ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸರೆ ಮನೆ ನಿರ್ಮಾಣ ಶೀಘ್ರ ಪೂರ್ಣ

Last Updated 2 ಜೂನ್ 2011, 6:25 IST
ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲೆಯಲ್ಲಿ ನೆರೆ ಸಂತ್ರಸ್ತರಿಗಾಗಿ ಆಸರೆ ಯೋಜನೆ ಅಡಿಯಲ್ಲಿ ಆರಂಭವಾದ 1,146 ಮನೆಗಳ ಪೈಕಿ 636 ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ.

ಪ್ರಕೃತಿ ವಿಕೋಪದಿಂದಾಗಿ ವಿವಿಧ ತಾಲ್ಲೂಕುಗಳಲ್ಲಿ ಸ್ಥಳಾಂತರಗೊಂಡ ಗ್ರಾಮದ ಜನರಿಗಾಗಿ 1,376 ಮನೆ ನಿರ್ಮಿಸಬೇಕಿದೆ. ವಿವಿಧೆಡೆ ಮನೆ ನಿರ್ಮಾಣ ವಿವಿಧ ಹಂತಗಳಲ್ಲಿ ನಡೆಯುತ್ತಿವೆ.

ತಾಲ್ಲೂಕುವಾರು ವಿವರ: ಹರಪನಹಳ್ಳಿ ತಾಲ್ಲೂಕಿನ ಗರ್ಭಗುಡಿಯಲ್ಲಿ 170 ಮನೆಗಳನ್ನು ನಿರ್ಮಿಸಬೇಕಿದೆ. 115 ಮನೆಗಳ ನಿರ್ಮಾಣ ಆರಂಭವಾಗಿದೆ. 105 ಮನೆಗಳಿಗೆ ಗೋಡೆ ನಿರ್ಮಾಣದವರೆಗೆ ಕಾಮಗಾರಿ ನಡೆದಿದೆ. ಯಾವುದೇ ಮನೆಯ ಕಾಮಗಾರಿ ಪೂರ್ಣಗೊಂಡಿಲ್ಲ.

ಹಲುವಾಗಲು ಗ್ರಾಮದಲ್ಲಿ ಒಟ್ಟು 250 ಮನೆಗಳ ನಿರ್ಮಾಣ ಕಾಮಗಾರಿ ಆರಂಭಗೊಂಡಿದ್ದು, 170 ಕಾಮಗಾರಿಗಳು ಮುಕ್ತಾಯಗೊಂಡಿವೆ. ಈ ಎರಡೂ ಗ್ರಾಮಗಳಿಗೆ ದಾವಣಗೆರೆಯ ಕೆಆರ್‌ಐಡಿ ಲಿ. ಸಂಸ್ಥೆ ಮನೆ ನಿರ್ಮಾಣಕ್ಕೆ ಕೊಡುಗೆ ನೀಡಿದೆ.

ಹರಪನಹಳ್ಳಿ ಪಟ್ಟಣದಲ್ಲಿ ಗೋವಿಂದ ಪ್ರಸಾದ್ ಹ್ಯುಮಾನಿಟೇರಿಯನ್ ಫೌಂಡೇಷನ್ ಬೆಂಗಳೂರು ವತಿಯಿಂದ ಒಟ್ಟು 252 ಮನೆಗಳನ್ನು ನಿರ್ಮಿಸಲಾಗುತ್ತಿದ್ದು, 105 ಮನೆಗಳ ಕಾಮಗಾರಿ ಪೂರ್ಣಗೊಂಡಿದೆ.
ಪಿಆರ್‌ಇಡಿಯ ಕಾರ್ಯ ನಿರ್ವಾಹಕ ಎಂಜಿನಿಯರ್ ಕೊಡುಗೆಯಾಗಿ ನೀಡಿದ 288 ಮನೆಗಳ ನಿರ್ಮಾಣ ಕಾಮಗಾರಿ ಆರಂಭವಾಗಿದ್ದು, 135 ಮನೆಗಳು ಪೂರ್ಣಗೊಂಡಿವೆ. ಒಟ್ಟಾರೆಯಾಗಿ ಹರಪನಹಳ್ಳಿ ಪಟ್ಟಣಕ್ಕೆ ನಿರ್ಮಾಣವಾಗಬೇಕಿದ್ದ 540 ಮನೆಗಳ ಪೈಕಿ 240 ಮನೆಗಳ ನಿರ್ಮಾಣ ಪೂರ್ಣಗೊಂಡಿವೆ. ಇಲ್ಲಿನ ಹಳೇ ಓಬಳಾಪುರದಲ್ಲಿ ಕೆಆರ್‌ಐಡಿ ಲಿ. ಸಂಸ್ಥೆ ಕೊಡುಗೆಯಾಗಿ ನೀಡಿದ ಎಲ್ಲ 60 ಮನೆಗಳ ಸಂಪೂರ್ಣ ಕಾಮಗಾರಿ ಮುಗಿದಿದೆ.

ಹರಿಹರ ತಾಲ್ಲೂಕಿನ ಪಾಳ್ಯದಲ್ಲಿ ಎಲ್ಲ 111 ಮನೆಗಳ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿವೆ. ದೀಟೂರು ಗ್ರಾಮದಲ್ಲಿ 160 ಮನೆಗಳು ನಿರ್ಮಾಣವಾಗಬೇಕಿದ್ದು, ಯಾವುದೇ ಕಾಮಗಾರಿ ಆರಂಭವಾಗಿಲ್ಲ. ಗೋವಿನಹಾಳು ಗ್ರಾಮದಲ್ಲಿ 25 ಮನೆಗಳ ನಿರ್ಮಾಣ ಆಗಬೇಕಿದ್ದು, ಕೇವಲ 10 ಮಾತ್ರ ಪೂರ್ಣಗೊಂಡಿವೆ.
ಹಲಸಬಾಳು ಗ್ರಾಮದಲ್ಲಿ ನಿರ್ಮಾಣವಾಗಬೇಕಾದ 15 ಮನೆಗಳ ಕಾಮಗಾರಿ ಆರಂಭವಾಗಿಲ್ಲ.  ಒಟ್ಟಾರೆ ಹರಿಹರ ತಾಲ್ಲೂಕಿನಲ್ಲಿ 311 ಮನೆಗಳು ನಿರ್ಮಾಣವಾಗಬೇಕಿದೆ. 136 ಮನೆ ನಿರ್ಮಾಣ ಕಾಮಗಾರಿ ಆರಂಭವಾಗಿದೆ. 121 ಪೂರ್ಣಗೊಂಡಿವೆ.

ಚನ್ನಗಿರಿ ತಾಲ್ಲೂಕಿನ ಕೆರೆ ಬಿಳಚಿ ಗ್ರಾಮದಲ್ಲಿ ಎಲ್ಲ 45 ಮನೆಗಳ ನಿರ್ಮಾಣ ಪೂರ್ಣಗೊಂಡಿವೆ. ಹರಿಹರ ಮತ್ತು ಚನ್ನಗಿರಿ ತಾಲ್ಲೂಕಿಗೆ ವಿಪ್ರೋ ಮತ್ತು ಕೆಆರ್‌ಐಡಿ ಸಂಸ್ಥೆಗಳು ಕೊಡುಗೆ ನೀಡಿವೆ.

ಒಟ್ಟಾರೆ ಜಿಲ್ಲೆಯಲ್ಲಿ 1376 ಮನೆಗಳು ನಿರ್ಮಾಣವಾಗಬೇಕಿದ್ದು, 160 ಮನೆಗಳಿಗೆ ತಳಪಾಯ ಹಾಕಲಾಗಿದೆ. 234 ಮನೆಗಳಿಗೆ ಸೂರು ನಿರ್ಮಾಣ ಬಾಕಿಯಿದೆ ಎಂದು ಜಿಲ್ಲಾಧಿಕಾರಿಪಿ.ಎಸ್. ವಸ್ತ್ರದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT