ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಹಾರ ಭದ್ರತಾ ಮಸೂದೆಗೆ ವಿಶ್ವ ವಾಣಿಜ್ಯ ಸಂಘಟನೆ ಒಪ್ಪಿಗೆ

Last Updated 7 ಡಿಸೆಂಬರ್ 2013, 13:27 IST
ಅಕ್ಷರ ಗಾತ್ರ

ಬಾಲಿ(ಪಿಟಿಐ): ಭಾರತ ಸೇರಿದಂತೆ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ಪೂರಕವಾಗಬಲ್ಲ ವಿಶ್ವ ಆಹಾರ ಭದ್ರತಾ ಮಸೂದೆ ಹಾಗೂ ವ್ಯಾಪಾರಕ್ಕೆ ಸೌಲಭ್ಯ ಕಲ್ಪಿಸುವ ಐತಿಹಾಸಿಕ ‘ಬಾಲಿ ಪ್ಯಾಕೇಜ್’ಗೆ ಶನಿವಾರ ವಿಶ್ವ ವಾಣಿಜ್ಯ ಸಂಘಟನೆ (ಡಬ್ಲ್ಯೂಟಿಓ) ಒಪ್ಪಿಗೆ ನೀಡಿದೆ.

ಬಾಲಿಯಲ್ಲಿ ನಡೆದ ಸಂಘಟನೆಯ 9ನೇ ಜಾಗತಿಕ ಸಭೆಯಲ್ಲಿ ಕ್ಯೂಬಾ ಸೇರಿದಂತೆ ಲ್ಯಾಟಿನ್ ಅಮೆರಿಕದ ಮೂರು ರಾಷ್ಟ್ರಗಳು ಗದ್ದಲ ಎಬ್ಬಿಸಿದ ಹಿನ್ನೆಲೆಯಲ್ಲಿ  ಆಹಾರ ಭದ್ರತೆ ಮಸೂದೆಗೆ  ಬೊಲಿವಿಯಾ, ನಿಕರಾಗುವ ಹಾಗೂ ವೆನಿಜುವೆಲ ರಾಷ್ಟ್ರಗಳ ವ್ಯಾಪಾರಕ್ಕೆ ಒಪ್ಪಂದದ ಅಂಶವನ್ನು ಸೇರ್ಪಡೆಗೊಳಿಸುವ ಮೂಲಕ ಡಬ್ಲ್ಯುಟಿಒ ‘ಪ್ಯಾಕೇಜ್’ಗೆ ಒಪ್ಪಿಗೆ ಸೂಚಿಸಿತು.

‘ಸಭೆಯಲ್ಲಿ ‘ಬಾಲಿ ಪ್ಯಾಕೇಜ್’ಗೆ ಅನುಮೋದನೆ ನೀಡುರುವುದು ಐತಿಹಾಸಿಕ ಸಾಧನೆ. ಆದರೆ, ಇದು ಇನ್ನೂ ಪೂರ್ಣವಲ್ಲ’ ಎಂದು ಇಂಡೊನೇಷ್ಯಾದ ವಾಣಿಜ್ಯ ಮಂತ್ರಿ ಗೀತಾ ವಿರ್ಜವಾನ್ ಅಭಿಪ್ರಾಯಪಟ್ಟಿದ್ದಾರೆ.

‘ಈ ಮಹತ್ವದ ಆಹಾರ ಭದ್ರತಾ ಮಸೂದೆಗೆ ಒಪ್ಪಿಗೆ ನೀಡಿರುವುದರಿಂದ ಜಾಗತಿಕವಾಗಿ ಕೋಟ್ಯಂತರ ಬಡ, ಸಾಮಾನ್ಯ ಜನರಿಗೆ ಅನುಕೂಲ ಆಗಲಿದೆ’ ಎಂದು ಅವರು ಹೇಳಿದರು

‘ಆಹಾರ ಭದ್ರತಾ ಮಸೂದೆಗೆ ಒಪ್ಪಿಗೆ ಸೂಚಿಸಿರುವುದು ಭಾತರ ಮಟ್ಟಿಗೆ ಐತಿಹಾಸಿಕವಾದುದು’ ಎಂದಿರುವ ವಾಣಿಜ್ಯ ಮತ್ತು ಕೈಗಾರಿಕ ಸಚಿವ ಆನಂದ್ ಶರ್ಮ, ‘ದೋಹಾ’ ಸುತ್ತಿನ ಮಾತುಕತೆಯಲ್ಲಿ ಭಾರತದ ಮಹತ್ವದ ಪಾತ್ರ ವಹಿಸಿದೆ.  ‘ಬಾಲಿ ಪ್ಯಾಕೇಜ್’ ದೋಹಾ ಸುತ್ತಿನ ಮಾತುಕತೆಗೆ ಪೂರಕವಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT