ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಪ್ಟಿಕಲ್ ಫೈಬರ್ ಜಾಲಕ್ಕೆ ಒಪ್ಪಿಗೆ

Last Updated 27 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಎಲ್ಲ ಹಳ್ಳಿಗಳಿಗೂ ಆಪ್ಟಿಕಲ್ ಫೈಬರ್ ಜಾಲವನ್ನು ವಿಸ್ತರಿಸುವ ಗುರಿಯೊಂದಿಗೆ ಕೇಂದ್ರ ಸಚಿವ ಸಂಪುಟವು ಪಂಚಾಯತಿಗಳಿಗೆ ಬ್ರಾಡ್‌ಬ್ಯಾಂಡ್ ಸಂಪರ್ಕವನ್ನು ಒದಗಿಸುವ ಸಲುವಾಗಿ ರಾಷ್ಟ್ರೀಯ ಆಪ್ಟಿಕಲ್ ಫೈಬರ್ ಜಾಲವನ್ನು ನಿರ್ಮಿಸುವ ಯೋಜನೆಗೆ ಒಪ್ಪಿಗೆ ನೀಡಿದೆ.

ಮೊದಲಿಗೆ ಸಾರ್ವತ್ರಿಕ ಸೇವಾ ಸೌಲಭ್ಯ ನಿಧಿಯನ್ನು ಬಳಸಿಕೊಂಡು ಪ್ರಸ್ತತ ಜಿಲ್ಲೆ ಅಥವಾ ಬ್ಲಾಕ್ ಮುಖ್ಯಕೇಂದ್ರಗಳ ಮಟ್ಟದಲ್ಲಿ ಲಭ್ಯವಿರುವ ಆಪ್ಟಿಕಲ್ ಫೈಬರ್ ಜಾಲವನ್ನು ಪ್ರತಿ ಗ್ರಾಮ ಪಂಚಾಯಿತಿ ಮಟ್ಟಕ್ಕೂ ವಿಸ್ತರಿಸುವುದು ಈ ಯೋಜನೆಯ ಉದ್ದೇಶವಾಗಿದೆ.

ಈ ಯೋಜನೆಯ ಆರಂಭಿಕ ವೆಚ್ಚ ರೂ 20,000 ಕೋಟಿಗಳಾಗುವ ನಿರೀಕ್ಷೆಯಿದ್ದು, ಇದೇ ಪ್ರಮಾಣದ ಬಂಡವಾಳವನ್ನು ಖಾಸಗಿ ವಲಯದಿಂದ ಮೂಲಸೌಲಭ್ಯ ಪೂರ್ಣಗೊಳಿಸಲು ಉಪಯೋಗಿಸಿಕೊಳ್ಳುವುದರಿಂದ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸಿದಂತಾಗುತ್ತದೆ.

ವಿಶ್ವಬ್ಯಾಂಕ್ ನಡೆಸಿದ ಅಧ್ಯಯನದ ಪ್ರಕಾರ, ಈ ಯೋಜನೆಯಿಂದ ಉದ್ಯೋಗ ಅವಕಾಶ ದೊರಕಲಿದ್ದು, ಗ್ರಾಮೀಣ ಜನರು ಪಟ್ಟಣ ಮತ್ತು ನಗರ ಪ್ರದೇಶಗಳಿಗೆ ವಲಸೆ ಹೋಗುವುದನ್ನು ತಡೆಯಬಹುದಾಗಿದೆ.

ಪ್ರತಿ ಬ್ರಾಡ್‌ಬ್ಯಾಂಡ್ ಬಳಕೆಯಲ್ಲಿ ಶೇ 10ರಷ್ಟು ಏರಿಕೆಯಾದರೆ, ಅದರಿಂದ ಶೇ 1.4ರಷ್ಟು ಜಿಡಿಪಿ ಬೆಳವಣಿಗೆ ಆಗುವುದು ಎಂದು ತಿಳಿಸಿದೆ. ಇ-ಆರೋಗ್ಯ, ಇ-ಬ್ಯಾಂಕಿಂಗ್, ಇ-ಶಿಕ್ಷಣ ಸೇರಿದಂತೆ ವಿವಿಧ ಇ-ಆಡಳಿತಗಳ ಜಾರಿಗೂ ಈ ಯೋಜನೆ ಅನುಕೂಲಕಾರಿ.

ನಾಗರಿಕ ಸೇವೆಯ ಎಲೆಕ್ಟ್ರಾನಿಕ್ ವಿಲೇವಾರಿಯ ಉನ್ನತ ಬ್ಯಾಂಡ್‌ವಿಡ್ತ್ ಸಂಪರ್ಕ ಒದಗಿಸಲು ಸಹ ಈ ಯೋಜನೆ ಸಹಾಯಕ. ಮಾಹಿತಿ ತಂತ್ರಜ್ಞಾನ ಇಲಾಖೆ ಆರಂಭಿಸಿರುವ ಸುಮಾರು ರೂ 50,000 ಕೋಟಿಗಳ ಇ-ಆಡಳಿತ ಯೋಜನೆಗಳ ತ್ವರಿತ ಜಾರಿಗೂ ಈ ಪ್ರಸ್ತಾವನೆ ನೆರವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT