ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸಭ್ಯ ಟಿ-ಷರಟು ಧರಿಸಿದ್ದಕ್ಕೆ ವಿದ್ಯಾರ್ಥಿನಿಗೆ ಛೀಮಾರಿ

Last Updated 3 ಫೆಬ್ರುವರಿ 2011, 18:00 IST
ಅಕ್ಷರ ಗಾತ್ರ

ಚಂಡೀಗಡ (ಪಿಟಿಐ): ಅಸಭ್ಯ ರೀತಿಯ  ಟಿ -ಷರಟು ಧರಿಸಿದ್ದ ದಂತವೈದ್ಯಕೀಯ ವಿದ್ಯಾರ್ಥಿನಿಗೆ ಪ್ರಾಚಾರ್ಯರು ಛೀಮಾರಿ ಹಾಕಿದ ಪ್ರಕರಣ ಗುರುವಾರ ಭಾರಿ ಪ್ರತಿಭಟನೆಗೆ ಕಾರಣವಾಗಿದೆ.

ಪಂಜಾಬ್ ವಿಶ್ವವಿದ್ಯಾಲಯದ ಅಧೀನದಲ್ಲಿರುವ ‘ಡಾ. ಎಚ್.ಎಸ್.ಜಡ್ಜ್ ದಂತ ವಿಜ್ಞಾನ ಸಂಸ್ಥೆ’ಯಲ್ಲಿ ಕಳೆದ ವಾರ ಈ ಘಟನೆ ನಡೆದಿದೆ.

 ಕೀಳು ಅಭಿರುಚಿಯ ಟಿ-ಷರಟು ಧರಿಸಿದ್ದ ವಿದ್ಯಾರ್ಥಿನಿಯನ್ನು ನಿರ್ದೇಶಕರೂ ಆಗಿರುವ  ಪ್ರಾಚಾರ್ಯ ಡಾ. ಕ್ರಿಶನ್ ಗೋಬಾ ಗದರಿಸಿದ್ದರು. ಘಟನೆಯ ಬಳಿಕ ಆಕೆ ‘ಪ್ರಾಚಾರ್ಯರು ನನಗೆ ಕಿರುಕುಳ ನೀಡಿದ್ದಾರೆ’ ಎಂದು ವಿವಿ ಆಡಳಿತಕ್ಕೆ ದೂರು   ನೀಡಿದ್ದಳು.

ವಿದ್ಯಾರ್ಥಿನಿಗೆ ಅವಮಾನ ಮಾಡಿದರು ಎಂಬ ಕಾರಣಕ್ಕೆ ಶುಕ್ರವಾರ ಸಂಸ್ಥೆಯ ವಿದ್ಯಾರ್ಥಿಗಳು ಹಾಗೂ ಸ್ಥಳೀಯ ಕಾಲೇಜುಗಳ ವಿದ್ಯಾರ್ಥಿಗಳು ಜಂಟಿಯಾಗಿ ತರಗತಿಗೆ ಬಹಿಷ್ಕಾರ ಹಾಕಿ ಪ್ರತಿಭಟನೆ ನಡೆಸಿದರು. ಇದರಿಂದಾಗಿ ಶೈಕ್ಷಣಿಕ ಚಟುವಟಿಕೆ  ಗಳು, ವೈದ್ಯಕೀಯ ಕಾಲೇಜಿನಲ್ಲಿ ರೋಗಿಗಳ ಶುಶ್ರೂಷೆ              ಸ್ಥಗಿತವಾಗಿತ್ತು.

ಈ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯ ಕುಲಪತಿಯವರು  ನಾಲ್ಕು ಮಂದಿ ಮಹಿಳಾ ಉಪನ್ಯಾಸಕರ ಸಮಿತಿಯನ್ನು ರಚಿಸಿದ್ದು, ಘಟನೆಯ ಬಗ್ಗೆ ವಿವರ ಮಾಹಿತಿ ಸಂಗ್ರಹಿಸಿ ವರದಿ ನೀಡಲು ಆದೇಶಿದ್ದಾರೆ. ಇದಕ್ಕೂ ಮುನ್ನ ವಿದ್ಯಾರ್ಥಿನಿಯ ಪೋಷಕರು ಲಿಖಿತ ದೂರು ಸಲ್ಲಿಸಿದ್ದರು.

ಘಟನಾವಳಿಗಳೆಲ್ಲಾ ಸ್ಥಾಪಿತ ಹಿತಾಸಕ್ತಿಗಳ ಕುಕೃತ್ಯ ಎಂದಿರುವ ಕ್ರಿಶನ್ ಗೋಬಾ, ‘ವೈದ್ಯರು ಮತ್ತು ರೋಗಿಗಳೊಂದಿಗೆ ವ್ಯವಹರಿಸಬೇಕಿರುವುದರಿಂದ ವಿದ್ಯಾರ್ಥಿಗಳು ಸಭ್ಯ ಉಡುಪು ಧರಿಸಬೇಕು ಎಂದಷ್ಟೇ ಹೇಳಿದ್ದೆ. ಆದರೆ ಆಕೆ ಸಿಟ್ಟುಗೊಂಡು ತನ್ನ ವಸ್ತ್ರಧಾರಣೆ ಸರಿಯಾಗಿಯೇ ಇದೆ ಎಂದು ವಾದಿಸಿದ್ದಳು. ವಿಷಯ ಇಷ್ಟರಲ್ಲೇ ಮುಗಿಯಿತು ಎಂದು  ಅಂದುಕೊಂಡಿದ್ದಾಗಲೇ, ಆಕೆ ಇದನ್ನು ಗಂಭೀರ ಪ್ರಕರಣವಾಗಿಸಿದ್ದಾಳೆ’ ಎಂದರು.

‘ಪ್ರಕರಣ ಇಂತಹ ತಿರುವು ಪಡೆದುಕೊಂಡಿರುವುದು ನನಗೆ ನೋವುಂಟುಮಾಡಿದೆ. ಐದು ವರ್ಷಕಾಲ ಪ್ರಾಚಾರ್ಯ, ನಿರ್ದೇಶಕ ಇತ್ಯಾದಿ ಹುದ್ದೆಗಳನ್ನು ನಿರ್ವಹಿಸಿ ಸಂಸ್ಥೆಯ ಯಶಸ್ಸಿಗೆ ಶ್ರಮಿಸಿದ್ದೇನೆ. ಈಗ ರಾಜೀನಾಮೆ ನೀಡಲು ಸಿದ್ಧತೆ ನಡೆಸಿದ್ದೇನೆ’ ಎಂದು ಗೋಬಾ       ಹೇಳಿದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT