ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಧಾರವಾಗದ `ಆಧಾರ್ ಕಾರ್ಡ್'

Last Updated 19 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ವಿಶಿಷ್ಟ ಗುರುತಿನ ಸಂಖ್ಯೆ ನೀಡುವ ಮಹತ್ವಾ ಕಾಂಕ್ಷಿ ಯೋಜನೆಯ ಆಧಾರ್ ಕಾರ್ಡ್ ಮಾಡಿ ಸುವ ಕಾರ್ಯಕ್ರಮ ಕೆಲವು ದಿನಗಳ ಸ್ಥಗಿತದ ನಂತರ ಪುನಃ ಚಾಲನೆಯಾಗುತ್ತಿದೆ.

ಪ್ರಾರಂಭದ ಹಂತದಲ್ಲಿ ಅಂಚೆಕಚೇರಿ ಮುಖಾಂತರ `ಆಧಾರ್‌ಕಾರ್ಡ್'ಗಾಗಿ ನೋಂದಣಿ ನಡೆದರೂ ಮಂದಗತಿಯಲ್ಲಿ ಸಾಗಿತ್ತು. ಈಗ ಹಲವು ಹೊಸ ಏಜೆನ್ಸಿಗಳ ಮೂಲಕ ಮಾಡಿಸುತ್ತಿರುವ ಬಹು ಕೋಟಿ ರೂಪಾಯಿ ವೆಚ್ಚದ ಈ ಯೋಜನೆಯು ಕ್ರಮವಾಗಿ ನಡೆಯುತ್ತಿಲ್ಲ.

ಆಧಾರ್ ಕಾರ್ಡ್ ಮಾಡಿಸುವುದು ಸಾರ್ವ ಜನಿಕರಿಗೆ ಸುಲಭವಾಗಿಲ್ಲ. ಬಹಳಷ್ಟು ಉದ್ಯೋ ಗಿಗಳು, ಸಾರ್ವಜನಿಕರು ಕೆಲಸ ಬಿಟ್ಟು, ಗಂಟೆ ಗಟ್ಟಲೆ ಅಂಚೆ ಕಚೇರಿಗಳಲ್ಲಿ ಕ್ಯೂ ನಿಂತು ವಿಚಾ ರಣೆಗೆ ಒಳಪಡುವ ಈ ವ್ಯವಸ್ಥೆ ಸೀಮೆ ಎಣ್ಣೆಗೆ ಜನ ಕ್ಯೂ ನಿಲ್ಲುವುದಕ್ಕಿಂತ ಭಿನ್ನವಾಗಿಲ್ಲ. ಕಾರ್ಡ್ ಕೈಸೇರಿದ ಮೇಲಾದರೂ ಅದರಿಂದ ಪ್ರಯೋ ಜನವಾಗುತ್ತಿದೆಯೇ? ಪಾಸ್‌ಪೋರ್ಟ್, ಶಿಕ್ಷಣ, ವಿದ್ಯಾರ್ಥಿವೇತನ ಇನ್ನಿತರೇ ಯಾವುದೇ ಇಲಾಖೆ ಯ್ಲ್ಲಲೂ ಇದರ ಪ್ರಯೋಜನ ಆಗುತ್ತ್ಲ್ಲಿಲ.

ಅಷ್ಟಕ್ಕೂ ಅವರು ತಿಳಿಸುವ ಮಾಹಿತಿ ಜನರಿಗೆ ಅರ್ಥವಾಗುತ್ತ್ಲ್ಲಿಲ. ಏಜೆನ್ಸಿಗಳು ನಿಗದಿಪಡಿಸಿರುವ ಹಣಕ್ಕಿಂತ ಹೆಚ್ಚಿಗೆ ಶುಲ್ಕ ಪಡೆಯುತ್ತಾರೆ. ಕಾರಣ ಕೇಳಿದರೆ, ಕರೆಂಟ್ ತೊಂದರೆ, ಸರ್ವರ್ ಡೌನ್, ಕಂಪ್ಯೂಟರ್ ತೊಂದರೆ ಎನ್ನುವ ಸಬೂಬು ಹೇಳುತ್ತಾರೆ. ಸಂಬಂಧಪಟ್ಟ ಅಧಿಕಾರಿ ಗಳು ಆಧಾರ್ ಕಾರ್ಡಿನ ಉಪಯೋಗ, ಮಹತ್ವದ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಸರಳ ವಾಗಿ, ಕನ್ನಡದಲ್ಲಿ ಕರಪತ್ರ ಮುದ್ರಿಸಿ ಜನ ಸಾಮಾನ್ಯರು, ಗ್ರಾಮೀಣ ಜನರಿಗೆ ತಿಳಿಯುವಂತೆ ಮಾಹಿತಿ ಒದಗಿಸಲು ವಿನಂತಿಸುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT