ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮಿತಾಭ್‌ಗೆ ಮಧುಮೇಹ ಪರೀಕ್ಷಾ ಘಟಕ ಉಡುಗೊರೆ

Last Updated 10 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಲಂಡನ್ (ಪಿಟಿಐ): ಬಾಲಿವುಡ್ ಬಿಗ್ `ಬಿ~ ಅಮಿತಾಭ್ ಬಚ್ಚನ್‌ಗೆ ಗುರುವಾರ 70ನೇ ಹುಟ್ಟುಹಬ್ಬದ ಸಂಭ್ರಮ.
ಈ ಸಂದರ್ಭದಲ್ಲಿ ಇಂಗ್ಲೆಂಡ್‌ನ ಅವರ ಅಭಿಮಾನಿ ಏಷ್ಯಾ ಮೂಲದ ಸಂಸದ ಕೀತ್ ವಾಜ್  ಅವರು ಅಮಿತಾಭ್‌ಗೆ `ಸಂಚಾರಿ ಮಧುಮೇಹ ಚಿಕಿತ್ಸಾ ಘಟಕವನ್ನು~ ಹುಟ್ಟು ಹಬ್ಬದ ಉಡುಗೊರೆಯಾಗಿ ನೀಡುತ್ತಿದ್ದಾರೆ.

ಭಾರತದಲ್ಲಿರುವ ಬ್ರಿಟನ್ ಹೈಕಮಿಷನರ್ ಅವರಿಂದ ಮುಂಬೈನ ಸೆವನ್ ಹಿಲ್ಸ್ ಆಸ್ಪತ್ರೆಯಲ್ಲಿ ಅಮಿತಾಭ್ ಬಚ್ಚನ್ ಈ ಉಡುಗೊರೆಯನ್ನು ಸ್ವೀಕರಿಸಲಿದ್ದಾರೆ. ಮುಂಬೈಗೆ ಬರುತ್ತಿರುವ ಮೊಟ್ಟ ಮೊದಲ ಸಂಚಾರಿ ಘಟಕ ಇದು. ಇಂಥ ಘಟಕಗಳು ಲಂಡನ್ ಮತ್ತು ಲೈಸೆಸ್ಟರ್ ಹಾಗೂ ಭಾರತದ ಗೋವಾದಲ್ಲಿದೆ.

ಬಚ್ಚನ್ ಹುಟ್ಟುಹಬ್ಬಕ್ಕೆ ನೀಡುತ್ತಿರುವುದರಿಂದ ಈ ಸಂಚಾರಿ ಮಧುಮೇಹ ಘಟಕಕ್ಕೆ `ಅಮಿತಾಭ್~ ಎಂದು ಹೆಸರಿಡಲಾಗಿದೆ.

ಮೊಬೈಲ್‌ನಲ್ಲಿ `ಬಿಗ್ ಬಿ~
ಕೋಲ್ಕತ್ತ (ಪಿಟಿಐ): ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್ ಅವರ 70ನೇ ವರ್ಷದ ಹುಟ್ಟುಹಬ್ಬಕ್ಕೆ (ಗುರುವಾರ) `ಟೆಕ್‌ಝೋನ್~ ಕಂಪೆನಿಯು ಮೊಬೈಲ್ ಫೋನ್‌ನ ಅಪ್ಲಿಕೇಶನ್‌ವೊಂದನ್ನು ವಿಶಿಷ್ಟವಾಗಿ ವಿನ್ಯಾಸ ಮಾಡಿದೆ. ಅಭಿಮಾನಿಗಳು ಇದಕ್ಕಾಗಿ ಮುಗಿಬಿದ್ದಿದ್ದಾರೆ.

`ಟೆಕ್‌ಝೋನ್~ ಕಂಪೆನಿಯು ಬಚ್ಚನ್ ಅವರ ಹುಟ್ಟುಹಬ್ಬಕ್ಕೆಂದೇ ವಿಶಿಷ್ಟವಾದ `ಬಿಗ್‌ಬಿ~ ಅಪ್ಲಿಕೇಶನ್ ಮತ್ತು `ಡಬ್ಲ್ಯುಎಪಿ~ ಪೇಜ್ ಅನ್ನು ವಿನ್ಯಾಸ ಮಾಡಿ `ಬಿಗ್ ಬಿ~ ಅವರಿಗೆ ಸಂಬಂಧಿಸಿದ ಸ್ಪರ್ಧೆಗೆ ಅಭಿಮಾನಿಗಳನ್ನು  ಸೆಳೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT