ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಟರ್‌ನೆಟ್‌ನಲ್ಲಿ ಸಿಎಂ ಸದಾ ಲಭ್ಯ

Last Updated 30 ನವೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು ಗೃಹ ಕಚೇರಿ `ಕೃಷ್ಣಾ~ ಮತ್ತು ವಿಧಾನಸೌಧದ ಕಚೇರಿಯಲ್ಲಿರುವಾಗ ಏನು ಮಾಡುತ್ತಿರುತ್ತಾರೆ, ಯಾರನ್ನು ಭೇಟಿ ಮಾಡುತ್ತಾರೆ, ಯಾರೊಂದಿಗೆ ಮಾತುಕತೆ ನಡೆಸುತ್ತಾರೆ ಎಂಬ ವಿವರಗಳನ್ನು ನೇರವಾಗಿ ವೀಕ್ಷಿಸುವ ಸೌಲಭ್ಯಕ್ಕೆ ಬುಧವಾರ ಚಾಲನೆ ನೀಡಲಾಯಿತು.

ನಿರಂತರ ವಿಡಿಯೊ ಸ್ಟ್ರೀಮಿಂಗ್ ಸೌಲಭ್ಯಕ್ಕೆ `ಕೃಷ್ಣಾ~ದಲ್ಲಿ ಚಾಲನೆ ನೀಡಿದ ಸದಾನಂದ ಗೌಡ ಅವರು, `ನಾನು ಗೃಹ ಕಚೇರಿ ಮತ್ತು ವಿಧಾನಸೌಧದ ಕಚೇರಿಯಲ್ಲಿ ಇರುವಾಗ ಏನು ಮಾಡುತ್ತಿರುತ್ತೇನೆ ಎಂಬುದನ್ನು ಸಾರ್ವಜನಿಕರು ನೇರವಾಗಿ ವೀಕ್ಷಿಸಬಹುದು.

ಈ ವಿಡಿಯೊ ತುಣುಕುಗಳನ್ನು ದೂರದರ್ಶನ ವಾಹಿನಿಗಳೂ ಪ್ರಸಾರ ಮಾಡಬಹುದು~ ಎಂದು ಹೇಳಿದರು. ಆಡಳಿತದಲ್ಲಿ ಪಾರದರ್ಶಕತೆ ತರುವ ಆಶಯದಿಂದ ಈ ವ್ಯವಸ್ಥೆ ತರಲಾಗಿದೆ.

ಇದರ ಸಾಧಕ-ಬಾಧಕಗಳನ್ನು ತಿಳಿದುಕೊಂಡು, ಮುಂದಿನ ದಿನಗಳಲ್ಲಿ ಸಚಿವರ ಕಚೇರಿಗಳಿಗೂ ವಿಸ್ತರಿಸಲಾಗುವುದು. ಇದನ್ನು ಇಂಟರ್‌ನೆಟ್ ಸಂಪರ್ಕವಿರುವ ಮೊಬೈಲ್ ಮೂಲಕವೂ ವೀಕ್ಷಿಸಬಹುದು ಎಂದರು.

ಪ್ರಸ್ತುತ `ಕೃಷ್ಣಾ~ ಮತ್ತು ವಿಧಾನಸೌಧದ ಮುಖ್ಯಮಂತ್ರಿಗಳ ಕಚೇರಿಯ ದೃಶ್ಯಗಳನ್ನು ಮಾತ್ರ ವಿಡಿಯೊ ಸ್ಟ್ರೀಮಿಂಗ್ ಮೂಲಕ ವೀಕ್ಷಿಸಬಹುದು. ಮುಂದಿನ ದಿನಗಳಲ್ಲಿ ಅಲ್ಲಿ ನಡೆಯುವ ಮಾತುಕತೆ ಕೇಳುವ ವ್ಯವಸ್ಥೆ ಬರಲಿದೆ ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT