ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ತಿ ಘೋಷಿಸದ ಪಂಚಾಯ್ತಿ ಸದಸ್ಯರ ಅನರ್ಹತೆ ಇಲ್ಲ

Last Updated 4 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಸುವರ್ಣಸೌಧ (ಬೆಳಗಾವಿ): ಆಸ್ತಿ ಘೋಷಣೆ ಮಾಡದ ಪಂಚಾಯ್ತಿ ಸದ ಸ್ಯರ ಸದಸ್ಯತ್ವವನ್ನು ಅನರ್ಹಗೊಳಿ­ಸ ದಂತೆ ತಿದ್ದುಪಡಿ ಮಾಡಲಾದ ಕರ್ನಾ ಟಕ ಪಂಚಾಯತ್ ರಾಜ್ ಮಸೂದೆಗೆ ವಿಧಾನಸಭೆ ಬುಧವಾರ ಒಪ್ಪಿಗೆ ನೀಡಿದೆ. ಇದರಿಂದ ಜಿಲ್ಲಾ, ತಾಲ್ಲೂಕು ಮತ್ತು ಗ್ರಾಮ ಪಂಚಾಯ್ತಿ ಸದಸ್ಯರು ಅಧಿಕಾರ ಸ್ವೀಕರಿಸಿದ ಮೂರು ತಿಂಗ­ಳೊ­ಳಗೆ ತಮ್ಮ ಮತ್ತು ಕುಟುಂಬದ ಆಸ್ತಿ ಘೋಷಣೆ ಮಾಡದಿದ್ದರೂ ಸದಸ್ಯತ್ವ  ರದ್ದಾಗು ವುದಿಲ್ಲ. ಆದರೆ ಅವರು ಆಸ್ತಿ ಘೋಷಣೆ ಮಾಡು­ವುದು ಕಡ್ಡಾಯ.

ಮುಂದೆ ಅವರು ಪ್ರತಿ ವರ್ಷವೂ ಆಸ್ತಿ ಘೋಷಣೆ ಮಾಡಬೇಕು. ಇಲ್ಲ­ದಿದ್ದರೆ ಚುನಾವಣಾ ಆಯೋಗ ಅವ­ರಿಗೆ ನೋಟಿಸ್ ನೀಡಿ ಒಂದು ತಿಂಗಳು ಅವ ಕಾಶ ಕೊಡಬೇಕು. ಆಗಲೂ ಘೋಷಣೆ ಮಾಡದಿದ್ದರೆ ಅದನ್ನು ದುರ್ನಡತೆ ಎಂದು ಪರಿಗಣಿಸಿ ಕ್ರಮಕ್ಕೆ ಸರ್ಕಾರಕ್ಕೆ ಶಿಫಾರಸು ಮಾಡ­ಬಹುದು.

ಯಾವುದೇ ಸದಸ್ಯ ಆಸ್ತಿ ಘೋಷಣೆ ಮಾಡಿದ ನಂತರ ಮತ್ತಷ್ಟು ಆಸ್ತಿಯನ್ನು ಗಳಿಸಿದ್ದರೆ ಅಥವಾ ಮಾರಾಟ ಮಾಡಿ ದ್ದರೆ ಅದನ್ನೂ ಒಂದು ತಿಂಗಳೊಳಗೆ ಘೋಷಿಸಬೇಕು. ಈ ಮಸೂದೆ ಯಿಂದಾಗಿ ಆಸ್ತಿ ಘೊಷಣೆ ಮಾಡಿಲ್ಲ ಎಂದು ವಿವಿಧ ನ್ಯಾಯಾ­ಲಯಗಳಲ್ಲಿ ವಿಚಾರಣೆ ಎದು­ರಿ­ಸುತ್ತಿರುವ ಸದಸ್ಯರು ಸದಸ್ಯತ್ವ ದಿಂದ ಅನರ್ಹಗೊಳ್ಳುವ ಭೀತಿಯಿಂದ ಪಾರಾಗಲಿದ್ದಾರೆ.

ಇನ್ನೂ 3 ಮಸೂದೆಗಳ ಅಂಗೀಕಾರ: ಇದಲ್ಲದೆ ಕರ್ನಾಟಕ ಕಲ್ಲುಪುಡಿ ಮಾಡುವ ಘಟಕಗಳ (ಕ್ರಷರ್) ನಿಯಂತ್ರಣ ಮಸೂದೆ, ಕೃಷಿ ವಿಜ್ಞಾನ­ಗಳ ವಿಶ್ವವಿದ್ಯಾಲಯಗಳ ತಿದ್ದುಪಡಿ ಮಸೂದೆ, ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ಮತ್ತು ಕೆಲವು ಇತರ ಕಾನೂನುಗಳ ತಿದ್ದುಪಡಿ ಮಸೂದೆ­ಗಳೂ ಅಂಗೀಕಾರವಾದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT