ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಹವಾಲು ಲಿಖಿತ ರೂಪದಲ್ಲಿರಲಿ: ಉಮಾಶ್ರೀ

Last Updated 3 ಜೂನ್ 2013, 13:20 IST
ಅಕ್ಷರ ಗಾತ್ರ

ಬನಹಟ್ಟಿ: `ವಾರದಲ್ಲಿ ಒಂದು ಬಾರಿಯಾದರೂ ಕ್ಷೇತ್ರಕ್ಕೆ ಬಂದು ಹೋಗುತ್ತೇನೆ. ರಾಜ್ಯದ ಎರಡು ಮಹತ್ವದ ಜವಾಬ್ದಾರಿಗಳು ಇರುವುದರಿಂದ ರಾಜ್ಯದ ತುಂಬ ಸಂಚರಿಸಬೇಕಾಗುತ್ತದೆ. ಒಂದು ವೇಳೆ ಕ್ಷೇತ್ರದಲ್ಲಿ ಹೆಚ್ಚಿನ ಕಾರ್ಯಗಳಿದ್ದರೆ ಎರಡು ಬಾರಿ ಬರುತ್ತೇನೆ.

ಇಲ್ಲಿಯ ಜನರ ಸಮಸ್ಯೆಗಳು ಸಾಕಷ್ಟಿವೆ. ಅವುಗಳನ್ನು ನಿವಾರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಸಮಸ್ಯೆಗಳನ್ನು ಬಾಯಿ ಮಾತಿನ ಮುಖಾಂತರ ಹೇಳದೆ ಅವುಗಳನ್ನು ಬರವಣಿಗೆಯ  ರೂಪದಲ್ಲಿ ಕೊಟ್ಟರೆ ಅನುಕೂಲ' ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಮಹಿಳಾ ಮತ್ತು ಸಮಾಜ ಕಲ್ಯಾಣ ಇಲಾಖೆ ರಾಜ್ಯ ಸಚಿವೆ ಉಮಾಶ್ರೀ ತಿಳಿಸಿದರು.

ಭಾನುವಾರ ನಗರದಲ್ಲಿ  ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತ ಅವರು ಈ ವಿಷಯ ತಿಳಿಸಿದರು.

ರಾಜ್ಯದಲ್ಲಿ ಮಳೆ ಚೆನ್ನಾಗಿ ಆಗಿದ್ದು, ರೈತರಿಗೆ ಬೇಕಾಗುವ ಗೊಬ್ಬರ ಹಾಗೂ ಬೀಜಗಳಿಗೆ ಯಾವುದೆ ಕೊರತೆ ಇಲ್ಲ. ಎಲ್ಲವನ್ನೂ ಸಂಗ್ರಹಿಸಿಡಲಾಗಿದೆ ಎಂದು ಸಚಿವೆ ಉಮಾಶ್ರೀ ತಿಳಿಸಿದರು.

ಈ ಸಂದರ್ಭದಲ್ಲಿ ಶಂಕರ ಜಾಲಿಗಿಡದ, ಚಂದ್ರು ಪಟ್ಟಣ, ರವೀಂದ್ರ ಹಟ್ಟಿ, ರವಿ ಸಿರಗಾರ, ನೀಲಕಂಠ ಮುತ್ತೂರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT