ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಳೇಶ್ವರ: ವಿಶಿಷ್ಟ ಕಾರಹುಣ್ಣಿಮೆ ಆಚರಣೆ

Last Updated 27 ಜೂನ್ 2012, 11:55 IST
ಅಕ್ಷರ ಗಾತ್ರ

ಅಕ್ಕಿಆಲೂರ: ಇಲ್ಲಿಗೆ ಸಮೀಪವಿರುವ ಅರಳೇಶ್ವರ ಗ್ರಾಮದ ರೈತ ವಲಯ ಕಾರಹುಣ್ಣಿಮೆ ಅಂಗವಾಗಿ ಸೋಮ ವಾರ ಹೋರಿಗಳನ್ನು ಬೆದರಿಸಿ ಸಂಭ್ರಮ ಪಟ್ಟರು. ಕೃಷಿ ಹಂಗಾಮಿನ ಆರಂಭದಲ್ಲಿ ಜಮೀನುಗಳಲ್ಲಿ ಬಿತ್ತನೆ ಕಾರ್ಯ ಪೂರ್ಣಗೊಂಡ ಬಳಿಕ ಕಾರಹುಣ್ಣಿಮೆಯನ್ನು ಆಚರಿಸುವ ಸಂಪ್ರದಾಯವನ್ನು ಈ ಗ್ರಾಮದಲ್ಲಿ ಕಾಣಬಹುದಾಗಿದೆ.

ಕೃಷಿ ಭೂಮಿಯಲ್ಲಿ ಬಿತ್ತನೆಯನ್ನು ಬಾಕಿ ಇಟ್ಟುಕೊಂಡು ಇಲ್ಲಿನ      ರೈತರು ಕಾರಹುಣ್ಣಿಮೆಯನ್ನು ಆಚರಿ ಸುವುದಿಲ್ಲ. ಗ್ರಾಮದಲ್ಲಿ ಬಿತ್ತನೆ ಕಾರ್ಯ ತೆರೆಕಂಡ ನಂತರವೇ ಇಲ್ಲಿ ಹುಣ್ಣಿಮೆಯ ಸಡಗರ ಕಂಡು ಬರುತ್ತದೆ.
ಹುಣ್ಣಿಮೆ ಆಚರಣೆ ಹಿನ್ನೆಲೆಯಲ್ಲಿ ಇಡೀ ಗ್ರಾಮದಲ್ಲಿ ಹಬ್ಬದ ಸಂಭ್ರಮ ಕಂಡು ಬಂದಿತು.

ರೈತ ಕುಟುಂಬಗಳೇ ವಾಸಿಸುತ್ತಿ ರುವ ಗ್ರಾಮದಲ್ಲಿ ಮುಂಜಾನೆಯಿಂದ ಸಾಯಂಕಾಲದವರೆಗೂ ರೈತನ ನೆಚ್ಚಿನ ಸಂಗಾತಿಗಳಾದ ಹೋರಿಗಳನ್ನು ಬೆದರಿಸಿ ಓಡಿಸಲಾಯಿತು. ಹೋರಿಗಳು ವೇಗವಾಗಿ ಓಡುವ ಮೂಲಕ ನೋಡುಗರ ಗಮನ ಸೆಳೆದವು.

ಹೋರಿಗಳ ಓಟಕ್ಕೆ ಬ್ರೇಕ್ ಹಾಕಲು ಮುಂದಾಗ ಕೆಲ ಯುವಕರು ಹೋರಿ  ಗಳನ್ನು ಹಿಡಿದು ನಿಲ್ಲಿಸುವ ಸಾಹಸ ಪ್ರದರ್ಶಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT