ನು ತೆರೆದಿದೆ.

ಸಾರ್ವಜನಿಕರು ಮಳೆಗಾಲದಲ್ಲಿ ಸಂಭವಿಸಬಹುದಾದ ಅನಾಹುತಗಳ ಬಗ್ಗೆ ಮುಂಜಾಗ್ರತೆ ವಹಿಸುವುದರ ಜತೆಗೆ, ಈ ಕೆಳಕಂಡ ಪಾಲಿಕೆ ನಿಯಂತ್ರಣ ಕೊಠಡಿಗಳಿಗೆ ಮಾಹಿತಿ ನೀಡುವಂತೆ ಆಯುಕ್ತ ಎಂ.ಕೆ. ಶಂಕರಲಿಂಗೇಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಿಯಂತ್ರಣ ಕೊಠಡಿಗಳ ದೂರವಾಣಿ ಸಂಖ್ಯೆ

ಟೋಲ್ ಫ್ರೀ ಸಂಖ್ಯೆ: 1800 42529999; ಐಪಿಪಿ ಕೇಂದ್ರ- 22660000; ಕೇಂದ್ರ ಕಚೇರಿ- 22221188, 22975595; ದಕ್ಷಿಣ ವಲಯ- 26566362; ಪೂರ್ವ ವಲಯ- 22975803; ಪಶ್ಚಿಮ ವಲಯ-23561692; ದಾಸರಹಳ್ಳಿ- 28393688, 22975904; ಯಲಹಂಕ- 22975936; ಬೊಮ್ಮನಹಳ್ಳಿ- 25732447, 25735642; ಮಹದೇವಪುರ- 28512300/01; ರಾಜರಾಜೇಶ್ವರಿನಗರ- 28601851, 28600954.
ಪಾಲಿಕೆಯ ಪೂರ್ವ ವಲಯದಲ್ಲಿ ವಿಭಾಗವಾರು ಮಳೆಗಾಲದಲ್ಲಿ ಸಂಭವಿಸಬಹುದಾದ ಅನಾಹುತಗಳನ್ನು ನಿಯಂತ್ರಿಸಲು ಹಾಲಿ ಇರುವ ನಿಯಂತ್ರಣ ಕೊಠಡಿಯ ಜೊತೆಗೆ ಹೆಚ್ಚುವರಿಯಾಗಿ 6 ಸ್ಥಳಗಳಲ್ಲಿ ನಿಯಂತ್ರಣ ಕೊಠಡಿಗಳನ್ನು ತೆರೆಯಲಾಗಿದೆ. ಮೇ, ಜೂನ್ ಹಾಗೂ ಜುಲೈ ತಿಂಗಳಲ್ಲಿ ಮಳೆಗಾಲದಲ್ಲಿ ಅನಾಹುತಗಳನ್ನು ತಪ್ಪಿಸಲು ಸಾರ್ವಜನಿಕರ ಅನುಕೂಲಕ್ಕಾಗಿ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಅಗತ್ಯ ಸಲಕರಣೆಗಳನ್ನು ಒದಗಿಸಲಾಗಿದೆ. ನಾಗರಿಕರು ಈ ಕೆಳಕಂಡ ನಿಯಂತ್ರಣ ಕೊಠಡಿಗಳಿಗೆ ದೂರು ಸಲ್ಲಿಸಲು ಕೋರಲಾಗಿದೆ.

ಪೂರ್ವ ವಲಯದ ವಿಭಾಗವಾರು ತಾತ್ಕಾಲಿಕ ನಿಯಂತ್ರಣ ಕೊಠಡಿಗಳ ದೂರವಾಣಿ ಸಂಖ್ಯೆ:
ಶಾಂತಿನಗರ: ಮೆಯೋಹಾಲ್ ನಿಯಂತ್ರಣ ಕೊಠಡಿ- 22975803; ಶಿವಾಜಿನಗರ: ಹಲಸೂರು ಟ್ಯಾಂಕ್ ರಸ್ತೆ- 22975819, ಸಿ.ವಿ.ರಾಮನ್‌ನಗರ:     ಸಿ.ವಿ.ರಾಮನ್‌ನಗರ ಉಪ ವಿಭಾಗ, 2ನೇ `ಎಚ್~ ಮುಖ್ಯ ರಸ್ತೆ, ಕಸ್ತೂರಿನಗರ- 25452553; ಸರ್ವಜ್ಞನಗರ: ಎಚ್‌ಬಿಆರ್ ಲೇಔಟ್, ಬಿಡಿಎ ಕಾಂಪ್ಲೆಕ್ಸ್ ಹತ್ತಿರ- 25441813; ಪುಲಿಕೇಶಿನಗರ: ಕೆ.ಜಿ.ಹಳ್ಳಿ ಉಪ ವಿಭಾಗ, ಕ್ವೀನ್ಸ್ ರಸ್ತೆ- 22340754; ಹೆಬ್ಬಾಳ: ಗಂಗಾನಗರ ವಾರ್ಡ್ ನಂ. 20 ಕಚೇರಿ- 23533901.    

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT