ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಪತ್ರೆ ಆವರಣದಲ್ಲಿ ಜಲ್ಲಿ ಮಿಶ್ರಣ!

Last Updated 18 ಜನವರಿ 2012, 5:30 IST
ಅಕ್ಷರ ಗಾತ್ರ

ಹರಿಹರ: ನಗರದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಖಾಸಗಿ ವ್ಯಕ್ತಿಗಳು ಜಲ್ಲಿ ಹಾಗೂ ಜಲ್ಲಿ ಪುಡಿ ಮಿಶ್ರಣ ಹಾಗೂ ಶೇಖರಣೆಗೆ ಬಳಕೆಸುತ್ತಿದ್ದಾರೆ. ಈ ಬಗ್ಗೆ ಲಿಖಿತ ದೂರು ಸಲ್ಲಿಸಿದರೂ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಸಾರ್ವಜನಿಕರಲ್ಲಿ ಅನುಮಾನ ಮೂಡಿಸಿದೆ.

ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಶ್ರೀದೇವಿ ಅವರನ್ನು ಸಂಪರ್ಕಿಸಿದಾಗ ಕಳೆದ 20-25 ದಿನಗಳಿಂದ ಸಾರ್ವಜನಿಕ ಆಸ್ಪತ್ರೆ ಹಿಂಭಾಗದಲ್ಲಿ ಜಲ್ಲಿ ಹಾಗೂ ಜಲ್ಲಿ ಪುಡಿ ಮಿಶ್ರಣ ಕಾರ್ಯ ಟ್ರ್ಯಾಕ್ಟರ್ ಹಾಗೂ ಜೆಸಿಬಿ ಯಂತ್ರಗಳನ್ನು ಬಳಸಿ ಅವ್ಯಾಹತವಾಗಿ ನಡೆಸುತ್ತಿದ್ದಾರೆ. ಈ ಬಗ್ಗೆ ಅಲ್ಲಿ ಕೆಲಸ ಮಾಡುವವರನ್ನು ಕರೆದು ಮೌಖಿಕವಾಗಿ ತಿಳಿಹೇಳಿದ್ದೇವೆ. ಅವರು ನಮ್ಮ ಮಾತಿಗೆ ಬೆಲೆ ನೀಡದೇ ತಮ್ಮ ಮೊಂಡುತನ ಮುಂದುವರಿಸಿದ್ದಾರೆ. ಈ ಬಗ್ಗೆ ನಗರ ಪೊಲೀಸ್ ಠಾಣೆಗೆ ಲಿಖಿತ ದೂರನ್ನು ನೀಡಿದ್ದೇನೆ.

ಆದರೂ, ಸ್ಥಿತಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಜಲ್ಲಿ ಪುಡಿಯ ದೂಳು ಆಸ್ಪತ್ರೆಯಲ್ಲಿ ಹಬ್ಬಿದೆ. ಇದರಿಂದ ಒಳರೋಗಿಗಳಿಗೆ ತೊಂದರೆಯಾಗುತ್ತಿದೆ. ಆಸ್ಪತ್ರೆಗೆ ಕಾಂಪೌಂಡ್ ಗೋಡೆ ಇಲ್ಲದೇ ಇರುವುದೇ ಈ ಎಲ್ಲಾ ಸಮಸ್ಯೆಗಳಿಗೆ ಕಾರಣವಾಗಿದೆ. ಅಧಿಕಾರಿಗಳು ನಮಗೆ ಸ್ಪಂದಿಸದಿದ್ದರೆ ನಾವೇನು ಮಾಡಲು ಸಾಧ್ಯ? ಎಂದು ತಮ್ಮ ಅಳಲನ್ನು ತೋಡಿಕೊಂಡರು.

ಜಿ.ಪಂ. ಬಿಆರ್‌ಜಿಎಫ್ ಯೋಜನೆ ಅಡಿಯಲ್ಲಿ ಕಾಂಪೌಂಡ್ ನಿರ್ಮಾಣಕ್ಕಾಗಿ ್ಙ  9 ಲಕ್ಷ ಅನುದಾನ ಬಿಡುಗಡೆ ಆಗಿದೆ. ಟೆಂಡರ್ ಅನುಮೋದನೆಗೆ ಜಿ.ಪಂ. ಕಾರ್ಯಾಲಯಕ್ಕೆ ಕಳುಹಿಸಲಾಗಿದೆ. ಇದುವರೆಗೆ ಯಾವುದೇ ಉತ್ತರ ಬಂದಿಲ್ಲ ಎಂಬುದು ನಗರಸಭೆ ಎಇಇ ಮಹಮದ್ ಗೌಸ್ ಅವರ ಹೇಳಿಕೆ.

ಸಾರ್ವಜನಿಕರ ಆಸ್ಪತ್ರೆಗೆ ಸುಮಾರು 20 ಎಕರೆಯಷ್ಟು ಜಾಗವಿದೆ. ಇದರಲ್ಲಿ ಆಸ್ಪತ್ರೆ ಹಾಗೂ ಸಿಬ್ಬಂದಿ ವಸತಿ ಗೃಹಗಳಿಗೆ ಸುಮಾರು 4 ಎಕರೆ ಜಾಗ ಬಳಕೆಯಾಗಿದೆ. ಉಳಿದ ಸುಮಾರು 16 ಎಕರೆ ಜಾಗದಲ್ಲಿ ಜಾಲಿ ಹಾಗೂ ಇತರೆ ಅನುಪಯುಕ್ತ ಗಿಡಗಳು ಬೆಳೆದು ಕೊಂಪೆಯಾಗಿದೆ.

ಸುಮಾರು ಎರಡು ದಶಕಗಳಿಂದ ಆಸ್ಪತ್ರೆ ಆವರಣಕ್ಕೆ ಕಾಂಪೌಂಡ್ ಕಟ್ಟಬೇಕು ಎಂಬುದು ಸಾರ್ವಜನಿಕ ಬೇಡಿಕೆ. ತಮಗೆ ಸಂಬಂಧಿಸಿ ಜಾಗದ ಹದ್ದುಬಸ್ತು ಮಾಡಿಕೊಳ್ಳಬೇಕಾದುದು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳ ಕತರ್ರ್ವ್ಯವೂ ಹೌದು. 20 ವರ್ಷಗಳಿಂದ ಕಾಂಪೌಂಡ್ ನಿರ್ಮಿಸಲು ಆಗದೇ ಇರುವುದಕ್ಕೆ ಕಾರಣಗಳೇನು ಎಂಬುದೇ ಚಿದಂಬರ ರಹಸ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT