ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್‌ಲೈನ್ ಬ್ರೈಲ್ ಗ್ರಂಥಾಲಯ

Last Updated 5 ಜನವರಿ 2012, 19:30 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಆನ್‌ಲೈನ್ ಬ್ರೈಲ್ ಗ್ರಂಥಾಲಯ ಹೊಂದಿರುವ ದೇಶದ ಮೊದಲ ಮಹಾನಗರವೆಂಬ ಹಿರಿಮೆಗೆ ವಾಣಿಜ್ಯ ನಗರಿ ಪಾತ್ರವಾಗಿದ್ದು, ಈ ಮೂಲಕ ದೃಷ್ಟಿಮಾಂದ್ಯರಿಗೆ ಬಹುಭಾಷೆಯ ಪುಸ್ತಕಗಳನ್ನು ಓದುವ ಅವಕಾಶ ಲಭಿಸಿದೆ.

ಲೂಯಿ ಬ್ರೈಲ್ ಅವರ ಜನ್ಮದಿನಾಚರಣೆ ನಿಮಿತ್ತ ರಾಷ್ಟ್ರೀಯ ದೃಷ್ಟಿಮಾಂದ್ಯ ಮತ್ತು ಅಂಗವಿಕಲರ ಸಂಸ್ಥೆಯು (ಎನ್‌ಐವಿಎಚ್) ಇಲ್ಲಿನ ಬಾಂದ್ರಾ ಉಪನಗರದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಮುಕುಲ್ ವಾಸ್ನಿಕ್ ಗ್ರಂಥಾಲಯವನ್ನು ಉದ್ಘಾಟಿಸಿದರು.
ಅಂಧರಿಗೆ ಉನ್ನತ ಶಿಕ್ಷಣ ಪಡೆಯಲು ಸಹಾಯವಾಗುತ್ತದೆ~ ಎಂದು ವಾಸ್ನಿಕ್ ತಿಳಿಸಿದರು.

`10 ಭಾಷೆಯ 12,000 ಪುಸ್ತಕಗಳನ್ನು ಗ್ರಂಥಾಲಯ ಹೊಂದಿದೆ. ಈ ಎಲ್ಲವನ್ನೂ ಬಳಕೆದಾರರ ಸ್ನೇಹಿಯಾಗಿ ರೂಪಿಸಲಾಗಿದ್ದು, ದೃಷ್ಟಿ ಇಲ್ಲದವರ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿದೆ~ ಎಂದು ಎನ್‌ಐವಿಎಚ್ ನಿರ್ದೇಶಕಿ ಅನುರಾಧಾ ಮೋಹಿತ್ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT