ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತಂಕದಲ್ಲಿ ಧಾರವಾಡ ತಂಡ

ಕ್ರಿಕೆಟ್: ಶಿವಮೊಗ್ಗ ವಲಯದ ಮೇಲುಗೈ
Last Updated 4 ಜುಲೈ 2013, 19:29 IST
ಅಕ್ಷರ ಗಾತ್ರ

ಬೆಂಗಳೂರು: ಧಾರವಾಡ ವಲಯ ತಂಡದವರು ಗುರುವಾರ ಇಲ್ಲಿ ಆರಂಭವಾದ ಎಸ್.ಎ.ಶ್ರೀನಿವಾಸನ್ ಸ್ಮಾರಕ 25 ವರ್ಷದೊಳಗಿನವರ ಕ್ರಿಕೆಟ್ ಟೂರ್ನಿಯಲ್ಲಿ ಶಿವಮೊಗ್ಗ ವಲಯ ಎದುರು ಆತಂಕಕ್ಕೆ ಸಿಲುಕಿದ್ದಾರೆ.

ಎರಡು ದಿನಗಳ ಈ ಪಂದ್ಯದ ಮೊದಲ ದಿನದ ಆಟದ ಅಂತ್ಯಕ್ಕೆ ಧಾರವಾಡ 30 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 83 ರನ್ ಗಳಿಸಿದೆ. ಇನಿಂಗ್ಸ್ ಮುನ್ನಡೆ ಸಾಧಿಸಲು ಇನ್ನೂ 163 ರನ್‌ಗಳ ಅಗತ್ಯವಿದೆ. ಮೊದಲು ಬ್ಯಾಟ್ ಮಾಡಿದ್ದ ಶಿವಮೊಗ್ಗ ವಲಯ ತನ್ನ ಪ್ರಥಮ ಇನಿಂಗ್ಸ್‌ನಲ್ಲಿ 58.2 ಓವರ್‌ಗಳಲ್ಲಿ 245 ರನ್‌ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡಿತು.

ಸಂಕ್ಷಿಪ್ತ ಸ್ಕೋರ್: ಶಿವಮೊಗ್ಗ ವಲಯ: 58.2 ಓವರ್‌ಗಳಲ್ಲಿ 245 (ವಿಕ್ರಮ್ ವೆಂಕಟೇಶ್ 52, ಹೊಯ್ಸಳ 77, ಎಂ.ರಾಜೇಶ್ 50; ಪರಪ್ಪ ಮೋರ್ದಿ 58ಕ್ಕೆ5, ಬಿ.ತನು 47ಕ್ಕೆ3); ಧಾರವಾಡ ವಲಯ: 30 ಓವರ್‌ಗಳಲ್ಲಿ 5 ವಿಕೆಟ್‌ಗೆ 83 (ಹೊಯ್ಸಳ 34ಕ್ಕೆ2, ವಿಕ್ರಮ್ 9ಕ್ಕೆ2).

ಮಂಗಳೂರು ವಲಯ: 43.5 ಓವರ್‌ಗಳಲ್ಲಿ 115 (ಆದಿತ್ಯ ರಾಜ್ 24; ಪ್ರತೀಕ್ ಜೈನ್ 36ಕ್ಕೆ5, ಶಶಿ ಶೇಖರ್ 18ಕ್ಕೆ3); ಬೆಂಗಳೂರು ವಲಯ: 55 ಓವರ್‌ಗಳಲ್ಲಿ 3 ವಿಕೆಟ್‌ಗೆ 245 (ಪವನ್ ದೇಶಪಾಂಡೆ ಬ್ಯಾಟಿಂಗ್ 101, ಅಭಿಷೇಕ್ ರೆಡ್ಡಿ ಬ್ಯಾಟಿಂಗ್ 65, ಅರ್ಜುನ್ ಹೊಯ್ಸಳ 52; ದರ್ಶನ್ ಮಾಚಯ್ಯ 57ಕ್ಕೆ2).

ತುಮಕೂರು ವಲಯ: 55.1 ಓವರ್‌ಗಳಲ್ಲಿ 115 (ದೀಮಂತ್ ರಾಜ್ 35; ಸುಹಾಸ್ 22ಕ್ಕೆ3); ಮೈಸೂರು ವಲಯ: 39 ಓವರ್‌ಗಳಲ್ಲಿ 3 ವಿಕೆಟ್‌ಗೆ 136 (ಎಂ.ಜಿ.ನವೀನ್ 49, ಎನ್.ಭರತ್ 49; ಎಚ್.ಬಿ.ರಘುವೀರ್ 4ಕ್ಕೆ2).

ಉಪಾಧ್ಯಕ್ಷರ ಇಲೆವೆನ್: 46.1 ಓವರ್‌ಗಳಲ್ಲಿ 1 ವಿಕೆಟ್‌ಗೆ 119 (ಪ್ರತೀಕ್ ಬ್ಯಾಟಿಂಗ್ 67); ಬೆಂಗಳೂರು ನಗರ ಇಲೆವೆನ್ ಎದುರಿನ ಪಂದ್ಯ (ಪಂದ್ಯಕ್ಕೆ ಮಳೆ ಅಡಚಣೆ)

ಸಂಯುಕ್ತ ನಗರ ಇಲೆವೆನ್: 90 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 358 (ಲಿಯಾನ್ ಖಾನ್ 177, ಕೆ.ಶಶೀಂದ್ರ 49; ವಿ.ಕೌಶಿಕ್ 59ಕ್ಕೆ2); ಕಾರ್ಯದರ್ಶಿಗಳ ಇಲೆವೆನ್: 15 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 54.

ರಾಯಚೂರು ವಲಯ: 49 ಓವರ್‌ಗಳಲ್ಲಿ 97 (ಡೇವಿಡ್ ಮಥಾಯಸ್ 27ಕ್ಕೆ2, ಸಿನಾನ್ ಅಬ್ದುಲ್ ಖಾದರ್ 19ಕ್ಕೆ5); ಅಧ್ಯಕ್ಷರ ಇಲೆವೆನ್: 62 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 329 (ಕರುಣ್ ನಾಯರ್ ಬ್ಯಾಟಿಂಗ್ 154, ಅಭಿನವ್ ಮನೋಹರ್ 106).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT