ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಶ್ರಯ, ಆರಾಧನಾ ಶಾಶ್ವತ

Last Updated 20 ಫೆಬ್ರುವರಿ 2012, 9:35 IST
ಅಕ್ಷರ ಗಾತ್ರ

ಕಡೂರು: ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರು ಮುಖ್ಯಮಂತ್ರಿ ಯಾಗಿದ್ದ ಅವಧಿಯಲ್ಲಿ ಜಾರಿಗೆ ತಂದ ಅನೇಕ ಯೋಜನೆಗಳಾದ ಆಶ್ರಯ, ಆರಾಧನಾ ಯೋಜನೆಗಳು ಇಂದಿಗೂ ಬಡವರ ಮನದಲ್ಲಿ ಶಾಶ್ವತವಾಗಿ ಬೇರೂರಿವೆ ಎಂದು ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು. 

 ತಾಲ್ಲೂಕು ಆರ್ಯ ಈಡಿಗ ಸಂಘ ಭಾನುವಾರ ಶಂಕರ ಮಠದಲ್ಲಿ  ಏರ್ಪಡಿಸಿದ್ದ ಎಸ್. ಬಂಗಾರಪ್ಪ  ಶ್ರದ್ಧಾಂ ಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದೇವರಾಜು ಅರಸ್ ನಂತರ ಹಿಂದು ಳಿದ ವರ್ಗಗಳ ಅಭಿವೃದ್ಧಿಗೆ ಶ್ರಮಿಸಿದವರು. ಅವರ ಜ್ಞಾನ ಪ್ರತಿಭೆ ಅಪಾರ ವಾಗಿದ್ದು, ಆದರ್ಶ ವ್ಯಕ್ತಿಯಾಗಿ ಬಾಳಿದ ಅವರು ಬದುಕಿನಲ್ಲಿ ಹೋರಾಟ ಮನೋ ಭಾವವನ್ನು ಬೆಳೆಸಿಕೊಂಡು ರಾಜ್ಯದಲ್ಲಿ ಅನೇಕ ಪಕ್ಷಗಳನ್ನು ಕಟ್ಟಿದಂತಹ ರಾಜಕಾರಣಿ ಎಂದರು.

ಶಾಸಕ ಡಾ.ವೈ.ಸಿ.ವಿಶ್ವನಾಥ್ ಮಾತನಾಡಿ, ರಾಜ್ಯದ ಜನರ ನೋವಿಗೆ ಸ್ಪಂದಿಸುತ್ತಿದ್ದ ಜನ ನಾಯಕನಾಗಿ, ಅಲ್ಪ ಸಂಖ್ಯೆಯಲ್ಲಿರುವ ಸಮುದಾಯದಲ್ಲಿ ಹುಟ್ಟಿ ಅಪಾರ ಕೀರ್ತಿ ಪಡೆದು ಮುಖ್ಯಮಂತ್ರಿಯಾಗಿ ಅವರು ನಾಡಿಗೆ ನೀಡಿದ ಅನೇಕ ಶಾಶ್ವತ ಯೋಜನೆಗಳನ್ನು ಜನರು ಇನ್ನೂ ಗುರುತಿಸುತ್ತಿದ್ದು, ಗ್ರಾಮೀಣ ಕೃಪಾಂಕದಿಂದ ಗ್ರಾಮೀಣ ಪ್ರದೇಶದ ಯುವಕರಿಗೆ ಉದ್ಯೋಗಕ್ಕೆ ದಾರಿ ದೀಪವಾಗಿದ್ದರು ಎಂದರು. 

  ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ಮಾತನಾಡಿ, ಎಲ್ಲಾ ಸಮುದಾಯದವರನ್ನು ಪ್ರೀತಿ ಯಿಂದ ಕಾಣುವುದನ್ನು ಅವರಿಂದ ನಾನು ಕಲಿತೆ.  ನನ್ನಂತವರಿಗೆ ಆದರ್ಶ ವಾಗಿದ್ದಾರೆ ಗೋಪಾಲಕೃಷ್ಣರವರು ನನ್ನ ಕುಟುಂಬದ ಸದಸ್ಯರಿದ್ದಂತೆ ಅನೇಕ ಬಾರಿ ನನಗೆ ಮಾರ್ಗದರ್ಶನ ನೀಡಿದ್ದಾರೆ.
 
ಬಂಗಾರಪ್ಪ ಅವರ ಆದರ್ಶಗಳನ್ನು  ಮೈಗೂಡಿಸಿಕೊಂಡು ಅವರು ಮಾಡದೆ ಹೋದ ಅನೇಕ ಕಾರ್ಯಗಳನ್ನು ಮುಂದಿನ ನನ್ನ ರಾಜಕೀಯ ಪರ್ವದಲ್ಲಿ ಮಾಡಲು ಉತ್ಸುಕನಾಗ್ದ್ದಿದೇನೆ ಎಂದರು. ವಿಧಾನ ಪರಿಷತ್ ಸದಸ್ಯ ವೈ.ಎಸ್.ದತ್ತ ಬಂಗಾರಪ್ಪನವರ ಅನೇಕ ಹೋರಾಟಗಳನ್ನು ಸಭೆಯಲ್ಲಿ ನೆನಪಿಸಿಕೊಟ್ಟರು. 

  ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕಾಂಗ್ರೆಸ್ ಮುಖಂಡ ಕೆ.ಎಂ.ಕೆಂಪರಾಜು, ಪುರಸಭೆ ಸದಸ್ಯ ಬಷೀರ್‌ಸಾಬ್,ಶೇಖರ್ ಪೂಜಾರಿ ಮತ್ತು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಈಡಿಗ ಸಮಾಜದ ಅಧ್ಯಕ್ಷ ಜಿ.ಆರ್.ಚಂದ್ರ ಶೇಖರ್, ಉಪಾನ್ಯಾಸಕ ಎಂ.ಓ.ಮಮತೇಶ್, ಜಿ.ಸುಬ್ಬಯ್ಯ, ಡಿ.ನಾಗ ರಾಜಪ್ಪ, ಟಿ.ಎಸ್.ಶ್ರೀನಿವಾಸ್,ಜಯಮೂರ್ತಿ, ಭೀಮಪ್ಪ, ಮೇಲು ರಾಜು ಮತ್ತು ಪುರಸಭೆ ಸದಸ್ಯರಾದ ಕೆ.ಜಿ.ಲೋಕೇಶ್,ಲಕ್ಕಣ್ಣ, ಮಂಜುಳಮ್ಮ ಹಾಗೂ ಗ್ರಾಮೀಣ ಪ್ರದೇಶಗಳಿಂದ ಬಂದಿದ್ದ ನೂರಾರು ಅಭಿಮಾನಿಗಳು ಪಾಲ್ಗೊಂಡಿದ್ದರು.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT