ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭ್ಯಾಸ ಪಂದ್ಯದಲ್ಲಿ ಇಂಗ್ಲೆಂಡ್‌ಗೆ ಜಯ

Last Updated 8 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಹೈದರಾಬಾದ್ (ಪಿಟಿಐ):  ಭಾರತದಲ್ಲಿಯೂ ಸರಣಿ ಗೆಲ್ಲುವ ವಿಶ್ವಾಸದೊಂದಿಗೆ ಬಂದಿರುವ ಇಂಗ್ಲೆಂಡ್ ತಂಡದವರು ಮೊದಲ ಅಭ್ಯಾಸ ಪಂದ್ಯದಲ್ಲಿ ಜಯಿಸಿ ವಿಶ್ವಾಸ ಹೆಚ್ಚಿಸಿಕೊಂಡಿದ್ದಾರೆ.

ಇಲ್ಲಿನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಹಗಲು-ರಾತ್ರಿಯ ಏಕದಿನ ಅಭ್ಯಾಸ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್ 56 ರನ್‌ಗಳ ಅಂತರದಿಂದ ಹೈದರಾಬಾದ್ ಇಲೆವೆನ್ ತಂಡವನ್ನು ಪರಾಭವಗೊಳಿಸಿತು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್ 47.2 ಓವರುಗಳಲ್ಲಿ 219 ರನ್ ಗಳಿಸಿ ಆಲ್‌ಔಟ್ ಆಯಿತು. ಸ್ವಂತ ನೆಲದಲ್ಲಿ ಈ ಮೊತ್ತವು ಹೈದರಾಬಾದ್‌ಗೆ ಸವಾಲಾಗುವುದಿಲ್ಲ ಎಂದು ಆಗ ಅನಿಸಿದ್ದು ಸಹಜ. ಆದರೆ ಗುರಿಯನ್ನು ಬೆನ್ನಟ್ಟಿದ ಹೈದರಾಬಾದ್‌ಗೆ ಸ್ಟೀವನ್ ಫಿನ್ ಕಾಡಿದಾಗಲೇ ಫಲಿತಾಂಶವು ಪ್ರವಾಸಿಗಳ ಪರ ಎನ್ನುವುದು ಸ್ಪಷ್ಟ. ಹೈದರಾಬಾದ್ 36.5 ಓವರುಗಳಲ್ಲಿ 163 ರನ್‌ಗಳನ್ನು ಕಲೆಹಾಕುವಷ್ಟರಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು.

ಸಂಕ್ಷಿಪ್ತ ಸ್ಕೋರ್: ಇಂಗ್ಲೆಂಡ್: 47.2 ಓವರುಗಳಲ್ಲಿ 219 (ಕೆವಿನ್ ಪೀಟರ್ಸನ್ 16, ರವಿ ಬೋಪರಾ 73, ಕ್ರಿಸ್ ವೋಕೆಸ್ ಔಟಾಗದೆ 46; ಅನ್ವರ್ ಅಹ್ಮದ್ 35ಕ್ಕೆ3, ಪಗದಾಳ ನಾಯ್ಡು 26ಕ್ಕೆ1, ಆಶಿಶ್ ರೆಡ್ಡಿ 47ಕ್ಕೆ2, ಮೊಹಮ್ಮದ್ ಖಾದೀರ್ 25ಕ್ಕೆ3); ಹೈದರಾಬಾದ್ ಇಲೆವೆನ್: 36.5 ಓವರುಗಳಲ್ಲಿ 163 (ಅರ್ಜುನ್ ಯಾದವ್ 47, ಅಮೋಲ್ ಶಿಂಧೆ 25, ಆಶಿಶ್ ರೆಡ್ಡಿ 10; ಸ್ಟೀವನ್ ಫಿನ್ 28ಕ್ಕೆ4, ಕ್ರಿಸ್ ವೋಕೆಸ್ 30ಕ್ಕೆ2, ಜೇಡ್ ಡೆರೆನ್‌ಬಾಕ್ 37ಕ್ಕೆ1, ಸಮಿತ್ ಪಟೇಲ್ 9ಕ್ಕೆ1); ಫಲಿತಾಂಶ: ಇಂಗ್ಲೆಂಡ್‌ಗೆ 56 ರನ್‌ಗಳ ಗೆಲುವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT