ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಟಿಐ ತಿಳಿಯಿರಿ ಒಂದಿಷ್ಟು...

Last Updated 7 ಜನವರಿ 2012, 19:30 IST
ಅಕ್ಷರ ಗಾತ್ರ

ಆರ್‌ಟಿಐ ಎಂದರೇನು? ಅದು ಯಾವಾಗ ಜಾರಿಗೆ ಬಂದಿತು?
ಆರ್‌ಟಿಐ ಎಂದರೆ ಮಾಹಿತಿ ಹಕ್ಕು ಕಾಯ್ದೆ. ಇಂಗ್ಲಿಷ್‌ನಲ್ಲಿ `ರೈಟ್ ಟು ಇನ್ಫರ್ಮೇಷನ್ ಆಕ್ಟ್~ ಎಂಬುದರ ಸಂಕ್ಷಿಪ್ತ ರೂಪ. ಕೇಂದ್ರ ಸರ್ಕಾರವು 2005, ಅಕ್ಟೋಬರ್ 12ರಂದು ಈ ಕಾಯ್ದೆಯನ್ನು ಜಾರಿಗೆ ತಂದಿತು. ಅಷ್ಟು ಹೊತ್ತಿಗೆ ಮಹಾರಾಷ್ಟ್ರ (2002) ಸೇರಿದಂತೆ ಒಂಬತ್ತು ರಾಜ್ಯ ಸರ್ಕಾರಗಳು ಈ ಕಾಯ್ದೆಯನ್ನು ಯಶಸ್ವಿಯಾಗಿ ಜಾರಿಗೆ ತಂದಿದ್ದವು.

ಕಾಯ್ದೆಯಲ್ಲಿ ಯಾವ್ಯಾವ ಹಕ್ಕಿಗೆ ಅವಕಾಶ ಸಿಕ್ಕಿತು?
ಯಾವುದೇ ನಾಗರಿಕ ಸರ್ಕಾರದ ಆಡಳಿತ ಕ್ರಮದ ಬಗ್ಗೆ ಮಾಹಿತಿ ಪಡೆಯಲು, ಪ್ರಶ್ನಿಸಲು ಈ ಕಾಯ್ದೆ ಅವಕಾಶ ನೀಡುತ್ತದೆ. ಉದಾಹರಣೆ, ನಿಮ್ಮ ಮನೆ ಎದುರಿನ ರಸ್ತೆಯಲ್ಲಿ ಗುಂಡಿ ಬಿದ್ದಿದ್ದರೆ ಅದರ ಬಗ್ಗೆ ಸರ್ಕಾರ ಏನಾದರೂ ಕ್ರಮ ಕೈಗೊಂಡಿದೆಯೇ ಎಂಬ ವಿವರವನ್ನು ಕೇಳಿ ಪಡೆಯಬಹುದು. ಅದಕ್ಕಾಗಿ ಸಂಬಂಧಪಟ್ಟ ಇಲಾಖೆಗೆ ಅರ್ಜಿ ಹಾಕಬೇಕು.

ಅರ್ಜಿ ಹಾಕಿದಾಗ, ಯಾರು ಉತ್ತರಿಸುತ್ತಾರೆ?
ಸಾರ್ವಜನಿಕ ಮಾಹಿತಿ ಅಧಿಕಾರಿಯಿಂದ (ಪಿಐಓ) ಅರ್ಜಿದಾರರಿಗೆ ಮಾಹಿತಿ ದೊರೆಯುತ್ತದೆ. ಅರ್ಜಿದಾರರು ಯಾವ ಬಗ್ಗೆ ಮಾಹಿತಿ ಕೇಳುತ್ತಿದ್ದಾರೆಂಬುದನ್ನು ಪರಿಗಣಿಸಿ, ಸಂಬಂಧಪಟ್ಟವರಿಂದ ಅಗತ್ಯ ದಾಖಲೆಗಳನ್ನು ಒದಗಿಸುವುದು ಅವರ ಕರ್ತವ್ಯ. ಸಹಾಯಕ ಪಿಐಓಗಳು ಕೂಡ ಕರ್ತವ್ಯ ನಿರ್ವಹಿಸುತ್ತಿದ್ದು, ಅವರೂ ಅರ್ಜಿದಾರರ ಅಗತ್ಯ ಪೂರೈಸುವಲ್ಲಿ ಸಹಕರಿಸಬೇಕು. ಅರ್ಜಿದಾರರು ತಾವು ಮಾಹಿತಿ ಕೋರಿರುವ ಪ್ರಕ್ರಿಯೆಯು ಯಾವ ಹಂತದಲ್ಲಿದೆ ಎಂಬುದನ್ನು `ಆನ್‌ಲೈನ್~ನಲ್ಲೇ ನೋಡಬಹುದು.

ನಾಗರಿಕರು ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು?
ಲಭ್ಯವಿರುವ ನಿರ್ದಿಷ್ಟ ಮಾದರಿಯಲ್ಲಿ ಅರ್ಜಿಗಳನ್ನು ಸಂಬಂಧಪಟ್ಟ ಪಿಐಓಗಳಿಗೆ ಖುದ್ದಾಗಿ ಕೊಡಬಹುದು ಅಥವಾ ಅಂಚೆ ಮೂಲಕ ಕಳುಹಿಸಬಹುದು.

ಕಾಯ್ದೆ ವ್ಯಾಪ್ತಿಗೆ ಯಾರ‌್ಯಾರು ಬರುತ್ತಾರೆ?
ಜಮ್ಮು ಮತ್ತು ಕಾಶ್ಮೀರ ಹೊರತುಪಡಿಸಿ ಭಾರತದ ಮಿಕ್ಕೆಲ್ಲಾ ರಾಜ್ಯಗಳಲ್ಲಿ ಆರ್‌ಟಿಐ ಯಶಸ್ವಿಯಾಗಿ ಜಾರಿಗೆ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT