ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್‌ಲೈನ್‌ನಲ್ಲಿ `ಪಿಎಫ್' ಖಾತೆ ಮಾಹಿತಿ

Last Updated 5 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಭವಿಷ್ಯ ನಿಧಿ ಚಂದಾದಾರರು ತಮ್ಮ  ಖಾತೆಯ ವಿವರಗಳನ್ನು ಇನ್ನು ಮುಂದೆ ಆನ್‌ಲೈನ್‌ನಲ್ಲೇ ನೋಡಬಹುದು. ನೌಕರರ ಭವಿಷ್ಯ ನಿಧಿ ಸಂಘಟನೆ (ಇಪಿಎಫ್‌ಒ) ಸೆ.6ರಿಂದ ಈ ಸೌಲಭ್ಯ ಜಾರಿಗೆ ತರಲಿದೆ.

5 ಕೋಟಿಗಿಂತಲೂ ಹೆಚ್ಚಿರುವ ಭವಿಷ್ಯ ನಿಧಿ ಚಂದಾದಾರರಿಗೆ ಈ ಸೌಲಭ್ಯ ಲಭಿಸಲಿದೆ. ಚಂದಾದಾರರು ಕ್ಷಣ ಕ್ಷಣದ ಪರಿಷ್ಕೃತ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ನೋಡಬಹುದು ಎಂದು ಕೇಂದ್ರ  ಭವಿಷ್ಯ ನಿಧಿ ಆಯುಕ್ತ ಕೆ.ಕೆ.ಜಲನ್ ಗುರುವಾರ ಇಲ್ಲಿ ಸುದ್ದಿಸಂಸ್ಥೆಗೆ ತಿಳಿಸಿದರು.

ಸದ್ಯ `ಪಿಎಫ್' ಚಂದಾದಾರರಿಗೆ ವರ್ಷಕ್ಕೊಮ್ಮೆ ಮಾತ್ರ ಖಾತೆ ವಿವರ ಲಭಿಸುತ್ತಿದೆ. `ಇಪಿಎಫ್‌ಒ' ಸೆಪ್ಟೆಂಬರ್‌ನಲ್ಲಿ ವಾರ್ಷಿಕ ಪಿಎಫ್ ಖಾತೆ ವಿವರವನ್ನು ಮುದ್ರಿತ ರೂಪದಲ್ಲಿ ಚಂದಾದಾರರಿಗೆ ವರ್ಗಾಯಿಸುವುದು ವಾಡಿಕೆ. ಆದರೆ, ಒಮ್ಮಮ್ಮೆ ಇದು ನೌಕರರ ಕೈ ಸೇರುವುದು ವಿಳಂಬವಾಗುತ್ತದೆ. ಆದರೆ, ಇನ್ನು ಮುಂದೆ ಇದು ಆನ್‌ಲೈನ್‌ನಲ್ಲೇ ಲಭ್ಯವಾಗಲಿದೆ ಎಂದು ಜಲನ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT