ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಫ್ರಿದಿಗೆ ನಾಯಕತ್ವ: ಗೊಂದಲದಲ್ಲಿ ಪಿಸಿಬಿ

Last Updated 16 ಜನವರಿ 2011, 17:15 IST
ಅಕ್ಷರ ಗಾತ್ರ

ಲಾಹೋರ್ (ಪಿಟಿಐ): ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡವನ್ನು ಮುನ್ನಡೆಸುವ ಜವಾಬ್ದಾರಿ ಯಾರಿಗೆ ನೀಡಬೇಕು ಎಂಬುದರ ಬಗ್ಗೆ ಪಿಸಿಬಿ ಗೊಂದಲದಲ್ಲಿ ಸಿಲುಕಿದೆ.

ಪ್ರಸಕ್ತ ನಾಯಕ ಶಾಹಿದ್ ಅಫ್ರಿದಿಗೆ ಈ ಜವಾಬ್ದಾರಿ ನೀಡಬೇಕೇ? ಅಥವಾ ಮಿಸ್ಬಾ ಉಲ್ ಹಕ್ ಅವರನ್ನು ನಾಯಕನಾಗಿ ನೇಮಿಸಬೇಕೆ ಎಂಬುದರ ಕುರಿತು ಬಿಸಿ ಚರ್ಚೆ ನಡೆಯುತ್ತಿದೆ.

ನ್ಯೂಜಿಲೆಂಡ್ ವಿರುದ್ಧದ ಟ್ವೆಂಟಿ-20 ಸರಣಿಯ ಬಳಿಕ ತಂಡದ ಕೆಲವು ಆಟಗಾರರು ಮತ್ತು ಅಧಿಕಾರಿಗಳು ಅಫ್ರಿದಿ ವರ್ತನೆಯ ಬಗ್ಗೆ ಪಿಸಿಬಿಗೆ ದೂರು ನೀಡಿದ್ದಾರೆ ಎಂದು ಮಂಡಳಿಯ ಮೂಲಗಳು ತಿಳಿಸಿವೆ.

‘ಅಫ್ರಿದಿ ಬಗ್ಗೆ ಕೆಲವೊಂದು ದೂರುಗಳು ಬಂದಿವೆ. ಈ ಕಾರಣ ಅವರನ್ನು ನಾಯಕರಾಗಿ ಮುಂದುವರಿಸಬೇಕೆ ಎಂಬುದರ ಕುರಿತು ಪಿಸಿಬಿಯಲ್ಲಿ ಗಂಭೀರ ಚರ್ಚೆ ನಡೆಯುತ್ತಿದೆ’ ಎಂದು ಮೂಲಗಳು ಹೇಳಿವೆ. ಅಫ್ರಿದಿಗೆ ನಾಯಕತ್ವ ನೀಡಬೇಕೆ ಎಂಬುದರ ಬಗ್ಗೆ ಮಂಡಳಿ ಮತ್ತು ತಂಡದ ಆಡಳಿತದಲ್ಲಿ ಭಿನ್ನಾಭಿಪ್ರಾಯ ಇದೆ.

ಪಿಸಿಬಿ ಅಫ್ರಿದಿ ಮೇಲಿನ ವಿಶ್ವಾಸ ಕಳೆದುಕೊಳ್ಳಲು ಕೆಲವೊಂದು ಕಾರಣಗಳಿವೆ ಎಂಬುದನ್ನು ಮೂಲಗಳು ಬಹಿರಂಗಪಡಿಸಿವೆ. ಸಹ ಆಟಗಾರರು ಅಫ್ರಿದಿ ವಿರುದ್ಧ ದೂರು ನೀಡಿರುವುದು ಪ್ರಮುಖ ಕಾರಣ ಎನ್ನಲಾಗಿದೆ. ಮಾತ್ರವಲ್ಲ ಈ ಆಲ್‌ರೌಂಡರ್ ಮಾಧ್ಯಮಗಳ ಜೊತೆ ನಿಕಟ ಸಂಪರ್ಕ ಇರಿಸಿಕೊಂಡಿರುವುದು ಕೂಡಾ ಪಿಸಿಬಿಗೆ ಇಷ್ಟವಿಲ್ಲ.
ದಕ್ಷಿಣ ಆಫ್ರಿಕಾ ವಿರುದ್ಧ ಯುಎಇನಲ್ಲಿ ನಡೆದ ಏಕದಿನ ಸರಣಿಯ ಬಳಿಕವೂ ಕೆಲವು ಆಟಗಾರರು ನಾಯಕನ ವಿರುದ್ಧ ಕೋಚ್ ಹಾಗೂ ತಂಡದ ಮ್ಯಾನೇಜರ್‌ಗೆ ದೂರು ನೀಡಿದ್ದರು ಎಂದು ಮೂಲ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT