ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ್ಯಪಲ್ ಜನಕ ಜಾಬ್ಸ್ ಮಾದಕ ದ್ರವ್ಯ ವ್ಯಸನಿ?

Last Updated 10 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಪಿಟಿಐ):  ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಭಾಷ್ಯ ಬರೆದು ಖ್ಯಾತರಾಗಿದ್ದ ಆ್ಯಪಲ್ ಸಹ ಸಂಸ್ಥಾಪಕ ಸ್ಟೀವ್ ಜಾಬ್ಸ್ ಅವರ ಕುರಿತು ಎಫ್‌ಬಿಐ ಕೆಲವೊಂದು ಕುತೂಹಲಕಾರಿ ಮಾಹಿತಿಗಳನ್ನು ಬಿಡುಗಡೆ ಮಾಡಿದೆ.

ಜಾಬ್ಸ್ ಹಿನ್ನೆಲೆಯನ್ನೊಳಗೊಂಡ ದಶಕದಷ್ಟು ಹಳೆಯದಾದ 191 ಪುಟಗಳಷ್ಟು ಸುದೀರ್ಘವಾದ ವರದಿಯನ್ನು ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಎಫ್‌ಬಿಐ ಗುರುವಾರ ಬಿಡುಗಡೆ ಮಾಡಿದೆ. ಈ ವರದಿಯು ಜಾಬ್ಸ್ ಅವರ ನೈತಿಕತೆಯ ಬಗ್ಗೆ ಜನರು ಅನುಮಾನ ಪಡುವಂತೆ ಮಾಡಿದೆ.

 ಜಾಬ್ಸ್ ಮಾದಕ ದ್ರವ್ಯ ವ್ಯಸನಿಯಾಗಿದ್ದರು ಎನ್ನಲಾದ ಅಂಶವನ್ನು ಈ ಮಾಹಿತಿ ಒಳಗೊಂಡಿದೆ. ಅಲ್ಲದೇ ಅವರು ಸತ್ಯವನ್ನು ವಿರೂಪಗೊಳಿಸುತ್ತಿದ್ದರು ಮತ್ತು ತಮ್ಮ ಗುರಿ ಸಾಧನೆಗೆ ಯಾವ ಮಟ್ಟಕ್ಕೆ ಬೇಕಾದರೂ ಇಳಿಯುತ್ತಿದ್ದರು ಎಂಬ ವಿವರಗಳೂ ಈ ವರದಿಯಲ್ಲಿ ಇವೆ.

1991ರಲ್ಲಿ ಅಮೆರಿಕದ ಅಧ್ಯಕ್ಷ ಜಾರ್ಜ್ ಬುಷ್ ಅವರು ಜಾಬ್ಸ್ ಅವರನ್ನು ಅಧ್ಯಕ್ಷರ ತಜ್ಞರ ಮಂಡಳಿಗೆ ನೇಮಕ ಮಾಡಲು ಪರಿಗಣಿಸಿದ್ದ ಸಂದರ್ಭದಲ್ಲಿ ಎಫ್‌ಬಿಐಗೆ ಜಾಬ್ಸ್ ಹಿನ್ನೆಲೆ ತಿಳಿಯುವಂತೆ ಸೂಚಿಸಲಾಗಿತ್ತು.
ಜಾಬ್ಸ್ ಸ್ನೇಹಿತರು, ಸಹೋದ್ಯೋಗಿಗಳು ಹಾಗೂ ಅವರ ನೆರೆಹೊರೆಯವರನ್ನು ಸಂದರ್ಶಿಸಿ, ವ್ಯಾಪಕ ಸಂಶೋಧನೆ ನಡೆಸಿ ಈ ವರದಿಯನ್ನು ತಯಾರಿಸಲಾಗಿದೆ ಎಂದು ಎಫ್‌ಬಿಐ ಅಧಿಕಾರಿಗಳು ತಿಳಿಸಿದ್ದಾರೆ.
ಜಾಬ್ಸ್ ಮೂಲತಃ ಪ್ರಾಮಾಣಿಕ ಮತ್ತು ನಂಬಿಗಸ್ಥ ವ್ಯಕ್ತಿ . ಆದರೆ ಅವರ ವ್ಯಕ್ತಿತ್ವ ತುಂಬ ಸಂಕೀರ್ಣವಾದುದು ಎಂದು ಹೇಳಿದ ವರದಿ, ಅವರ ನೈತಿಕತೆಯ ಬಗ್ಗೆ ಅನುಮಾನ  ವ್ಯಕ್ತಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT