ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕ ವೃದ್ಧಿ: ವಿಶ್ವಬ್ಯಾಂಕ್ ಸಲಹೆ

Last Updated 24 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಐಎಎನ್‌ಎಸ್): ಕೈಗಾರಿಕೆ ಮತ್ತು ಉದ್ದಿಮೆ ವಲಯದಲ್ಲಿ ಮಹಿಳೆಯರಿಗೆ ಸೂಕ್ತ ಅವಕಾಶ ಮತ್ತು ವಾತಾವರಣ ಕಲ್ಪಿಸಿಕೊಡುವುದರಿಂದ ಒಟ್ಟಾರೆ  ಉತ್ಪಾದನೆ ಪ್ರಮಾಣ ಹೆಚ್ಚಳಗೊಳ್ಳುವುದು ಎಂದು ವಿಶ್ವ ಬ್ಯಾಂಕ್ ಅಭಿಪ್ರಾಯಪಟ್ಟಿದೆ.

`ಲಿಂಗ ಸಮಾನತೆ~ ಅಳವಡಿಸಿಕೊಂಡ ಉದ್ದಿಮೆ ಸಂಸ್ಥೆಗಳು ಹೆಚ್ಚು ಪ್ರಾತಿನಿಧಿಕವಾಗಿರುತ್ತವೆ. ಎಲ್ಲ ಬಗೆಯ ಉದ್ದಿಮೆ ಸಂಸ್ಥೆಗಳು ಇಂತಹ ಸಮಾನತೆ ಅಳವಡಿಕೊಳ್ಳುವುದನ್ನೇ ವಿಶ್ವಬ್ಯಾಂಕ್ ಬಯಸುತ್ತದೆ ಎಂದು ಬ್ಯಾಂಕ್‌ನ ಅಧ್ಯಕ್ಷ ರಾಬರ್ಟ್ ಜೊಯೆಲಿಕ್ ಅಭಿಪ್ರಾಯಪಟ್ಟಿದ್ದಾರೆ.ವಿಶ್ವದ ಜನಸಂಖ್ಯೆಯ ಅರ್ಧದಷ್ಟು ಇರುವ ಮಹಿಳೆಯರ ಸಾಮರ್ಥ್ಯದ ಸದ್ಬಳಕೆ ಉದ್ದೇಶಕ್ಕೆ ವಿಶ್ವಬ್ಯಾಂಕ್ ಇತರ  ಮಾರ್ಗೋಪಾಯಗಳನ್ನೂ ಹಮ್ಮಿಕೊಂಡಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಮಹಿಳೆಯರು ಮತ್ತು ಬಾಲಕಿಯರು ಪರಿಣತಿ ಪಡೆಯದಂತೆ ನಿರ್ಬಂಧಿಸುವುದು  ಸರಿಯಾದ ಧೋರಣೆಯಷ್ಟೇ ಅಲ್ಲ, ಅದರಿಂದ ಆರ್ಥಿಕ ನಷ್ಟವೂ ಉಂಟಾಗುತ್ತದೆ ಎಂದು ಬ್ಯಾಂಕ್ ಅಭಿಪ್ರಾಯಪಟ್ಟಿದೆ.`ವಿಶ್ವದ ಅಭಿವೃದ್ಧಿ ವರದಿ 2012; ಲಿಂಗ ಸಮಾನತೆ ಮತ್ತು ಅಭಿವೃದ್ಧಿ~ ವರದಿಯಲ್ಲಿ ವಿಶ್ವಬ್ಯಾಂಕ್ ಈ ವಿಷಯ ತಿಳಿಸಿದೆ.

ಕಳೆದ 5 ವರ್ಷಗಳಿಗೂ ಹೆಚ್ಚಿನ ಅವಧಿಯಲ್ಲಿ, ವಿಶ್ವಬ್ಯಾಂಕ್ ಹೆಣ್ಣುಮಕ್ಕಳ ಶಿಕ್ಷಣ, ಆರೋಗ್ಯ, ಉದ್ಯೋಗ, ಭೂಮಿ, ಸಾಲ ಸೌಲಭ್ಯ, ಕೃಷಿ ಸೇವೆ ಮೂಲ ಸೌಕರ್ಯ ಮತ್ತಿತರ ಉದ್ದೇಶಗಳಿಗೆ 65 ಶತಕೋಟಿ ಡಾಲರ್‌ಗಳಷ್ಟು (್ಙ 2,92,500 ಕೋಟಿ) ಮೊತ್ತ ವೆಚ್ಚ ಮಾಡಿದೆ. ಕಳೆದ 25 ವರ್ಷಗಳಲ್ಲಿ ಶಿಕ್ಷಣ, ಆರೋಗ್ಯ ಮತ್ತು ಕಾರ್ಮಿಕರ ಮಾರುಕಟ್ಟೆಯಲ್ಲಿ  ಸ್ತ್ರೀ- ಪುರುಷರ ಲಿಂಗ ಅಸಮಾನತೆ ದೂರ ಮಾಡುವಲ್ಲಿ ಸಾಕಷ್ಟು ಪ್ರಗತಿ ಸಾಧಿಸಲಾಗಿದೆ. ಬಹುತೇಕ ದೇಶಗಳಲ್ಲಿ ಬಾಲಕ ಮತ್ತು ಬಾಲಕಿಯರ ಪ್ರಾಥಮಿಕ ಶಿಕ್ಷಣದಲ್ಲಿ ಲಿಂಗ ಅಸಮಾನತೆ ಸಂಪೂರ್ಣವಾಗಿ ದೂರವಾಗಿದೆ. ಮಾಧ್ಯಮಿಕ ಶಾಲಾಹಂತದಲ್ಲಿ ಮಾತ್ರ  ನಿಧಾನವಾಗಿ ಈ ಅಂತರ ತಗ್ಗುತ್ತಿದೆ.

ಆರ್ಥಿಕ ಅಭಿವೃದ್ಧಿ ಮತ್ತು ಜಾಗತೀಕರಣದ ಲಾಭಗಳನ್ನು ಸ್ತ್ರೀ ಹಾಗೂ ಪುರುಷರ ಮಧ್ಯೆ ಸಮಾನವಾಗಿ  ಹಂಚಿದರೆ ಮಾತ್ರ ಅಭಿವೃದ್ಧಿಯ ಪ್ರಮುಖ ಗುರಿಗಳನ್ನು ತಲುಪಲು ಸಾಧ್ಯ ಎಂದೂ ಬ್ಯಾಂಕ್ ಅಭಿಪ್ರಾಯಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT